September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕರಾವಳಿ ಹಿಂದುತ್ವದ ಭದ್ರಕೋಟೆ : ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ :ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಜಿಯವರ ನೇತೃತ್ವದ ಎನ್. ಡಿ. ಎ. ಮೈತ್ರಿಕೂಟ ಮೂರನೇ ಬಾರಿಗೆ ಜನಾದೇಶ ಪಡೆದುಕೊಂಡಿದ್ದಕ್ಕೆ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ವಿಜಯಶಾಲಿಗಳಾಗಿರುವುದಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಯಂತ್ರ ದುರುಪಯೋಗಪಡಿಸಿಕೊಂಡು ಅಪವಾದ ಅಪಪ್ರಚಾರಗಳ ನಡುವೆ ನಡೆಸಿದ ಈ ಚುನಾವಣೆಯಲ್ಲಿ ಕರಾವಳಿಯ ಜನತೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಸರಸಗಟಾಗಿ ತಿರಸ್ಕರಿಸಿ ಹಿಂದುತ್ವದ ಭದ್ರಕೋಟೆಯನ್ನು ಪುಡಿಗಟ್ಟಲು ಅಸಾಧ್ಯವೆಂಬ ಸಂದೇಶವನ್ನು ಸ್ಪಷ್ಟವಾಗಿ ನೀಡಿರುತ್ತಾರೆ. ಪ್ರಥಮ ಬಾರಿಗೆ ಲೋಕಸಭೆಯನ್ನು ಪ್ರವೇಶಸಲಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಬೆಳ್ತಂಗಡಿಯಲ್ಲಿ 2019,2023 ಹಾಗೂ 2024 ರ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಸತತವಾಗಿ ಬಿಜೆಪಿಯ ಮತಗಳಿಕೆಯನ್ನು ಒಂದು ಲಕ್ಷಕ್ಕೂ ಮಿಗಿಲಾಗಿ ನೀಡಿ “ತ್ರೀಸ್ ರೀ ಬಾರ್ ಏಕ್ ಲಾಕ್ ಪಾರ್” ಮಾಡಿದ ಮತದಾರ ಬಾಂಧವರಿಗೆ ಶಾಸಕ ಹರೀಶ್ ಪೂಂಜ ಮನದಾಳದ ಕೃತಜ್ಞತೆಯನ್ನು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.

Related posts

ವಲಯ ಮಟ್ಟದ ಥ್ರೋಬಾಲ್ ಪಂದ್ಯಾಟ : ಅಂಡೆತ್ತಡ್ಕ ಶಾಲೆಯ ಬಾಲಕ ಬಾಲಕಿಯರ ತಂಡ ಪ್ರಥಮ

Suddi Udaya

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಪ್ರೊ. ಪದ್ಮನಾಭ ಕೆ. ಅಧಿಕಾರ ಸ್ವೀಕಾರ

Suddi Udaya

ಹೊಸಂಗಡಿ ಗ್ರಾ. ಪಂ. ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಹಳೆ ವಿದ್ಯಾರ್ಥಿನಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಮಂಡ್ಯದಲ್ಲಿ ನಡೆದ ಕೊಲೆ ಪ್ರಕರಣ: ಆರೋಪಿ ಜಯಚಂದ್ರ ಬಂಧನ

Suddi Udaya

ಉಜಿರೆ ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Suddi Udaya
error: Content is protected !!