ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಾಣಿ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

ಬೆಳ್ತಂಗಡಿ: ಮಾನವನ ಉನ್ನತ ಜೀವನಕ್ಕೆ ಪರಿಸರ ಪೂರಕವಾಗಿರುವಂತೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದು ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಪ್ರಜ್ವಲಾ ಡಿ ಆರ್ ಹೇಳಿದರು.


ಅವರು ವಾಣಿ ಪದವಿಪೂರ್ವ ಕಾಲೇಜಿನ ಪರಿಸರ ಸಂಘದ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಇಂದಿನ ಜಾಗತಿಕ ವಿದ್ಯಮಾನಗಳು, ಅಭಿವೃದ್ಧಿ ಪೂರಕ ಯೋಜನೆಗಳು ಪರಿಸರವನ್ನು ಕಡೆಗಣಿಸಿವೆ. ಇದು ಭವಿಷ್ಯದ ಜನಾಂಗಕ್ಕೆ ಮಾರಕವಾಗಲಿದೆ. ಜ್ಞಾನಿ ಎನಿಸಿಕೊಂಡ ಮಾನವನಿಂದಲೇ ಪರಿಸರವು ಹಾನಿಗೆ ಒಳಗಾಗುತ್ತಿರುವುದು ವಿಪರ್ಯಾಸವಾಗಿದೆ. ಸಂಪನ್ಮೂಲಗಳ ಸಮರ್ಪಕ ಬಳಕೆಯಿಂದ ಪ್ರಕೃತಿಯ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ಹಸಿರು ಭವಿಷ್ಯಕ್ಕಾಗಿ ನಮ್ಮ ಪಯಣ ನಿರಂತರವಾಗಬೇಕಿದೆ ಎಂದರು.


ಕಾಲೇಜಿನ ಪ್ರಾಂಶುಪಾಲರಾದ ಡಿ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ, ಪರಿಸರ ಸಂಘದ ಸಂಯೋಜಕರಾದ ಶ್ರೀಮತಿ ದೀಕ್ಷಾ , ಕುಮಾರಿ ಸ್ವಾತಿ ಉಪಸ್ಥಿತರಿದ್ದರು.
ಕುಮಾರಿ ವಿಭಾ ಸ್ವಾಗತಿಸಿದರು. ಅನ್ವಿತ್ ಧನ್ಯವಾದವಿತ್ತರು. ಕುಮಾರಿ ಸ್ಪೂರ್ತಿ ಕಾರ್ಯಕ್ರಮ ನಿರೂಪಿಸಿದರು.

Related posts

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಕೂಡಬೆಟ್ಟು ಸದಾಶಿವ ದೇವಸ್ಥಾನದಲ್ಲಿ ಶತರುದ್ರಾಭಿಷೇಕ

Suddi Udaya

ಬೆಳ್ತಂಗಡಿ : ಮಾಜಿ ಶಾಸಕ ವಸಂತ ಬಂಗೇರ ಮತ್ತು ಎಮ್. ತುಂಗಪ್ಪ ಗೌಡರಿಗೆ ಶ್ರದ್ಧಾಂಜಲಿ

Suddi Udaya

ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 57ನೇ ವರ್ಧಂತ್ಯುತ್ಸವ

Suddi Udaya

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ

Suddi Udaya

ನಾಗೇಶ್ ಕುಮಾರ್ ಗೌಡ ರವರ ಅಭಿಮಾನಿ ಬಳಗದಿಂದ ಮಂಗಳೂರಿನ ಸಮಾಜ ಸೇವಕ ಪ್ರಮೋದ್ ಸಾಲಿಯಾನ್ ಬಲ್ಲಾಳ್ ಬಾಗ್ ಭೇಟಿ

Suddi Udaya
error: Content is protected !!