September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೂ.15-21: ಬಳಂಜದಲ್ಲಿ ಉಚಿತ ಯೋಗ ಶಿಬಿರ- ಸಾರ್ವಜನಿಕರಿಗೆ ಮುಕ್ತ ಅವಕಾಶ

ಬಳಂಜ: ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ (ರಿ.)ಬಳಂಜ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಇದರ ವತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಉಜಿರೆ-ಧರ್ಮಸ್ಥಳ, ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು, ಶ್ರೀಮಾತಾ ನಾಲ್ಕೂರು, ಜ್ಯೋತಿ ಯುವತಿ ಮಂಡಲ ಬಳಂಜ,ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇವರ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂನ್ 15ರಿಂದ 21ರ ವರೆಗೆ ಉಚಿತ ಯೋಗ ಶಿಬಿರ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಬಳಂಜದಲ್ಲಿ ನಡೆಯಲಿದೆ.

ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.ಪ್ರತಿದಿನ ಬೆಳಿಗ್ಗೆ ಗಂಟೆ 5.30 ರಿಂದ 6.30 ಯೋಗ ಶಿಬಿರ ನಡೆಯಲಿದೆ. ಯೋಗ ತರಬೇತಿಯನ್ನು ಡಾ.ಅಭಿಷೇಕ್ ಮತ್ತು ಸುಶ್ಮಿತಾ ಶೆಟ್ಟಿ ಉಜಿರೆ ಇವರು ನೀಡಲಿದ್ದಾರೆ.ಹೆಚ್ಚಿನ ಮಾಹಿತಿಗಾಗಿ 9900806088 ನಂಬರನ್ನು ಸಂಪರ್ಕಿಸಬಹುದು ಎಂದು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಧರ್ಮಸ್ಥಳ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜಯಂತಿ ಆಚರಣೆ

Suddi Udaya

ಎಸ್‌ಡಿಎಂ ಮಹಾವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಡಿ ಶೆಟ್ಟಿ ಉಜಿರೆ ನಿಧನ

Suddi Udaya

ಯೂತ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್‌ಶಿಪ್‌: ಎಸ್.ಡಿ.ಎಂ ಮನ್ವಿತ್ ರೈಗೆ ಕಂಚಿನ ಪದಕ

Suddi Udaya

ಮೇಲಂತಬೆಟ್ಟು ತ್ರಿವೇಣಿ ಸಂಜೀವಿನಿ ಮಹಿಳಾ ಗ್ರಾ.ಪಂ. ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ಬಡ್ಡಡ್ಕ ಅಂಗನವಾಡಿ ಕೇಂದ್ರಕ್ಕೆ ಪೀಠೋಪಕರಣಗಳ ಕೊಡುಗೆ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತು ಹಾಕಿದ ದೂರು ಪ್ರಕರಣ: ದೂರುದಾರ ಸಾಕ್ಷಿಯು ನೀಡಿರುವ ಅಸ್ಥಿಪಂಜರದ ಅವಶೇಷಗಳನ್ನು, ಪಂಚರ ಸಮ್ಮುಖದಲ್ಲಿ ಪೊಲೀಸರು ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ: ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು: ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್‌ ಕೆ.

Suddi Udaya
error: Content is protected !!