ತಾಲೂಕು ಭಜನಾ ಪರಿಷತ್ತಿನ ನೇತೃತ್ವದಲ್ಲಿ ತಾಲೂಕು ಕುಣಿತ ಭಜನಾ ತರಬೇತಿದಾರ ಪ್ರಥಮ ಸಭೆ

Suddi Udaya

ಬೆಳ್ತಂಗಡಿ: ದೇವರನ್ನು ಅತಿ ಸುಲಭವಾಗಿ ಒಲಿಸಿಕೊಳ್ಳಲು ಸುಲಭ ವಿಧಾನ ಎಂದರೆ ಅದು ಭಜನೆ ಆದುದರಿಂದ ಭಜನೆ ಎನ್ನುವುದು ಶ್ರದ್ಧಾಭಕ್ತಿಯಿಂದ ಕೂಡಿರಬೇಕು ವಿವಿಧತೆಯ ಭಜನೆಯಲ್ಲಿ ಏಕತೆಯನ್ನು ಕಾಣಬೇಕು ಮಾತ್ರವಲ್ಲದೇ ತಾಲೂಕಿನ ಒಳಗಡೆ ನಡೆಯುವಂತಹ ಭಜನಾ ಕಾರ್ಯಕ್ರಮಗಳಲ್ಲಿ ಹಾಗೂ ಭಜಕರಲ್ಲಿ ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದಕೋಸ್ಕರ ಹಾಗೂ ಮುಂದಿನ ದಿನಗಳಲ್ಲಿ ನಾವು ಶ್ರದ್ಧಾ ಭಕ್ತಿಯಿಂದ ಮಾಡುವಂತಹ ಭಜನೆಯಲ್ಲಿಯೂ ಕೂಡ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು ಎನ್ನುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ತಾಲೂಕು ಭಜನಾ ಪರಿಷತ್ತಿನ ವತಿಯಿಂದ ಬೆಳ್ತಂಗಡಿಯಲ್ಲಿ ಪ್ರಥಮ ಬಾರಿಗೆ ತಾಲೂಕಿನ ಒಳಗಡೆ ಭಜನಾ ತರಬೇತಿ ನೀಡುತ್ತಿರುವ ಎಲ್ಲಾ ತರಬೇತಿದಾರರುಗಳ ಸಭೆಯನ್ನು ನಡೆಸಲಾಯಿತು. ಮಾತ್ರವಲ್ಲದೆ ಕುಣಿತ ಭಜನೆಯಲ್ಲಿ ಕೆಲವೊಂದು ನಿಬಂಧನೆಗಳನ್ನು ಅನುಷ್ಠಾನಗೊಳಿಸುವುದಕೋಸ್ಕರ ತಾಲೂಕಿನಲ್ಲಿ ಕುಣಿತ ಭಜನೆಯ ತರಬೇತಿದಾರರ ಪ್ರಥಮ ಸಮಿತಿಯನ್ನು ರಚಿಸಲಾಯಿತು.


ಈ ಸಭೆ ಅಧ್ಯಕ್ಷತೆಯನ್ನು ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ವೆಂಕಟೇಶ ಭಟ್ ಕಜೆ ಇವರು ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಜಯಪ್ರಸಾದ್ ಕಡಮ್ಮಾಜಿ, ಕಾರ್ಯದರ್ಶಿ ಪಿ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು, ಸುರೇಂದ್ರ ಯೋಜನಾಧಿಕಾರಿ ಬೆಳ್ತಂಗಡಿ ವಲಯ, ಕೃಷಿ ವಿಭಾಗದ ಅಧಿಕಾರಿ ರಾಮ್ ಕುಮಾರ್ ಉಪಸ್ಥಿತರಿದ್ದರು.


ಸಭೆಯಲ್ಲಿ ಭಜನಾ ಪರಿಷತ್ತಿನ ಸಂಯೋಜಕರುಗಳು ಹಾಗೂ ತಾಲೂಕಿನ ಭಜನಾ ಕುಣಿತ ಭಜನೆಯ ತರಬೇತಿದಾರರುಗಳು ಉಪಸ್ಥಿತರಿದ್ದರು.

Leave a Comment

error: Content is protected !!