September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಗರ್ಡಾಡಿ: ಬೋಳಿಯಾರ್ ನಲ್ಲಿ 25 ಮೇಕೆಯ ತಲೆ ಕಡಿದು ಪ್ರಮುಖರ ಫೋಟೋ ಬಳಸಿ ವಾಮಾಚಾರ

ಗರ್ಡಾಡಿ: ಇಲ್ಲಿನ ಬೋಳಿಯಾರ್ ನ ಗೋಪಕುಮಾರ್ ಮತ್ತು ಸುಮೇಶ್ ಕುಮಾರ್ ರವರಿಗೆ ಸೇರಿದ ಜಮೀನಿನ ಗೇಟಿನೆದುರು 25 ಮೇಕೆಯ ತಲೆ ಕಡಿದು ವಾಮಾಚಾರ ನಡೆಸಿರುವ ಘಟನೆ ಜೂ.10ರಂದು ಬೆಳಕಿಗೆ ಬಂದಿದೆ.

ಗೇಟಿನೆದುರು ಮೇಕೆಯ ತಲೆಗಳ ಜೊತೆ ಆ ಕುಟುಂಬದವರ ಫೋಟೋ, ಕೆಲಸದವರ ಫೋಟೋ, ಸಮಾಜದಲ್ಲಿರುವ ಪ್ರಮುಖರ ಫೋಟೋ ಬಳಕೆ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಜಾಗದ ವಿಚಾರದಲ್ಲಿಯೇ ವಾಮಾಚಾರ ನಡೆಸಿರುವ ಅನುಮಾನ ವ್ಯಕ್ತವಾಗಿದೆ. ಗೋಪಕುಮಾರ್ ರವರಿಗೆ ಸೇರಿದ ಜಾಗವನ್ನು ಮಂಗಳೂರಿನ ರಾಜೇಶ್ ಎಂಬಾತ ಒಳಗೆ ಹಾಕಿಕೊಳ್ಳಲು ಪ್ರಯತ್ನಿಸಿದ್ದು, ಈ ಹಿನ್ನಲೆಯಲ್ಲಿ ಕಾನೂನು ಹೋರಾಟ ನಡೆಯುತ್ತಿದೆ ಎಂದು ಈ ಜಾಗದ ಮ್ಯಾನೇಜರ್ ಲಿಬಿನ್ ತಿಳಿಸಿದ್ದಾರೆ.

ಒಂದು ವಾರದ ಹಿಂದೆ 25 ಮೊಟ್ಟೆ, ಹಂದಿಯ ಮುಖ ಬಳಸಿ ವಾಮಾಚಾರ ಇದೇ ಜಾಗದಲ್ಲಿ ಮಾಡಿಸಿದ್ದರು. ಈಗ ಮತ್ತೆ ಮೇಕೆಯ ತಲೆ ಕಡಿದು ಹಾಕಿ ವಾಮಾಚಾರ ಮಾಡಿರುವುದು ಸ್ಥಳೀಯರು ಆತಂಕದಲ್ಲಿದ್ದಾರೆ.

Related posts

ಖೋ ಖೋ ಪಂದ್ಯಾಟ: ವೇಣೂರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ದಾನ

Suddi Udaya

ಪಣಕಜೆ ಬಳಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಗಾಳಿ ಮಳೆಗೆ ಮನೆ ಹಾನಿ: ಚಾರ್ಮಾಡಿ ಮುಡಿಪು ಅರ್ಕನ ಮಸೀದಿಯ ಧರ್ಮಗುರುಸಮೀರ್ ಮುಸ್ಲಿಯರ್,ದಿನೇಶ್ ವಲಸಾರಿ ರವರಿಗೆ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ನಿಂದ ಆರ್ಥಿಕ ನೆರವು

Suddi Udaya

ಮರೋಡಿ: ಜ.27 ರಂದು ಅಂಬ್ಯುಲೆನ್ಸ್ ಲೋಕಾರ್ಪಣೆ

Suddi Udaya

ಬೆಳ್ತಂಗಡಿ ಸಂತ ತೆರೇಸಾ ಪ್ರೌಢ ಶಾಲಾ ಸಂಸತ್ತು ಉದ್ಘಾಟನೆ

Suddi Udaya

ಕನ್ಯಾಡಿ II ಸ.ಉ. ಹಿ. ಪ್ರಾ. ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ

Suddi Udaya
error: Content is protected !!