25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಓಡಿಲ್ನಾಳ ಸ.ಉ.ಪ್ರಾ. ಶಾಲಾ ವಿದ್ಯಾರ್ಥಿ ಮಂತ್ರಿಮಂಡಲ ರಚನೆ

ಓಡಿಲ್ನಾಳ :2024 -25 ಶೈಕ್ಷಣಿಕ ವರ್ಷದ ಜೂ 5 ರಂದು ವಿದ್ಯಾರ್ಥಿ ಮಂತ್ರಿಮಂಡಲವನ್ನು ರಚನೆ ಮಾಡಲಾಯಿತು.

ವಿದ್ಯಾರ್ಥಿಗಳಿಗೆ ನಾಮಪತ್ರ ಸಲ್ಲಿಕೆ ನಾಮಪತ್ರ ಹಿಂಪಡೆಯುವುದು ಪ್ರಚಾರ ಮತ್ತು ಬ್ಯಾಲೆಟ್ ಮತದಾನದ ಮೂಲಕ ನಾಯಕತ್ವದ ಅರಿವನ್ನು ಮೂಡಿಸಲಾಯಿತು. ಶಾಲಾ ಮುಖ್ಯಮಂತ್ರಿಯಾಗಿ ಯಶ್ವಿತ್ ಶೆಟ್ಟಿ 8ನೇ ತರಗತಿ, ಉಪಮುಖ್ಯ ಮಂತ್ರಿಯಾಗಿ ಅಶ್ವಿತ್ 7ನೇ ತರಗತಿ ಬಹುಮತಗಳನ್ನು ಪಡೆದು ಆಯ್ಕೆಯಾದರು ಹಾಗೂ ವಿರೋಧ ಪಕ್ಷದ ನಾಯಕನಾಗಿ ಕೀರ್ತನ್ 8ನೇ ತರಗತಿ ಇವರನ್ನು ನೇಮಕ ಮಾಡಲಾಯಿತು.

ಉಳಿದಂತೆ ಮಂತ್ರಿಮಂಡಲಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು ಶಾಲಾ ಮುಖ್ಯೋಪಾಧ್ಯಾಯರ ಮಾರ್ಗದರ್ಶನ ಹಾಗೂ ವೀಣಾ ಕೆ ಎಸ್ ಮತ್ತು ದೈಹಿಕ ಶಿಕ್ಷಕರಾದ ನಿರಂಜನ್ ಇವರ ಮುಂದಾಳತ್ವದಲ್ಲಿ ಮತದಾನ ಯಶಸ್ವಿಯಾಯಿತು. ಗೆಲುವಿನ ವಿಜಯೋತ್ಸವದಲ್ಲಿ ವಿದ್ಯಾರ್ಥಿಗಳು ಭಾಗಿಗಳಾದರು. ಸಹ ಶಿಕ್ಷಕರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಯಿತು.

Related posts

ವಲಯಮಟ್ಟದ ಪ್ರತಿಭಾ ಕಾರಂಜಿ : ಬೆಳ್ತಂಗಡಿ ಶ್ರೀ ಧ. ಮಂ. ಆಂ.ಮಾ. ಶಾಲೆಗೆ ಹಲವಾರು ಪ್ರಶಸ್ತಿ

Suddi Udaya

ವಲಯ ಮಟ್ಟದ ಕ್ರೀಡಾಕೂಟ: ಎಸ್.ಡಿ.ಎಂ. ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಮಂಗಳೂರು ಕ್ಯಾಂಪ್ಕೊ ಸಾಂತ್ವನ” ಯೋಜನೆಯಡಿ ಸಹಾಯಧನ ವಿತರಣೆ

Suddi Udaya

ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆ: ಕೊಕ್ರಾಡಿ ಸ.ಪ್ರೌ. ಶಾಲೆಯ ಶಿಕ್ಷಕಿ ಅಕ್ಕಮ್ಮ ರವರಿಗೆ ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ

Suddi Udaya

ಬಾನಂಗಳದಲ್ಲಿ ಗೋಚರಿಸಿದ ಸೂಪರ್ ಬ್ಲೂಮೂನ್ ಸೆರೆಹಿಡಿದ ಅಂಡಿಂಜೆಯ ಛಾಯಾಗ್ರಹಕ ಚಂದ್ರಹಾಸ ಹೆಬ್ಬಾರ್

Suddi Udaya

ಪ್ರೊ.ಎಸ್ ಪ್ರಭಾಕರ್ ನಿಧನಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಂತಾಪ

Suddi Udaya
error: Content is protected !!