September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೂ.18-23: ಉಜಿರೆಯಲ್ಲಿ ಬೆಂಗಳೂರು ಜೀವನ ಕಲೆ ಪ್ರತಿಷ್ಠಾನ ಸಂಸ್ಥೆ ವತಿಯಿಂದ ‘ಆನಂದೋತ್ಸವ ಶಿಬಿರ’

ಉಜಿರೆ : ಶ್ರೀ ರವಿ ಶಂಕರ್ ಗುರೂಜಿ ಯವರ “ಜೀವನ ಕಲೆ ಪ್ರತಿಷ್ಠಾನ” ಸಂಸ್ಥೆ ( ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ) ಬೆಂಗಳೂರು ಇವರ ವತಿಯಿಂದ ‘ಅನಂದೋತ್ಸವ ಶಿಬಿರ’ ಎಂಬ “ಯೋಗ ಮತ್ತು ಪ್ರಾಣಾಯಾಮ ಶಿಬಿರ” ಜೂನ್ 18 ರಿಂದ ಜೂನ್ 23ರ ವರೆಗೆ ಸಂಜೆ 5.30 ರಿಂದ 8 ರವರೆಗೆ ‘ಅರಿಪ್ಪಾಡಿ ಮಠ ಸಭಾಂಗಣ ಉಜಿರೆ ‘ ಇಲ್ಲಿ ಏರ್ಪಡಿಸಲಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆ ತಿಳಿಸಿದೆ.

ಕಾರ್ಯಕ್ರಮವು ಸುದರ್ಶನ ಕ್ರಿಯೆ ಎಂಬ ಒಂದು ಲಯಬದ್ದ ಉಸಿರಾಟದ ಕಾರ್ಯಕ್ರಮವಾಗಿದ್ದು, ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ಪ್ರಪಂಚದ ಎಲ್ಲ ಕಡೆ ಮೂರುವರೆ ಕೋಟಿಗೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದಿದ್ದಾರೆ. 180ಕ್ಕೂ ಹೆಚ್ಚು ದೇಶಗಲ್ಲಿ ‘ಜೀವನ ಕಲೆ ಪ್ರತೀಷ್ಠಾನ ‘ ಜನಪ್ರಿಯತೆಯನ್ನು ಗಳಿಸಿದೆ. ಅಮೆರಿಕದಲ್ಲಿ ನೂರಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳಲ್ಲಿ ಇದನ್ನು ಪಠ್ಯ ಕ್ರಮವಾಗಿ ಅಳವಡಿಸಲಾಗಿದೆ. ಯುರೋಪ್ ಮತ್ತು ಆಫ್ರಿಕಾ ದೇಶಗಳಲ್ಲಿ ಜನರ ಒತ್ತಡ ಭರಿತ ಜೀವನ ಕ್ರಮವನ್ನು ಬದಲಾಯಿಸಿ ಪ್ರಶಾಂತ ಮನಸ್ಸನ್ನು ಕಂಡುಕೊಳ್ಳಲು ನೇರವಾಗಿದೆ. ಜನರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯು ಆಶಯ ವ್ಯಕ್ತಪಡಿಸಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ :9743642012

Related posts

ಜ.22: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ: ಬೆಳ್ತಂಗಡಿ ತಾಲೂಕಿನಾದ್ಯಂತ ಸಂಭ್ರಮಿಸಲು ಸಜ್ಜಾಗಿರುವ ರಾಮಭಕ್ತರು

Suddi Udaya

ಜ.11ರಂದು ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಲಯಕ್ಕೆ ಹಾಜರಾಗಲು ಕೋರ್ಟ್ ಆದೇಶ

Suddi Udaya

ಮಾ.9: ಲಾಯಿಲ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಅಷ್ಠಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

Suddi Udaya

ರಂಜಿತ್ ಎಚ್ ಡಿ ಯವರಿಗೆ ಜೆಸಿಐ ವಲಯ 15ರ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ

Suddi Udaya

ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಕೂಟ: ಬೆಳ್ತಂಗಡಿ ಶೊರಿನ್ ರಿಯೊ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya

ಮಚ್ಚಿನ ಸ.ಉ.ಪ್ರಾ. ಶಾಲೆಯ ನೂತನ ತರಗತಿ ಕೊಠಡಿ, ಗ್ರಂಥಾಲಯ ಕೊಠಡಿ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

Suddi Udaya
error: Content is protected !!