24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಡಿರುದ್ಯಾವರ : ಕಾನರ್ಪ ಒಕ್ಕೂಟ ಅನ್ನಪೂರ್ಣೇಶ್ವರಿ ಸಂಘದ ಸದಸ್ಯೆಯ ಮನೆ ದುರಸ್ತಿ ಕಾರ್ಯ ನಡೆಸಿದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು

ಕಡಿರುದ್ಯಾವರ ಗ್ರಾಮದ ಕಾನರ್ಪ ಒಕ್ಕೂಟ ಅನ್ನಪೂರ್ಣೇಶ್ವರಿ ಸಂಘದ ಸದಸ್ಯರಾದ ಲೀಲಾವತಿರವರಿಗೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಶನ ಸಿಗುತ್ತಿದ್ದು ಇವರ ಮನೆಗೆ ಯೋಜನಾಧಿಕಾರಿ ಸುರೇಂದ್ರ ಭೇಟಿ ನೀಡಿ ನಂತರ ಅವರು ವಾಸ ಇರುವ ಮನೆಯು ಸೋರುತ್ತಿದ್ದು ಯೋಜನಾಧಿಕಾರಿಯವರು ಶೌರ್ಯ ವಿಪತ್ತು ಘಟಕದಿಂದ ಸರಿ ಮಾಡಿಸಿಕೊಡುವ ಭರವಸೆ ನೀಡಿದರು.

ಈ ವೇಳೆ ಕಡಿರುದ್ಯಾವರ ಕುಕ್ಕಾವು ಶೌರ್ಯ ವಿಪತ್ತು ಘಟಕಕ್ಕೆ ವಲಯದ ಮೇಲ್ವಿಚಾರಕರಾದ ಜನಾರ್ಧನ್ ಘಟಕಕ್ಕೆ ಮಾಹಿತಿ ತಿಳಿಸಿದರು ಹಾಗಾಗಿ ಕುಕ್ಕಾವು ಘಟಕದ ಸಂಯೋಜಕರಾದ ರಶ್ಮಿ ಘಟಕದ ಪ್ರತಿನಿಧಿ ಲೋಕೇಶ್ ರವರು ಹಾಗೂ 10 ಮಂದಿ ಸ್ವಯಂಸೇವಕರನ್ನು ಸೇರಿಸಿಕೊಂಡು ಜೂ.7 ರಂದು ಲೀಲಾವತಿಯವರಿಗೆ ಕುಕ್ಕಾವು ಘಟಕದವರು ಮನೆಯ ಮೇಲಿನ ಹಂಚುಗಳನ್ನು ಕೆಳಗಿಳಿಸಿ ಸ್ವಲ್ಪ ಬೇರೆ ಕಡೆಯಿಂದ ಹಂಚುಗಳನ್ನು ತಂದು ಮನೆ ಸೋರದಂತೆ ರಿಪೇರಿ ಮಾಡಿದರು.

ಶ್ರಮದಾನದಲ್ಲಿ ಲೋಕೇಶ್, ದಾಮೋದರ, ಜಯಾನಂದ, ಸುರೇಶ್, ಯೋಗೇಶ್ ಬಾನಟ್ಟು, ಲಕ್ಷ್ಮಣಗೌಡ, ವಿಶ್ವನಾಥ, ರಾಜೇಶ್ ಏನ್ ಆರ್, ಗೀತಾ,ಭಾರತಿ ಹಾಗೂ ಅಕ್ಕಪಕ್ಕದ ಮನೆಯವರು ಕೂಡ ನಮ್ಮ ಜೊತೆ ಕೈಜೋಡಿಸಿದ್ದಾರೆ.

Related posts

ವೇಣೂರು: ಉಂಬೆಟ್ಟು ಸ.ಉ.ಪ್ರಾ. ಶಾಲೆಯ ಕಟ್ಟಡ ಮೇಲ್ಛಾವಣಿ ದುರಸ್ತಿಗೆ ಧರ್ಮಸ್ಥಳ ಯೋಜನೆಯಿಂದ ರೂ ಒಂದು ಲಕ್ಷ ಅನುದಾನ

Suddi Udaya

ಇಂದಬೆಟ್ಟು ವಲಯದ ಗುರಿಪಳ್ಳ ಕಾರ್ಯಕ್ಷೇತ್ರದಲ್ಲಿ ‘ಬೆಳಕು’ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ

Suddi Udaya

ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಮಾಜಿ ಶಾಸಕ ವಸಂತ ಬಂಗೇರರಿಗೆ ನುಡಿ ನಮನ

Suddi Udaya

ಗೇರುಕಟ್ಟೆ ಆಟೋ ಚಾಲಕರ ಮತ್ತು ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ತಾಲೂಕು ಮಟ್ಟದ ಸ್ವಾಸ್ತ್ಯ ಸಂಕಲ್ಪ ಸಪ್ತಾಹ

Suddi Udaya

ಗರ್ಡಾಡಿಯಲ್ಲಿ ಮದಿರಾ ಗ್ರ್ಯಾಂಡ್ ಬಾರ್ ಆಂಡ್ ರೆಸ್ಟೋರೆಂಟ್ ಉದ್ಘಾಟನೆ

Suddi Udaya
error: Content is protected !!