ಬೆಳ್ತಂಗಡಿ: ಕರ್ನಾಟಕ ರಾಜ್ಯಾದಲ್ಲಿ ಇರುವ ಗ್ರಾಮ ಪಂಚಾಯತ್ ನಗರ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ಗಳಲ್ಲಿ 16 ವರ್ಷಗಳಿಂದ ವಿಶೇಷಚೇತನರಿಗೆ ಹಾಗೂ ಹಿರಿಯ ನಾಗರಿಕರ ಸೇವೆಗಾಗಿ ಗೌರವಧನದ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂಆರ್‌ಡಬ್ಲು, ವಿಆರ್‌ಡಬ್ಲು, ಯುಆರ್‌ಡಬ್ಲು ನೌಕರರು, ಸರಕಾರಿ ನೌಕರಿಗೆ ಸಿಗುವ ಸೌಲಭ್ಯದಿಂದ ವಂಚಿತರಾಗಿದ್ದು, ಹುದ್ದೆ ಖಾಯಮಾತಿ ಇಲ್ಲದೇ ಇವರ ಬದುಕು ಚಿಂತಾಜನಕವಾಗಿದೆ ಅದೂ ಕೂಡ ನೌಕರರು ವಿಶೇಷ ಚೇತನರಾಗಿದ್ದಾರೆ. ಇವರ ಬದುಕನ್ನು ರೂಪಿಸುವ ಸಲುವಾಗಿ ಕರ್ನಾಟಕ ರಾಜ್ಯದಾದಂತ್ಯ ಇರುವ ನೌಕರರ ಖಾಯಮಾತಿ ಹಾಗೂ ಸರಕಾರಿ ನೌಕರಿಗೆ ಇರುವ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸುಮಾರು 3 ವರ್ಷಗಳಿಂದ ಕರ್ನಾಟಕದಾದ್ಯಂತ ಸಂಚರಿಸಿ ನವ ಕರ್ನಾಟಕ (ಎಂಆರ್‌ಡಬ್ಲ್ಯೂ , ವಿಆರ್‌ಡಬ್ಲ್ಯೂ , ಯುಆರ್‌ಡಬ್ಲ್ಯೂ ) ಸಂಘದ ಶಾಖೆಯನ್ನು ರಾಜ್ಯದ ಜಿಲ್ಲೆಗಳಿಗೆಲ್ಲ ವಿಸ್ತರಿಸುವ ಉದ್ದೇಶದಿಂದ ಜೂ.8 ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷ ಡಾ. ಅಂಬಾಜಿ ಮೇಟಿ ಹಾಗೂ ನವ ಕರ್ನಾಟಕ ಸಂಘದ ಅಧ್ಯಕ್ಷ ಪಕೀರ ಗೌಡ ಪಾಟೀಲ್ ಇವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಂಆರ್‌ಡಬ್ಲ್ಯೂ , ವಿಆರ್‌ಡಬ್ಲ್ಯೂ , ಯುಆರ್‌ಡಬ್ಲ್ಯೂ ವಿಕಲಚೇತನರ ಗೌರವಧನದ ಕಾರ್ಯಕರ್ತರ ಸಂಘವನ್ನು ರಚಿಸಲಾಯಿತು.
ಗೌರವಧ್ಯಕ್ಷರಾಗಿ ಪುಟ್ಟಣ್ಣ ವಾಲಿಕಾಜೆ ಸುಳ್ಯ ತಾಲೂಕು, ಜಿಲ್ಲಾಧ್ಯಕ್ಷರಾಗಿ ವಿಜಯ ಕುಮಾರ್ ಕಡಬ ತಾಲೂಕು, ಜಿಲ್ಲಾ ಉಪಾಧ್ಯಕ್ಷರಾಗಿ ಶೇಷಪ್ಪ ಪುತ್ತೂರು ತಾಲೂಕು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಹೀರಣ್ಣ ಬೆಳ್ತಂಗಡಿ ತಾಲೂಕು, ಕಾರ್ಯದರ್ಶಿಯಾಗಿ ಸುರೇಶ್ ಬಂಟ್ವಾಳ ತಾಲೂಕು, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ವಿಪುಲ್ ಬೆಳ್ತಂಗಡಿ ತಾಲೂಕು, ಹಾಗೂ ಪ್ರಸಾದ್ ಸುಳ್ಯ ತಾಲೂಕು, ಖಜಾಂಜಿಯಾಗಿ ಮಹೇಶ್ ಕುಮಾರ್ ಪುತ್ತೂರು ತಾಲೂಕು, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷರಾಗಿ ಸಂತೋಷ್ ಕುಮಾರ್ ಕಡಬ ತಾಲೂಕು, ರಾಜ್ಯ ಸಂಚಾಲಕರಾಗಿ ಜಯಪ್ರಕಾಶ್ ಮಂಗಳೂರು ತಾಲೂಕು ಮತ್ತು ಪೌಝಿಯಾ ಬೆಳ್ತಂಗಡಿ ತಾಲೂಕು ಸಂಘದ ಸಲಹಾ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಸುನಿಲ್ ಪಿ.ವಿ. ಕಡಬ ತಾಲೂಕು, ಜಿಲ್ಲಾ ಕಾರ್ಯದರ್ಶಿಯಾಗಿ ಜೋಸೆಫ್ ಎಂ.ಜೆ. ಬೆಳ್ತಂಗಡಿ ತಾಲೂಕು, ಜಿಲ್ಲಾ ಅಧ್ಯಕ್ಷರು ಮಹಿಳಾ ಘಟಕ ಉಮಾ ಸುಳ್ಯ ತಾಲೂಕು, ಸದಸ್ಯರುಗಳಾಗಿ ಮುತ್ತಪ್ಪ ಪೆರಾಬೆ, ಹರೀಶ್ ಧರ್ಮಸ್ಥಳ, ಗಣೇಶ್ ಮೇಲಂತಬೆಟ್ಟು, ಮೀನಾಕ್ಷಿ ಸುಳ್ಯ, ಮೋಹನ್ ಪುತ್ತೂರು, ಚೇತನ್ ಚಾರ್ಮಾಡಿ ಇವರನ್ನು ಆರಿಸಲಾಯಿತು.