32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಅರಣ್ಯ ಅಧಿಕಾರಿಗಳಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನಾಟಿ ಕಾರ್ಯಕ್ರಮ

ಬೆಳ್ತಂಗಡಿ : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ. ಹಾಗೂ ಅರಣ್ಯ ಅಧಿಕಾರಿಗಳಿಂದ ಗಿಡ ನಾಟಿ ಕಾರ್ಯಕ್ರಮವು ನಡ ವಿಭಾಗದ ಪಾಂಚಾರು ಅರಣ್ಯ ಪ್ರದೇಶದಲ್ಲಿ ಜೂ.5 ರಂದು ನಡೆಯಿತು.


ಉಪವಲಯ ಅರಣ್ಯಧಿಕಾರಿ ಕಿರಣ್ ಪಾಟೀಲ್ ಹಾಗೂ ಯೋಜನೆಯ ಲಾಯಿಲ ವಲಯದ ಮೇಲ್ವಿಚಾರಕರಾದ ಸುಶಾಂತ್ ರವರು ಗಿಡ ನಾಟಿಗೆ ಚಾಲನೆ ನೀಡಿ ಶುಭ ಹಾರೈಸಿದರು.

ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ಅರಣ್ಯ ಪ್ರದೇಶದ ಸುತ್ತ ಮುತ್ತ ಸುಮಾರು 50 ಕ್ಕೂ ಅಧಿಕ ವಿವಿಧ ರೀತಿಯ ಹಣ್ಣು ಹಂಪಲುಗಳ ಗಿಡಗಳನ್ನು ನಾಟಿ ಮಾಡಿದರು.

ಉಪವಲಯ ಅರಣ್ಯ ಅಧಿಕಾರಿಗಳಾದ ಕಿರಣ್ ಪಾಟೀಲ್ ರವರು ಶೌರ್ಯ ಸ್ವಯಂ ಸೇವಕರ ಸೇವೆಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿ ವೈಡ್ ಲೈಫ್ ವತಿಯಿಂದ ಧರ್ಮಸ್ಥಳ ಯೋಜನೆಯ ಕಾರ್ಯಕ್ರಮಕ್ಕೆ ಶೌರ್ಯ ತಂಡದೊಂದಿಗೆ ನಾವು ಕೂಡ ಜೊತೆಯಲ್ಲಿದ್ದು ಸಹಕಾರ ನೀಡುತ್ತೇವೆಂದು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಪವಲಯ ಅರಣ್ಯಧಿಕಾರಿಗಳಾದ ಕಿರಣ್ ಪಾಟೀಲ್, ಗಸ್ತು ಅರಣ್ಯ ಪಾಲಕರಾದ ಹೇಮಂತ್ ಡಿ. ಪಿ , ರಾಘವೇಂದ್ರ, ಅರಣ್ಯ ವೀಕ್ಷಕರಾದ ವೀರಪ್ಪ , ಸುರೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಸುಶಾಂತ್, ನಡ ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ಮಂಜುನಾಥ್, ಸ್ವಯಂ ಸೇವಕರಾದ ಜಯರಾಮ್, ಒಲ್ವಿನ್ ಡಿಸೋಜ, ಕೇಶವ ಉಪಸ್ಥಿತರಿದ್ದರು.

Related posts

ಉಜಿರೆ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ

Suddi Udaya

ಸುಲ್ಕೇರಿಮೊಗ್ರು: ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆಯಿಂದ ಬಿರ್ವೆರೆ ಕೆಸರ್ದ ಗೊಬ್ಬು ಕಾರ್ಯಕ್ರಮ

Suddi Udaya

ಗುರುವಾಯನಕೆರೆ : ಶಕ್ತಿ ನಗರದಲ್ಲಿ ರಸ್ತೆ ಮಧ್ಯೆ ಅಪಾಯಕಾರಿ ಹೊಂಡ

Suddi Udaya

ಕೊಕ್ಕಡ: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಪಿಟ್ ಇಂಡಿಯಾ ಕಾರ್ಯಕ್ರಮ

Suddi Udaya

ಸಯ್ಯದ್ ಫಝಲ್ ಅಲ್ ಬುಖಾರಿ ಕೂರತ್ ನಿಧನಕ್ಕೆ ಎಸ್‌ಡಿಪಿಐ ಸಂತಾಪ

Suddi Udaya

ಸವಣಾಲು ಬಾಡಡ್ಕ ಪಿಲಿಕಲ ರಸ್ತೆ ಬಿರುಕು:ಸ್ಥಳಕ್ಕೆ ಮೇಲಂತಬೆಟ್ಟು ಗ್ರಾ. ಪಂ. ಪಿಡಿಒ ಹಾಗೂ ಉಪಾಧ್ಯಕ್ಷ ಭೇಟಿ

Suddi Udaya
error: Content is protected !!