25.3 C
ಪುತ್ತೂರು, ಬೆಳ್ತಂಗಡಿ
May 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳಂಜ: ವೇಣೂರು ಆರಕ್ಷಕ ಠಾಣೆಯ ವತಿಯಿಂದ ಬೀಟ್ ಪೋಲೀಸ್ ಪಂಪಾಪತಿಯವರಿಂದ ಸಾರ್ವಜನಿಕರಿಗೆ ಸೈಬರ್ ಕ್ರೈಂ ,ಸಂಚಾರ ನಿಯಮ ಪಾಲನೆ ಹಾಗೂ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಮಾಹಿತಿ

ಬಳಂಜ: ವೇಣೂರು ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀಶೈಲ್ ಡಿ ಮುರಗೋಡ್ ರವರ ಮಾರ್ಗದರ್ಶನದಂತೆ ಬಳಂಜ, ನಾಲ್ಕೂರು, ತೆಂಕಕಾರಂದೂರು, ಕರಂಬಾರು, ಶಿರ್ಲಾಲು ಗ್ರಾಮಗಳ ಬೀಟ್ ಪೊಲೀಸ್ ಎಚ್.ಸಿ ಬಿ.ಪಂಪಾಪತಿ ಬೀಟ್ ಸಭೆ ಮಾಡಿ ಸಾರ್ವಜನಿಕರಿಗೆ ಸೈಬರ್ ಕ್ರೈಂ ಸಂಚಾರ ನಿಯಮ ಪಾಲನೆ ಹಾಗೂ ಇತ್ತೀಚಿನ ದಿನಮಾನಗಳಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಮಾಹಿತಿಯನ್ನು ಬಳಂಜ ಶ್ರೀದೈವ ಕೊಡಮಣಿತ್ತಾಯ ಆವರಣದಲ್ಲಿ ನಡೆಯಿತು.

ಸಾರ್ವಜನಿಕರು ಪ್ರಸ್ತುತ ಮಳೆಗಾಲವಾಗಿರುವುದರಿಂದ ರಾತ್ರಿ ವೇಳೆ ಮಳೆ ಬೀಳುತ್ತಿರುವ ಸಮಯ ಮಳೆ ಶಬ್ದಕ್ಕೆ ಮನೆಯ ಬಾಗಿಲು ಹೊಡೆದು ಕಳ್ಳತನ ಮಾಡುವ ತಂತ್ರಗಾರಿಕೆ ಹೆಚ್ಚಾಗುತ್ತಿದೆ. ಸಾರ್ವಜನಿಕರು ತಮ್ಮ ಬೆಲೆಬಾಳುವ ಒಡವೆ /ಹಣವನ್ನು ಅಗತ್ಯಕಿಂತ ಹೆಚ್ಚು ಮನೆಯಲ್ಲಿ ಇಟ್ಟುಕೊಳ್ಳದೆ ಬ್ಯಾಂಕ್ /ಸೇಫರ್ ಲಾಕ್ ನಲ್ಲಿ ಇಡುವುದು ಉತ್ತಮ. ಸಾರ್ವಜನಿಕರು ತಮ್ಮ ಸಂಬಂಧಿಕರ ಮನೆಗೆ ತೆರಳುವಾಗ ಪಕ್ಕದ ಮನೆಯವರಿಗೆ ಮಾಹಿತಿ ನೀಡಿ ಮನೆ ಕಡೆ ಗಮನಿಸುವಂತೆ ತಿಳಿಸಿ ತೆರಳುವುದು ಉತ್ತಮ. ಮನೆಯಲ್ಲಿ ಬೆಲೆಬಾಳುವ ವಸ್ತು / ಒಡವೆಗಳು ಇಟ್ಟುಕೊಂಡವರು ಮನೆಗೆ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳುವುದು, ಮನೆಯ ಹೊರಾಂಗಣದಲ್ಲಿ ರಾತ್ರಿವೇಳೆ ಸಾಕಷ್ಟು ಬೆಳಕಿನ ವ್ಯವಸ್ಥೆ ಇರುವಂತೆ ಮಾಡುವುದು. ಮನೆಯಲ್ಲಿ ನಾಯಿ ಸಾಕಿರುವವರು ರಾತ್ರಿವೇಳೆ ಹೊರಗಡೆ ನಾಯಿಗಳನ್ನು ಕಟ್ಟಿಹಾಕದೆ ಹೊರಗಡೆ ಬಿಡುವುದು ಒಳ್ಳೆಯದು. ಸಾರ್ವಜನಿಕರು ತಮ್ಮ ಮನೆ ಆಸುಪಾಸು ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ತಿರುಗಾಡುವ ಬಗ್ಗೆ /ವ್ಯಾಪಾರಕ್ಕೆ ಬರುವವರ ಬಗ್ಗೆ ಗಮನಿಸುವುದು ಅಗತ್ಯವಿದ್ದಲ್ಲಿ ಪೊಲೀಸ್ ಠಾಣೆಗೆ /112 ಗೆ ಕರೆಮಾಡಿ ತಿಳಿಸಿ. ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ಪೋಲೀಸರ ಸಹಾಯ ಬೇಕಾದಲ್ಲಿ ತುರ್ತು ಪೊಲೀಸ್ ಸೇವೆ 112 ಗೆ ಕರೆಮಾಡುವುದು. ನಮ್ಮ ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುವ ಮುನ್ನ ಜಾಗರೂಕರಾಗೋಣ .ಮನೆಗಳಲ್ಲಿ ಜನ ಇರುವಾಗಲೇ ಮನೆ ಬಾಗಿಲು ಹೊಡೆದು ಕಳ್ಳತನ ಮಾಡುವ ಗ್ಯಾಂಗ್ ಸಂಚರಿಸುತ್ತಿದೆ ಎಚ್ಚರಿಕೆ ವಹಿಸಿ ಅದುಲ್ಲದೆ ಆನ್ಲೈನ್ ವಂಚನೆ ಆದಲ್ಲಿ ಸಾರ್ವಜನಿಕರು 1 ಗಂಟೆ ಒಳಗಾಗಿ ಟೋಲ್ ಫ್ರೀ ನಂಬರ್ 1930 ಗೆ ಕರೆ ಮಾಡಿ ದೂರು ದಾಖಲಿಸುವುದು ಹಾಗೂ ನಿಮ್ಮ ಮೊಬೈಲ್ ಗಳಿಗೆ ಬರುವ ಬ್ಲಾಂಕ್ ಮೆಸೇಜ್ ಓಪನ್ ಮಾಡದೆ ಡಿಲೀಟ್ ಮಾಡುವುದು ಎಂಬುದಾಗಿ ಬೀಟ್ ಅಡಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

