April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಶಿಶಿಲ ಶ್ರೀ ಕ್ಷೇತ್ರ ಚಂದ್ರಪುರ ಜಿನಮಂದಿರದಲ್ಲಿ ಕಲ್ಯಾಣ ಮಂದಿರ ಆರಾಧನೆ

ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ೧00೮ ಶ್ರೀ ಚಂದ್ರನಾಥ ಸ್ವಾಮಿ ಜಿನ ಮಂದಿರದಲ್ಲಿ ಲೋಕದ ಸಕಲ ಜೀವಿಗಳ ಕಲ್ಯಾಣಾರ್ಥವಾಗಿ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತಿಷ್ಠಾಚಾರ್ಯ ಶ್ರೀ ಜಯರಾಜ ಇಂದ್ರ ಹಾಗೂ ಇತರ ಪುರೋಹಿತ ವರ್ಗದಿಂದ ಶ್ರೀ ಕ್ಷೇತ್ರ ಚಂದ್ರಪುರ ಆಡಳಿತ ಮಂಡಳಿ ಹಾಗೂ ಶಿಶುಗಲಿ ರಾಣಿ ಕಾಳಲಾದೇವಿ ಮಹಿಳಾ ಸಮಾಜ ಶ್ರೀ ಕ್ಷೇತ್ರ ಚಂದ್ರಪುರ ಇವರ ನೇತೃತ್ವದಲ್ಲಿ ಕಲ್ಯಾಣ ಮಂದಿರ ಆರಾಧನೆಯು ನೆರವೇರಿತು..

ಭಗವಾನ್ ೧೦೦೮ ಶ್ರೀ ಪಾರ್ಶ್ವನಾಥ ಸ್ವಾಮಿ ಪ್ರಭುದೇವರ ಜಿನಬಿಂಬವನ್ನು ಅದ್ದೂರಿಯಾಗಿ ಮೆರವಣಿಗೆಯಲ್ಲಿ ತರಲಾಯಿತು. ನಂತರ ಸಾಮೂಹಿಕ ಕಲ್ಯಾಣ ಮಂದಿರ ಆರಾಧನೆ ನಡೆದು ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ವಿಶೇಷ ಪೂಜೆಯು ನೆರವೇರಿತು.

ಈ ಸಂದರ್ಭದಲ್ಲಿ ದಾನಿಗಳಾದ ವಿಜಯಕುಮಾರ್ ಕಣಿಯೂರು, ಸುರೇಂದ್ರ ಹೆಗ್ಡೆ ಕಣಿಯೂರು, ಶ್ರೀಮತಿ ಶಶಿಪ್ರಭಾ ಅಹಿಂಸ ಉಜಿರೆ ಅವರನ್ನು ಆಡಳಿತ ಮಂಡಳಿಯವರು ಗೌರವಿಸಿದರು. ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಮತ್ತು ಶಿಶುಗಲಿ ರಾಣಿ ಕಾಳಲಾದೇವಿ ಮಹಿಳಾ ಸಮಾಜದ ಸದಸ್ಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related posts

ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕರ: ಮುಗೇರಡ್ಕ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

Suddi Udaya

ವೇಣೂರು: ಬಜಿರೆಯಲ್ಲಿ ಮನೆಯ ಬಾವಿ ತಡೆಗೋಡೆ ಕುಸಿತ

Suddi Udaya

ಗುರುವಾಯನಕೆರೆ: 7 ಮಂದಿ ಸಾಧಕರಿಗೆ ‘ಎಕ್ಸೆಲ್ ಅಕ್ಷರ ಗೌರವ ಪುರಸ್ಕಾರ’ ಪ್ರದಾನ

Suddi Udaya

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ WAVES-24 ಗುರುದೇವ ಕಾಲೇಜಿಗೆ ಪ್ರಶಸ್ತಿ

Suddi Udaya

ಜಿಲ್ಲಾ ಮಟ್ಟದ ಸೀನಿಯರ್ ವಿಭಾಗದ ರಸಪ್ರಶ್ನೆ ಸ್ಪರ್ಧೆ: ಮೈರೋಳ್ತಡ್ಕ ಶಾಲೆಯ ವಿದ್ಯಾರ್ಥಿ ಧೃತಿ ಎನ್.ಡಿ ಪ್ರಥಮ ಸ್ಥಾನ

Suddi Udaya

ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಸ್ವಚ್ಛತಾ ಹಿ ಸೇವಾ’ ಸಪ್ತಾಹ ಕಾರ್ಯಕ್ರಮ

Suddi Udaya
error: Content is protected !!