ಓಡಿಲ್ನಾಳ :2024 -25 ಶೈಕ್ಷಣಿಕ ವರ್ಷದ ಜೂ 5 ರಂದು ವಿದ್ಯಾರ್ಥಿ ಮಂತ್ರಿಮಂಡಲವನ್ನು ರಚನೆ ಮಾಡಲಾಯಿತು.
ವಿದ್ಯಾರ್ಥಿಗಳಿಗೆ ನಾಮಪತ್ರ ಸಲ್ಲಿಕೆ ನಾಮಪತ್ರ ಹಿಂಪಡೆಯುವುದು ಪ್ರಚಾರ ಮತ್ತು ಬ್ಯಾಲೆಟ್ ಮತದಾನದ ಮೂಲಕ ನಾಯಕತ್ವದ ಅರಿವನ್ನು ಮೂಡಿಸಲಾಯಿತು. ಶಾಲಾ ಮುಖ್ಯಮಂತ್ರಿಯಾಗಿ ಯಶ್ವಿತ್ ಶೆಟ್ಟಿ 8ನೇ ತರಗತಿ, ಉಪಮುಖ್ಯ ಮಂತ್ರಿಯಾಗಿ ಅಶ್ವಿತ್ 7ನೇ ತರಗತಿ ಬಹುಮತಗಳನ್ನು ಪಡೆದು ಆಯ್ಕೆಯಾದರು ಹಾಗೂ ವಿರೋಧ ಪಕ್ಷದ ನಾಯಕನಾಗಿ ಕೀರ್ತನ್ 8ನೇ ತರಗತಿ ಇವರನ್ನು ನೇಮಕ ಮಾಡಲಾಯಿತು.
ಉಳಿದಂತೆ ಮಂತ್ರಿಮಂಡಲಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು ಶಾಲಾ ಮುಖ್ಯೋಪಾಧ್ಯಾಯರ ಮಾರ್ಗದರ್ಶನ ಹಾಗೂ ವೀಣಾ ಕೆ ಎಸ್ ಮತ್ತು ದೈಹಿಕ ಶಿಕ್ಷಕರಾದ ನಿರಂಜನ್ ಇವರ ಮುಂದಾಳತ್ವದಲ್ಲಿ ಮತದಾನ ಯಶಸ್ವಿಯಾಯಿತು. ಗೆಲುವಿನ ವಿಜಯೋತ್ಸವದಲ್ಲಿ ವಿದ್ಯಾರ್ಥಿಗಳು ಭಾಗಿಗಳಾದರು. ಸಹ ಶಿಕ್ಷಕರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಯಿತು.