ಬೆಳ್ತಂಗಡಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ

Suddi Udaya

ಬೆಳ್ತಂಗಡಿ: ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಜೂ.12 ರಂದು ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಜನಸಂಪರ್ಕ ಸಭೆ ನಡೆಸಿ, ಸಾರ್ವಜನಿಕರಿಂದ ಆಹವಾಲು ಸ್ವೀಕರಿಸಿದರು.


ಮಂಗಳೂರು ಲೋಕಾಯುಕ್ತ ವಿಭಾಗದ ಎಸ್.ಪಿ ನಟರಾಜ್ ಎಂ.ಎ ಅಧ್ಯಕ್ಷತೆ ವಹಿಸಿದ್ದರು. ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಅಮನುಲ್ಲಾ ಎ. ಹಾಗೂ ಚಂದ್ರಶೇಖರ್ ಕೆ.ಎನ್ ಮತ್ತು ಚಂದ್ರಶೇಖರ್ ಸಿ.ಎಲ್, ಸಿಬ್ಬಂದಿಗಳಾದ ಮಹೇಶ್, ವಿನಾಯಕ್, ಡಿ.ಬಿ, ಪಾಪಣ್ಣ, ಧರ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.


ಸಭೆಯಲ್ಲಿ ಸಾರ್ವಜನಿಕರು ಸರಕಾರಿ ಇಲಾಖೆಗಳಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ದೂರುಗಳನ್ನು ನೀಡಿದರು. ಮರೋಡಿ ಕೂಕ್ರಬೆಟ್ಟುವಿನ ಸುಬ್ರಹ್ಮಣ್ಯ ಭಟ್, ಹರಿಶ್ಚಂದ್ರ ತಾಮ್ಹಣ್‌ಕರ್ ಪಿಲ್ಯ, ಅರಸಿನಮಕ್ಕಿಯ ರಾಜು ಕೆ.ಕೆ, ಬೆಳ್ತಂಗಡಿಯ ವಿ.ಆರ್ ನಾಯಕ್, ಹೊಸಂಗಡಿಯ ರಾಜೇಶ್, ತಾ.ಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ ಸೆಬಾಸ್ಟಿನ್ ನೆರಿಯ ಅವರು ವಿವಿಧ ವಿಷಯಗಳ ಬಗ್ಗೆ ದೂರು ನೀಡಿದರು. ಲೋಕಾಯುಕ್ತ ಅಧಿಕಾರಿಗಳು ದೂರನ್ನು ಸ್ವೀಕರಿಸಿ, ಕೆಲವೊಂದು ದೂರುಗಳ ಬಗ್ಗೆ ಕಂದಾಯ, ಸರ್ವೆ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿ ದೂರುದಾರರಿಗೆ ಮಾಹಿತಿ ನೀಡಿದರು.

Leave a Comment

error: Content is protected !!