ಹತ್ಯಡ್ಕ: ಆಯುಷ್ ಮಂತ್ರಾಲಯ, ಭಾರತ ಸರಕಾರ ನವದೆಹಲಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಉಜಿರೆ-ಧರ್ಮಸ್ಥಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ.) ಧರ್ಮಸ್ಥಳ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್(ರಿ.)ಧರ್ಮಸ್ಥಳ ಇವರ ಸಹಯೋಗದೊಂದಿಗೆ ಹತ್ತನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಉಚಿತ ಯೋಗ ಶಿಬಿರವು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ ಇದರ ಸಭಾಭವನದಲ್ಲಿ ಜೂ. 10ರಂದು ಉದ್ಘಾಟನೆಗೊಂಡಿತು.
ಅರಸಿನಮಕ್ಕಿ ಗ್ರಾಮ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್. ಉದ್ಘಾಟಿಸಿ, ಶುಭ ಹಾರೈಸಿದರು. ಹತ್ಯಡ್ಕ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವಿಚಂದ್ರ ಟಿ.ರಾವ್, ಸಿಬ್ಬಂದಿಗಳಾದ ರಂಜಿತ್ ಶೆಟ್ಟಿ,ಕೃಷ್ಣಪ್ಪ ಗೌಡ, ಗಣೇಶ್ ಗೌಡ, ಯೋಗ ತರಬೇತುದಾರರಾದ ಕು. ಚಂದನ ಗೌಡ, ಕು. ನೇಹಾಶ್ರೀ ಉಪಸ್ಥಿತರಿದ್ದರು.
ಕು. ಚಂದನ ಗೌಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಯೋಗ ಶಿಬಿರವು ಜೂ.10ರಿಂದ ಜೂ.21ರ ವರೆಗೆ ಬೆಳಿಗ್ಗೆ 6:30 ರಿಂದ 7:30 ಹಾಗೂ ಸಂಜೆ 5:30 ರಿಂದ 6:30ರ ವರೆಗೆ ನಡೆಯಲ್ಲಿದ್ದು ಆಸಕ್ತರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ.