April 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಳೆಂಜ ಎಸ್ ಟಿ ಮೋರ್ಚಾದ ಅಧ್ಯಕ್ಷ ರಾಜೇಶ್ ಎಂ.ಕೆ. ಪೋಕ್ಸೋ ಪ್ರಕರಣ: ಸರಿಯಾದ ತನಿಖೆಯನ್ನು ಮಾಡಿ ಸತ್ಯಾಂಶವನ್ನು ಹೊರ ತರುವ ಕೆಲಸವನ್ನು ಗೃಹ ಇಲಾಖೆ ಮಾಡಬೇಕು: ಕಳೆಂಜ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸನ್ನ

ಬೆಳ್ತಂಗಡಿ: ಕಳೆಂಜದಲ್ಲಿ ಇತ್ತೀಚಿಗೆ ಎಸ್ ಟಿ ಮೋರ್ಚಾದ ಅಧ್ಯಕ್ಷ ರಾಜೇಶ್ ಎಂ.ಕೆ. ಮೇಲೆ ತಲ್ವಾರ್ ದಾಳಿ ಪ್ರಕರಣದಲ್ಲಿ, ಕುಶಾಲಪ್ಪ ಗೌಡರು 10-15 ವರ್ಷಗಳಿಂದ ಪಂಚಾಯತ್ ಸದಸ್ಯರಾಗಿ ಕೆಲಸವನ್ನು ಮಾಡುತ್ತಾ ಬಂದಿದ್ದು ಇದರ ಜೊತೆ ಜೊತೆಗೆ ಕೆಲವೊಂದು ಕ್ರಿಮಿನಲ್ ವಿಷಯದಲ್ಲಿ ಭಾಗಿ ಆಗುತ್ತಾರೆ. ಇಂತಹ ವ್ಯಕ್ತಿ ತಾನು ಮಾಡಿದ ಕೃತ್ಯವನ್ನು ಮುಚ್ಚಿ ಹಾಕುವುದಕ್ಕೋಸ್ಕರ ತನ್ನ ಮಗಳನ್ನು ಮುಂದಿಟ್ಟಿರುವುದು ದೊಡ್ಡ ಅಪರಾಧ. ಈ ಪ್ರಕರಣವನ್ನು ಕಾನೂನು ರೀತಿಯಲ್ಲಿ ಸರಿಯಾದ ತನಿಖೆಯನ್ನು ಮಾಡಿ ಅದರ ಸತ್ಯಾಂಶವನ್ನು ಹೊರ ತರುವ ಕೆಲಸವನ್ನು ಮಾಡಬೇಕು ಎಂದು ಗೃಹ ಇಲಾಖೆಯನ್ನು ಆಗ್ರಹ ಮಾಡುತ್ತೇನೆ ಎಂದು ಕಳೆಂಜ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸನ್ನ ರವರು ಹೇಳಿದರು.

ಅವರು ಜೂ.10 ರಂದು ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರಾಜೇಶ್ ಎಂ.ಕೆ ತಮ್ಮ ಅಡಿಕೆ ಅಂಗಡಿಗೆ ಬಾಗಿಲಾಕಿ ಮನೆಗೆ ತೆರಳುವ ಸಂದರ್ಭದಲ್ಲಿ ಕಜೆ ಸಮೀಪ ಫೋನ್ ಕಾಲ್ ಬರುತ್ತದೆ, ಆ ಸಂದರ್ಭದಲ್ಲಿ ರಾಜೇಶ್ ಎಂ. ಕೆ ಕುಶಾಲಪ್ಪ ರವರ ತಂದೆಯ ಜೊತೆ ಮಾತನಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಕುಶಾಲಪ್ಪ ಗೌಡ ರವರು ಏಕಾಏಕಿಯಾಗಿ ತಲ್ವಾರ್ ನಲ್ಲಿ ರಾಜೇಶ್ ಎಂ.ಕೆ ರವರಿಗೆ ದಾಳಿ ಮಾಡುತ್ತಾರೆ. ಅದೇ ವೇಳೆ ಎದುರಿನಿಂದ ಉಪಾಧ್ಯಕ್ಷ ಮಂಜುನಾಥ ಮತ್ತು ಉಮೇಶ್ ಗೌಡ ಎಂಬವರು ಬೈಕ್ ನಲ್ಲಿ ಬರುತ್ತಾರೆ. ಇವರು ಪ್ರತ್ಯಕ್ಷ ಸಾಕ್ಷಿಗಲಾಗಿರುತ್ತಾರೆ‌ ಎಂದರು

ರಾಜೇಶ್ ನನ್ನು ಕೂಡಲೇ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಅದೇ ಸಂದರ್ಭದಲ್ಲಿ ಕುಶಾಲಪ್ಪ ಗೌಡರು ಸರಕಾರಿ ಆಸ್ಪತ್ರೆಗೆ ದಾಖಲಾಗಳು ಬರುತ್ತಾರೆ. ಅವರ ದೇಹದಲ್ಲಿ ಯಾವುದೇ ಗಾಯಗಳು ಇಲ್ಲದ ಕಾರಣ ದಾಖಲಿಸಲು ನಿರಾಕರಣೆ ಮಾಡುತ್ತಾರೆ. ಆಗ ಕೆಲವೊಂದು ರಾಜಕೀಯ ಪ್ರೇರಣೆಯಿಂದ ಕುಶಾಲಪ್ಪ ಗೌಡರು ತನ್ನ ಮಗಳನ್ನು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ, ರಾಜೇಶ್ ಎಂಬಾತನು ದೌರ್ಜನ್ಯ ಮಾಡಿದ ಎಂದು ಪೋಕ್ಸೋ ಕೇಸ್ ನ್ನೂ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಿಸುತ್ತಾರೆ.

ಕುಶಾಲಪ್ಪ ಗೌಡರು ತಾನು ಮಾಡಿದ ಕೃತ್ಯವನ್ನು ಮುಚ್ಚಿ ಹಾಕುವುದಕ್ಕೋಸ್ಕರ ತನ್ನ ಮಗಳನ್ನೂ ಈ ವಿಷಯಕ್ಕೆ ತಂದಿರುವುದು ದೊಡ್ಡ ಅಪರಾಧ. ಕಾನೂನು ರೀತಿಯಲ್ಲಿ ಇದರ ಸರಿಯಾದ ತನಿಖೆಯನ್ನು ಮಾಡಿ ಅದರ ಸತ್ಯಾಂಶವನ್ನು ಹೊರ ತರುವ ಕೆಲಸವನ್ನು ಮಾಡಬೇಕು ಎಂದರು.

ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಅರಣ್ಯ ಸಮಿತಿ ಅಧ್ಯಕ್ಷ ಧನಂಜಯ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆಂಜ ಗ್ರಾಮದಲ್ಲಿ ಸಾಮರಸ್ಯದ ಜೀವನವನ್ನು ಮಾಡಿಕೊಂಡು ಬರುತ್ತಿದ್ದವರು ನಾವು. ಹಾಗಾಗಿ ಇಂತಹ ಘಟನೆಗಳು ಆದಾಗ ಮನಸ್ಸಿಗೆ ಬಹಳ ನೋವು ಆಗಿದೆ. ರಾಜೇಶ್ ಸರಳ ಸಜ್ಜನಿಕೆ ವ್ಯಕ್ತಿ ಅವರ ಮೇಲೆ ತಲ್ವಾರ್ ದಾಳಿ ಆಗಿದೆ ಮತ್ತೊಂದೆಡೆ ಪೋಕ್ಸೋ ಕೇಸ್ ದಾಖಲಾಗಿದೆ. ರಾಜೇಶ್ ರವರು ರಿಲೀಸ್ ಆದ ತಕ್ಷಣ ಗ್ರಾಮದವರು ಒಟ್ಟು ಸೇರಿಕೊಂಡು, ಕುಶಾಲಪ್ಪರವರನ್ನು ಕರೆಸಿ, ಒಳ್ಳೆ ಯ ಸ್ಥಳದಲ್ಲಿ, ದೇವರ ಮುಂದೆ ಬಂದು ನಡೆದ ಘಟನೆ ಬಗ್ಗೆ ಹೇಳಿದರೆ ನಮ್ಮ ಗ್ರಾಮಸ್ಥರಿಗೆ ನೆಮ್ಮದಿ ತರಬಹುದು, ಇಲ್ಲದಿದ್ದರೆ ಇನ್ನಷ್ಟು ಯುವಕರು ದಾರಿ ತಪ್ಪಬಹುದು. ಇಂತಹ ತಲ್ವಾರ್ ದಾಳಿಯನ್ನು ಖಂಡಿಸುತ್ತೇವೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ತಾ.ಪಂ. ಮಾಜಿ ಸದಸ್ಯೆ ಶ್ರೀಮತಿ ಸುಶೀಲ, ಪಾ.ಕೃ.ಪ. ನಿರ್ದೇಶಕರು ವಿಜಯಲಕ್ಷ್ಮೀ ಉಪಸ್ಥಿತರಿದ್ದರು.

ಕಳೆಂಜ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಕೆ.ಬಿ. ಸ್ವಾಗತಿಸಿ ಧನ್ಯವಾದವಿತ್ತರು.

Related posts

ಕಾಶಿಪಟ್ಣ ಗ್ರಾ.ಪಂ. ಅಧ್ಯಕ್ಷರಾಗಿ ಸತೀಶ್ ಕಾಶಿಪಟ್ಣಅವಿರೋಧ ಆಯ್ಕೆ

Suddi Udaya

ಕಲ್ಲೇರಿಯ ಪವರ್ ಮ್ಯಾನ್ ಸಂದೀಪ್ ಎಂ ರವರು ಮಂಗಳೂರಿನ ಮಲ್ಲಿಕಟ್ಟೆ ಕಾರ್ಯ ಮತ್ತು ಪಾಲನಾ ಶಾಖೆಗೆ ಪದೋನ್ನತಿ

Suddi Udaya

ಬೆಳ್ತಂಗಡಿ ವರ್ತಕರ ಸಂಘದ ವತಿಯಿಂದ ಹೂವಿನ ವ್ಯಾಪಾರಿ ಶಿವರಾಮ್ ರವರಿಗೆ ಆರ್ಥಿಕ ಸಹಾಯ

Suddi Udaya

ಬದ್ಯಾರು ಜಂಕ್ಷನ್ ರಸ್ತೆಯಲ್ಲಿ ಸರಣಿ ಅಪಘಾತ, ನುಜ್ಜು ಗುಜ್ಜಾದ ವಾಹನಗಳು,ರಿಕ್ಷಾ ಡ್ರೈವರ್ ಗೆ ಗಾಯ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ ರವರಿಂದ ಕೃತಕ ಕಾಲಿನ ವ್ಯವಸ್ಥೆಗೆ ಸಹಾಯಹಸ್ತ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. ಶಾಲೆಯಲ್ಲಿ ಸ್ಕೌಟ್ ಗೈಡ್ ಬೇಸಿಗೆ ಶಿಬಿರ

Suddi Udaya
error: Content is protected !!