25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ‘ಕೈಗಾರಿಕಾ ಕೇಂದ್ರಗಳ ಭೇಟಿ

ಬೆಳ್ತಂಗಡಿ:- ಗುರುವಾಯನಕೆರೆ, ಇಲ್ಲಿನ ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ‘ಕೈಗಾರಿಕಾ ಕೇಂದ್ರಗಳ ಭೇಟಿ ಕಾರ್ಯಕ್ರಮ’ವನ್ನು ಹಮ್ಮಿಕೊಳ್ಳಲಾಯಿತು.

ವಾಣಿಜ್ಯ ವಿಭಾದಲ್ಲಿ ಪ್ರಾಯೋಗಿಕ ಜ್ಞಾನವನ್ನು ನೀಡುವ ಸಲುವಾಗಿ ಮುತ್ತಿನ ನಗರಿ ಪುತ್ತೂರಿನ ಕೆಮ್ಮಿಂಜೆಯ ಕೋಕೋ ಕೃಷಿ ಪ್ರದೇಶದ ಮಧ್ಯದಲ್ಲಿ ಭಾರತದ ನೆಚ್ಚಿನ ಚಾಕೊಲೇಟ್ ಕಂಪನಿಯ ಕಾರ್ಖಾನೆ ಇದೆ. ವಿದ್ಯಾರ್ಥಿಗಳಿಗೆ ಅಧ್ಯಯನ ಪೂರಕವಾಗಿ ಕಂಪೆನಿಯ ನಾನಾ ವಿಭಾಗಗಳ ತಂತ್ರಜ್ಞಾನವು ಸೇರಿದಂತೆ ಮಾರುಕಟ್ಟೆ, ಗ್ರಾಹಕ ವರ್ತನೆ, ಯೋಜನೆ – ವಿತರಣೆ ಹೀಗೆ ಹಲವಾರು ವಿಷಯಗಳ ಅಧ್ಯಯನವನ್ನು ನಡೆಸಿದರು.

ಕ್ಯಾಂಪ್ಕೋ ಸಂಸ್ಥೆಯ ಮಾರ್ಗದರ್ಶಕ ಸಿಬ್ಬಂದಿಯೋರ್ವರು ಮಾತನಾಡಿ, ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿಯನ್ನು 1986 ರಲ್ಲಿ 8,800 ಮೆಟ್ರಿಕ್ ಟನ್ ಚಾಕೊಲೇಟ್ ಉತ್ಪಾದಿಸುವ ಸಾಮರ್ಥ್ಯದೊಂದಿಗೆ ಸ್ಥಾಪಿಸಲಾಯಿತು. ಇಂದು ಇಲ್ಲಿ 23,000 ಟನ್‌ಗಳಷ್ಟು ಕೋಕೋ ಆಧಾರಿತ ಉತ್ಪನ್ನಗಳನ್ನು ಉತ್ಪಾದಿಸುತ್ತೇವೆ . ಅತ್ಯಂತ ಆಧುನಿಕ ಆಮದು ಮಾಡಿದ ಯಂತ್ರೋಪಕರಣಗಳೊಂದಿಗೆ ಸಜ್ಜುಗೊಂಡಿರುವ ಉತ್ಸಾಹಭರಿತ ಚಾಕೊಲೇಟ್ ಕಲಾವಿದರು ಕೋಕೋ ಮಾಸ್, ಕೋಕೋ ಪೌಡರ್, ಮೋಲ್ಡ್ ಚಾಕೊಲೇಟ್‌ಗಳು, ಪ್ರೀಮಿಯಂ ಚಾಕೊಲೇಟ್ ಬಾರ್‌ಗಳು ಮತ್ತು ಇತರ ಕೋಕೋ ಆಧಾರಿತ ಉತ್ಪನ್ನಗಳನ್ನು ಒಂದೇ ಸ್ಥಳದಲ್ಲಿ ಉತ್ಪಾದಿಸುತ್ತಾರೆ ಎಂದು ಮಾಹಿತಿ ನೀಡಿದರು.


