28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕೊಯ್ಯೂರು ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕೊಯ್ಯೂರು: ಕೊಯ್ಯೂರು ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ಗಿಡನೆಡುವ ಕಾರ್ಯಕ್ರಮ ಜೂ 5ರಂದು ಹಮ್ಮಿಕೊಳ್ಳಲಾಗಿತ್ತು.

ಫೆಡರಲ್ ಬ್ಯಾಂಕ್ ಕೊಯ್ಯೂರು ಶಾಖೆಯ ಆಫೀಸರ್ ಸುಹಾಸ್‌ಕೃಷ್ಣ ರವರು ಶಾಲಾವನದಲ್ಲಿ ಮಾವಿನ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಇಂದು ನಾವು ನೈಸರ್ಗಿಕವಾಗಿ ಹಣ್ಣು ಕೊಡುವ ಮರಗಳ ಗಿಡಗಳನ್ನು ನೆಡುವುದಿಲ್ಲ, ಬದಲಾಗಿ ಕಡಿಯುತ್ತೇವೆ. ಇದರಿಂದಾಗಿ ಜೈವಿಕ ಅಸಮತೋಲನ ಉಂಟಾಗುತ್ತದೆ. ಆದರೆ ಕೊಯ್ಯೂರು ಪ್ರೌಢಶಾಲೆಯಲ್ಲಿ ಇಂತಹ ಗಿಡಗಳನ್ನು ನೆಟ್ಟು ಬೆಳೆಸುವುದರ ಮೂಲಕ ಇಲ್ಲಿಯ ವಿದ್ಯಾರ್ಥಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ಶಾಲಾ ಮುಖ್ಯಶಿಕ್ಷಕ ರಾಧಾಕೃಷ್ಣ ತಚ್ಚಮೆ ಮಾತನಾಡಿ ನಿಸರ್ಗವು ನಮಗೆ ಅನೇಕ ತರದ ಆಹಾರ ಪದಾರ್ಥಗಳನ್ನು ಕೊಡುವ ಗಿಡಗಳನ್ನು ನೀಡಿದೆ. ನಮ್ಮ ಹಿರಿಯರು ಅದನ್ನು ಗುರುತಿಸಿ ಬಳಸಿಕೊಂಡು ಬೆಳೆಸುತ್ತಿದ್ದರು. ಆದರೆ ನಾವು ಇಂದು ಹೈಬ್ರಿಡ್ ತಳಿಗಳಿಗೆ ಪ್ರಾಮುಖ್ಯತೆ ನೀಡಿ ನಿಸರ್ಗದಲ್ಲಿ ಸ್ವಾಭಾವಿಕವಾಗಿ ಸಿಗುವ ಆಹಾರ ಪದಾರ್ಥಗಳ ಗಿಡಗಳನ್ನು ಮರೆಯುತ್ತೇವೆ ಅಲ್ಲದೆ ಅದರ ನಾಶಕ್ಕೂ ಕಾರಣರಾಗಿದ್ದೇವೆ. ಹಾಗಾಗಿ ಶಾಲೆಯ ವಿದ್ಯಾರ್ಥಿಗಳು ಈ ನೆಲೆಯಲ್ಲಿ ಶಾಲೆಯಲ್ಲಿ ಅವನತಿಯ ಅಂಚಿನಲ್ಲಿರುವ ನೆಕ್ಕರೆ, ಕಾಟು ಮಾವಿನ ಗಿಡಗಳನ್ನು ನೆಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಅಸೋಶೀಯೇಟ್ಸ್ ಹರಿರಂಗ್ ಮತ್ತು ವಿಷ್ಣುದತ್ ಉಪಸ್ಥಿತರಿದ್ದರು.

ಇಕೋ ಕ್ಲಬ್ ನೋಡಲ್ ಶಿಕ್ಷಕಿ ಶ್ರೀಮತಿ ಬೇಬಿ ಸ್ವಾಗತಿಸಿದರು. ರಾಮಚಂದ್ರ ದೊಡಮನಿ ವಂದಿಸಿದರು. ಪ್ರವೀಣ್ ಕುಮಾರ್ ನಿರೂಪಿಸಿದರು. ಸುಧಾಕರ ಶೆಟ್ಟಿ ಮತ್ತು ಶ್ರೀಮತಿ ಗೀತಾ ಇವರ ನೇತೃತ್ವದಲ್ಲಿ ಶಾಲೆಯ ಪರಿಸರದಲ್ಲಿ ಸುಮಾರು ಎಪ್ಪತ್ತೈದು ಮಾವಿನ ಗಿಡಗಳನ್ನು ನೆಡಲಾಯಿತು.

Related posts

ಅರಸಿನಮಕ್ಕಿ : ಪರಿಸರ ಜಾಗೃತಿ ಮತ್ತು ಗಿಡನಾಟಿ ಕಾರ್ಯಕ್ರಮ

Suddi Udaya

ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

Suddi Udaya

ಬೆಳ್ತಂಗಡಿ ರಾಜಕೇಸರಿ ಟ್ರಸ್ಟ್ ವತಿಯಿಂದ ಮುಗುಳಿ ಸ.ಹಿ.ಪ್ರಾ. ಶಾಲೆಯಲ್ಲಿ ಸ್ವಚ್ಛಾಲಯ ಅಭಿಯಾನ

Suddi Udaya

ಉಜಿರೆ: ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಯೋಗ ತರಬೇತಿ ಉದ್ಘಾಟನೆ

Suddi Udaya

ಉಜಿರೆ ರುಡ್ ಸೆಟ್ ನಲ್ಲಿ ‘ಮೇಕಪ್ ಮಾಸ್ಟರ್‌ಕ್ಲಾಸ್’ ಕಾರ್ಯಾಗಾರ

Suddi Udaya

ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ಅವರ ಚುನಾವಣಾ ಕಚೇರಿ ಉದ್ಘಾಟನೆ

Suddi Udaya
error: Content is protected !!