April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಸರಳಿಕಟ್ಟೆ ಪ್ರೌಢಶಾಲೆಯಲ್ಲಿ ಯುವ ಸಂಸತ್ತು ಚುನಾವಣೆ


ಬಾರ್ಯ: ಸರಳಿಕಟ್ಟೆಯ ಸರಕಾರಿ ಪ್ರೌಢಶಾಲೆಯಲ್ಲಿ 2024-25ನೇ ಸಾಲಿಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಯುವ ಸಂಸತ್ತಿಗೆ ಶಾಲಾ ನಾಯಕ ಹಾಗೂ ಶಾಲಾ ಉಪನಾಯಕನ ಆಯ್ಕೆ ನಡೆಸಲಾಯಿತು. ಮೊಬೈಲ್ ಇ.ವಿ.ಎಂ. ಆಪ್ ಬಳಸಿ ಮತ ಚಲಾಯಿಸುವ ವಿಧಾನದ ಬಗ್ಗೆ ವಿವರಿಸಿ ನಂತರ ವಿದ್ಯಾರ್ಥಿಗಳಿಗೆ ಮತದಾನದ ಅವಕಾಶ ನೀಡಲಾಯಿತು.


ಶಾಲಾ ನಾಯಕನಾಗಿ 10ನೇ ತರಗತಿಯ ಇಸ್ಮಾಯಿಲ್ ರಂಶಿದ್, ಉಪನಾಯಕನಾಗಿ 9ನೇ ತರಗತಿಯ ಮುಹಮ್ಮದ್ ಅಶ್ವರ್ ಆಯ್ಕೆಯಾದರು. ವಿರೋಧ ಪಕ್ಷದ ನಾಯಕನಾಗಿ 10ನೇ ತರಗತಿಯ ಮಹಮ್ಮದ್ ಅಜ್ಮಲ್ ವಿರೋಧ ಪಕ್ಷದ ಉಪನಾಯಕಿಯಾಗಿ 9ನೇ ತರಗತಿಯ ಫಾತಿಮತ್ ಅಫ್ರ ಆಯ್ಕೆಯಾದರು.

ಚುನಾವಣಾ ಸಾಕ್ಷರತಾ ಕ್ಲಬ್ ನ ಸಂಚಾಲಕರಾದ ವಿಜಯಶ್ರೀ ಯವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಮುಖ್ಯೋಪಾಧ್ಯಾಯರಾದ ಹರಿಕಿರಣ್ ಕೆ ಇವರ ಮಾರ್ಗದರ್ಶನದಲ್ಲಿ ಸಹಶಿಕ್ಷಕರಾದ ಮಹಮ್ಮದ್ ಹನೀಫ್, ನಳಿನಾಕ್ಷಿ, ವಿಜಯಶ್ರೀ, ಸಪ್ನಾರಾವ್, ಶಾಂತಾ, ಗಂಗವ್ವ, ರಾಜೇಸಾಬ್ ಹೊಸಕೇರಿ ಹಾಗೂ ತಾರಾ ಚುನಾವಣಾ ಪ್ರಕ್ರಿಯೆ ನಡೆಸಲು ಸಹಕರಿಸಿದರು.

Related posts

ಮಡಂತ್ಯಾರು: ಬಿದ್ದ ಪರ್ಸ್ ಹಿಂದುರುಗಿಸಿ ಕೊಟ್ಟು ಮಾನವೀಯತೆ ಮೆರೆದ ಆಟೋ ಚಾಲಕ ಇರ್ಷಾದ್

Suddi Udaya

ಅಂಡಿಂಜೆ : ಮಜಲಡ್ಡ ನಿವಾಸಿ ನೋಣಯ್ಯ ಪೂಜಾರಿ ನಿಧನ

Suddi Udaya

ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಶ್ರೀನಿವಾಸ್ ಡಿ.ಪಿ

Suddi Udaya

ಬೆಳ್ತಂಗಡಿ: ಶ್ರೀ ವೀರಾಂಜನೇಯ ಸೇವಾ ಸಮಿತಿ ವತಿಯಿಂದ ಬಡಕುಟುಂಬಗಳಿಗೆ ಸಹಾಯಧನ ಹಸ್ತಾಂತರ

Suddi Udaya

ಮಚ್ಚಿನ ಅನಂತೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ರಕ್ಷಿತ್ ಶಿವರಾಮ್ ಭೇಟಿ, ಪ್ರಾರ್ಥನೆ

Suddi Udaya
error: Content is protected !!