Related posts

ಕರಾಟೆ ಚಾಂಪಿಯನ್ ಶಿಪ್: ಸೇಕ್ರೆಡ್ ಹಾರ್ಟ್ ಆಂ. ಮಾ. ಶಾಲೆಯ ವಿದ್ಯಾರ್ಥಿ ಫ್ಲಾಯಿಡ್ ಮಿಸ್ಕಿತ್ ದ್ವಿತೀಯ ಸ್ಥಾನ

Suddi Udaya

ಜ್ಯೋತಿ ಆಸ್ಪತ್ರೆಗೆ ಆಳ್ವಾಸ್ ಕಾಲೇಜು ಅಡ್ಮಿಸ್ರಶನ್ ವಿಭಾಗದ ವಿದ್ಯಾರ್ಥಿಗಳು ಭೇಟಿ

Suddi Udaya

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಯುಕ್ತ ಅ.17ರಂದು ವಿದ್ಯುತ್ ನಿಲುಗಡೆ

Suddi Udaya

ಕೋರ್ಟ್ ಆದೇಶ ಉಲ್ಲಂಘಿಸಿ ಯಾವುದೇ ಹೇಳಿಕೆ ನೀಡದಂತೆ ಮಹೇಶ್ ಶೆಟ್ಟಿಯವರಿಗೆ ಎಚ್ಚರಿಕೆ: ಪ್ರತಿಬಂಧಕಾದೇಶ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು ಸರಕಾರ ಹಾಗೂ ಗೃಹ ಇಲಾಖೆಗೆ, ಉನ್ನತ ಪೊಲೀಸ್ ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ

Suddi Udaya

ಜೆಸಿಐ ಕೊಕ್ಕಡ ಕಪಿಲ ಘಟಕದ ವತಿಯಿಂದ ಕಾರ್ಯತ್ತಡ್ಕ ಸ.ಪ್ರೌ. ಶಾಲೆಯಲ್ಲಿ ವಿವೇಕಾನಂದ ಜಯಂತಿ ಆಚರಣೆ

Suddi Udaya

ಕಿಲ್ಲೂರು‌ ನೂತನ ಮಸ್ಜಿದ್ ಗೆ ಖಾಝಿ ಕೂರತ್ ತಂಙಳ್ ರಿಂದ ಶಿಲಾನ್ಯಾಸ

Suddi Udaya
error: Content is protected !!