“ಸುರ್ಯ ದೇವಸ್ಥಾನದ ವಠಾರದಲ್ಲಿ “ವಿಶ್ವ ಪರಿಸರ ದಿನಾಚರಣೆ “

Suddi Udaya

/05/nisarga-curtain-online-advt-copy.jpg"/>

ಬೆಳ್ತಂಗಡಿ:ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಸದಾಶಿವರುದ್ರ ದೇವಸ್ಥಾನದ ವಠಾರದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಬೆಳ್ತಂಗಡಿ ವಲಯ ಹಾಗೂ ಸುರ್ಯ ದೇವಸ್ಥಾನದ ಆಶ್ರಯದಲ್ಲಿ “ವಿಶ್ವ ಪರಿಸರ ದಿನ ” ಆಚರಿಸಲಾಯಿತು. ಸುರ್ಯ ದೇವಸ್ಥಾನದ ಆನುವಂಶಿಯ ಆಡಳಿತ ಮೊಕ್ತೇಸರ ಡಾ. ಸತೀಶ್ಚಂದ್ರ ಸುರ್ಯಗುತ್ತು ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಡಾ. ಸತೀಶ್ಚಂದ್ರ ಹಾಗೂ ವಿದ್ಯಾ. ಪಿ. ಡಿ. ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ (ಸಾಮಾಜಿಕ ಅರಣ್ಯ ಇಲಾಖೆ ) ಇವರು ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಅರಣ್ಯಕರಣದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅರಣ್ಯಧಿಕಾರಿ ಅಶೋಕ್, ಇಲಾಖೆ ಸಿಬ್ಬಂದಿ ಶೇಖರ ಗೌಡ, ನಡ ಪಂಚಾಯತ್ ಮಾಜಿ ಅಧ್ಯಕ್ಷ ಮುನಿರಾಜ ಅಜ್ರಿ, ಪ್ರಸಾದ್, ಸುಂದರ ನಾಯ್ಕ, ಪದ್ಮನಾಭ ಗೌಡ, ಯೋಗೀಶ್ ಪೂಜಾರಿ ಹಾಜರಿದ್ದರು. ಮಾವು, ಹೆಬ್ಬಲಸು, ಸಂಪಿಗೆ, ನೇರಳೆ, ಶ್ರೀಗಂಧ, ಸೊರಗೆ , ಹೊಳೆ ದಾಸವಾಳ ಇತ್ಯಾದಿ ವಿವಿಧ ಬಗೆಯ ನೂರು ಗಿಡಗಳನ್ನು ಸುರ್ಯ ದೇವಸ್ಥಾನದ ವಠಾರದಲ್ಲಿ ನೆಡಲಾಯಿತು.

Leave a Comment

error: Content is protected !!