ನಂತರ ವಿದ್ಯಾರ್ಥಿಗಳು ಸುಧಾರಿತ ಉಪಕರಣಗಳ ಬಳಕೆ ಮತ್ತು ಅದರಿಂದ ಉತ್ಪಾದನಾ ವಿಧಾನವನ್ನು ತಿಳಿಯುತ್ತಾ ಸಂತಸಪಟ್ಟರು.
ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರು ಮಾತನಾಡಿ, ವಾಣಿಜ್ಯ ವಿಭಾಗದ ಮಕ್ಕಳಿಗೆ ವರ್ಷದ ಆರಂಭದ ದಿನಗಳಲ್ಲೇ ಈ ತರನಾದ ಪ್ರಾಯೋಗಿಕ ತರಬೇತಿ ಸಿಗುವಂತಾಗಬೇಕು, ಎಕ್ಸೆಲ್ ವಿದ್ಯಾಸಂಸ್ಥೆಯು ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿಪರ ಜ್ಞಾನವನ್ನು ಬೆಳೆಸಿಕೊಳ್ಳುವಲ್ಲಿ ಸದಾ ಆದ್ಯತೆಯನ್ನು ನೀಡುತ್ತದೆ ಎಂದರು.


ಕಾಲೇಜಿನ ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆಯವರು ಮಾತನಾಡಿ,ವಾಣಿಜ್ಯ ವಿಭಾಗದ ಕಲಿಕೆಯ ಆರಂಭದಲ್ಲೇ ಭವಿಷ್ಯದ ವೃತ್ತಿ ಜೀವನಕ್ಕೆ ಸದಾ ಪ್ರೋತ್ಸಾಹ ನೀಡಲು, ಅನುಭವವನ್ನು ಹೆಚ್ಚಿಸಿಕೊಳ್ಳಲು ಕೈಗಾರಿಕಾ ಭೇಟಿ ಕಾರ್ಯಕ್ರಮವು ಒಂದು ಮಹತ್ತರವಾದ ಹೆಜ್ಜೆಯಾಗಬಲ್ಲದು ಎಂದರು.


ಕಾಮರ್ಸ್ ವಿಭಾಗದ ಡೀನ್ ಸಂತೋಷ್ ರವರು, ವಾಣಿಜ್ಯ ವಿಭಾಗದ ಪ್ರಸನ್ನ, ರವಿ ಹಾಗೂ ಆಂಗ್ಲಭಾಷಾ ಶಿಕ್ಷಕಿ ಅರ್ಪಿತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Related posts

ಪತ್ರಕರ್ತ ರಂಜಿತ್ ಮಡಂತ್ಯಾರ್ ರಿಗೆ ರಾಜ್ಯ ಮಟ್ಟದ ಯುವ ಸಾಧಕ ಪ್ರಶಸ್ತಿ

Suddi Udaya

ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ವರ್ಧಂತಿ ಉತ್ಸವ:

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಅಮೂಲ್ಯ ವಜ್ರಗಳ ಹಬ್ಬಕ್ಕೆ ಚಾಲನೆ: ಗ್ರಾಹಕರ ಕೈಗೆಟಕುವ ರೀತಿಯಲ್ಲಿ ‘ಡೈಮಂಡ್ ಫೆಸ್ಟ್’

Suddi Udaya

ಕನ್ಯಾಡಿ ಲಾಡ್ಜ್ ನಲ್ಲಿ ಅಕ್ರಮ ಜೂಜಾಟ: ಧರ್ಮಸ್ಥಳ ಪೊಲೀಸರಿಂದ ದಾಳಿ: 11 ಮಂದಿಯ ಬಂಧನ ; ರೂ.3 ಲಕ್ಷ ನಗದು ವಶ

Suddi Udaya

ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನೆಯ ತಾಲೂಕು ಮಟ್ಟದ ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಪುದುವೆಟ್ಟಿನ ಮಹಿಳೆ ಪುಣ್ಯಶ್ರೀ ಪುತ್ತೂರು ತಾಯಿ ಮನೆಯಲ್ಲಿ ಬಾವಿಗೆ ಬಿದ್ದು ಮೃತ್ಯು

Suddi Udaya
error: Content is protected !!