24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಚ್ಚಿನ ಸರಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಮಚ್ಚಿನ : ಮನುಷ್ಯನಿಗೆ ಹಾಗೂ ಪರಿಸರಕ್ಕೆ ಅವಿನಾವಭಾವ ಸಂಬಂಧ ಇದೆ ಹಾಗಾಗೀ ಮನುಷ್ಯ ಪರಿಸರಕ್ಕೆ ಋಣಿಯಾಗಿ ಬದುಕಲೇಬೇಕೂ ಪರಿಸರ ವನ್ನೂ ಉಳಿಸಿ ಬೆಳೆಸುವ ದೃಷ್ಟಿಯಿಂದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪರಿಸರಕ್ಕೆ ಪೂರಕವಾದ ಬೀಜದ ಉಂಡೆ ತಯಾರಿ, ಸಾಲು ಮರ, ಗಿಡ ನಾಟಿ, ಶಾಲಾ ವನ ರಚನೆ, ದೇವರ ಕಾಡು ನಿರ್ಮಾಣ, ಕಾಡಿನಲ್ಲಿ ಹಣ್ಣಿನ ಗಿಡಗಳ ನಾಟಿಯ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆಯನ್ನು ನೀಡುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ನಿರ್ದೇಶಕ ಮಹಾಬಲ ಕುಲಾಲ್ ಹೇಳಿದರು.


ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಗುರುವಾಯನಕೆರೆ, ಸರಕಾರಿ ಪ್ರೌಡ ಶಾಲೆ ಮಚ್ಚಿನ, ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಮಚ್ಚಿನ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಚ್ಚಿನ ಪಾಲಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಸರಕಾರಿ ಪ್ರೌಢ ಶಾಲೆ ಮಚ್ಚಿನದಲ್ಲಿ ಶಾಲಾ ವನದ ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಗಿಡ ಮರಗಳನ್ನು ಬೆಳೆಸಬೇಕು, ಗಿಡಗಳನ್ನು ನಾಟಿ ಮಾಡಿ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಮಕ್ಕಳು ತೆಗೆದುಕೊಳ್ಳಬೇಕು ಪ್ಲಾಸ್ಟಿಕ್ ಬಳಕೆಯ ಬದಲು ಬಟ್ಟೆ ಚೀಲಗಳನ್ನು ಬಳಸಿ ಪರಿಸರಕ್ಕೆ ತನ್ನದೇ ಆದ ಕೊಡುಗೆಯನ್ನು ಪ್ರತಿಯೊಬ್ಬರೂ ನೀಡಬೇಕು ಎಂದು ಕರೆ ನೀಡಿದರು. ಮಕ್ಕಳು ಹುಟ್ಟು ಹಬ್ಬದಂದು ಕನಿಷ್ಟ ಎರಡು ಗಿಡಗಳನ್ನು ನಾಟಿ ಮಾಡಿ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕೂ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಚ್ಚಿನ ಶಾಲಾ ಶಿಕ್ಷಕ ರಮೇಶ್ರವರು ಮಾತನಾಡುತ್ತ ಪರಿಸರ ನಾಶವಾಗುತ್ತಿರುವುದನ್ನು ಮನಗಂಡು 1972 ರಲ್ಲೀ ವಿಶ್ವ ಸಂಸ್ಥೆ ವಿಶ್ವ ಪರಿಸರ ದಿನಾಚರಣೆಯನ್ನು ಘೋಷಣೆ ಮಾಡಿದೆ ಪ್ರತೀ ವರ್ಷವೂ ಹೊಸ ಧ್ಯೇಯ ವಾಕ್ಯಗಳೊಂದಿಗೆ ಪರಿಸರ ಉಳಿಸಲು ಪ್ರೇರಣೆ ನೀಡುತ್ತಿದೆ ಎಂದರು. ಭೂಮಿಯು ಸತ್ವ ಕಳೆದುಕೊಂಡಿದೆ ಇದರಿಂದಾಗಿ ಸರಿಯಾಗಿ ಬೆಳೆ ಬೆಳೆಯಲು ಸಾಧ್ಯ ಆಗುತ್ತಿಲ್ಲ ಪ್ರಾಣಿಗಳಿಂದ ಪರಿಸರ ನಾಶ ಆಗುತ್ತಿಲ್ಲ ಬುದ್ದಿ ಜೀವಿ ಎನಿಸಿರುವ ಮನುಷ್ಯನಿಂದ ಆಗುತ್ತಿದೆ ಎಂಬುವುದು ವಿಷಾದನೀಯ ಎಂದರು.


ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರುಕ್ಮಿಣಿ, ಉಪಾಧ್ಯಕ್ಷೆ ಸೋಮವತಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ವಸಂತಿ ಲಕ್ಮಣ, ಮುಖ್ಯ ಶಿಕ್ಷಕರಾದ ಪ್ರಕಾಶ್, ಸತ್ಯ ನಾರಾಯಣ, ಪೂಜಾ ಸಮಿತಿ ಅಧ್ಯಕ್ಷ ಹರ್ಷ, ಒಕ್ಕೂಟದ ಅಧ್ಯಕ್ಷರಾದ ಜಯ ಪೂಜಾರಿ,ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಸದಸ್ಯ ಸಂದೀಪ್, ಯೋಜನಾಧಿಕಾರಿ ದಯಾನಂದ ಪೂಜಾರಿ, ಮೇಲ್ವಿಚಾರಕರಾದ ವಸಂತ್, ಸೇವಾ ಪ್ರತಿನಿಧಿಗಳಾದ ಪರಮೇಶ್ವರ್, ನಂದಿನಿ ಮೊದಲಾದವರು ಉಪಸ್ಥಿತರಿದ್ದರು.


ಶೌರ್ಯ ವಿಪತ್ತು ಘಟಕದ ಸದಸ್ಯರು, ಗಿಡಗಳ ನಾಟಿಯ ಕೆಲಸವನ್ನು ನಿರ್ವಹಿಸಿದರು.

Related posts

ಗುರುವಾಯನಕೆರೆ: ನಿವೃತ್ತ ಮೆಸ್ಕಾಂ ಉದ್ಯೋಗಿ ಭಾಸ್ಕರನ್ ಸ್ವಾಮಿರವರ ಪುತ್ರ ಅಯ್ಯಪ್ಪ ದಾಸ್ ನಿಧನ

Suddi Udaya

ಚಾರ್ಮಾಡಿ ಕುಂಜಿರ ಗುರುಸ್ವಾಮಿ ರವರಿಗೆ ಅಯ್ಯಪ್ಪ ಭಕ್ತಬೃಂದ ಸಮಿತಿಯಿಂದ ತಾಂಬೂಲ ಕಾಣಿಕೆ

Suddi Udaya

ಶ್ರೀ ರಾಮ್ ಫೈನಾನ್ಸ್ ಲಿಮಿಟೆಡ್ ಬೆಳ್ತಂಗಡಿ ಇದರ ನೂತನ ಕಛೇರಿ ಉದ್ಘಾಟನಾ ಸಮಾರಂಭ

Suddi Udaya

ಮಾ.10: ಅಂತರಾಷ್ಟ್ರೀಯ ಬಿಲ್ಲವರ ಮಹಾ ಸಮಾವೇಶ: ಕಳಿಯ ಗ್ರಾಮದ ಬಿಲ್ಲವರ ಪೂರ್ವಭಾವಿ ಸಭೆ

Suddi Udaya

ಇಂದಬೆಟ್ಟು ವಲಯದ ಭಜನಾ ಮಂಡಳಿಗಳ ಪದಾಧಿಕಾರಿಗಳ ಸಭೆ

Suddi Udaya

ನಾರಾವಿ ಸಂತ ಪೌಲ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya
error: Content is protected !!