25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ದ.ಕ ಜಿಲ್ಲಾ ಎಂಆರ್‌ಡಬ್ಲ್ಯೂ , ವಿಆರ್‌ಡಬ್ಲ್ಯೂ , ಯುಆರ್‌ಡಬ್ಲ್ಯೂ ವಿಕಲಚೇತನರ ಗೌರವಧನದ ಕಾರ್ಯಕರ್ತರ ಸಂಘ ರಚನೆ

ಬೆಳ್ತಂಗಡಿ: ಕರ್ನಾಟಕ ರಾಜ್ಯಾದಲ್ಲಿ ಇರುವ ಗ್ರಾಮ ಪಂಚಾಯತ್ ನಗರ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ಗಳಲ್ಲಿ 16 ವರ್ಷಗಳಿಂದ ವಿಶೇಷಚೇತನರಿಗೆ ಹಾಗೂ ಹಿರಿಯ ನಾಗರಿಕರ ಸೇವೆಗಾಗಿ ಗೌರವಧನದ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂಆರ್‌ಡಬ್ಲು, ವಿಆರ್‌ಡಬ್ಲು, ಯುಆರ್‌ಡಬ್ಲು ನೌಕರರು, ಸರಕಾರಿ ನೌಕರಿಗೆ ಸಿಗುವ ಸೌಲಭ್ಯದಿಂದ ವಂಚಿತರಾಗಿದ್ದು, ಹುದ್ದೆ ಖಾಯಮಾತಿ ಇಲ್ಲದೇ ಇವರ ಬದುಕು ಚಿಂತಾಜನಕವಾಗಿದೆ ಅದೂ ಕೂಡ ನೌಕರರು ವಿಶೇಷ ಚೇತನರಾಗಿದ್ದಾರೆ. ಇವರ ಬದುಕನ್ನು ರೂಪಿಸುವ ಸಲುವಾಗಿ ಕರ್ನಾಟಕ ರಾಜ್ಯದಾದಂತ್ಯ ಇರುವ ನೌಕರರ ಖಾಯಮಾತಿ ಹಾಗೂ ಸರಕಾರಿ ನೌಕರಿಗೆ ಇರುವ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸುಮಾರು 3 ವರ್ಷಗಳಿಂದ ಕರ್ನಾಟಕದಾದ್ಯಂತ ಸಂಚರಿಸಿ ನವ ಕರ್ನಾಟಕ (ಎಂಆರ್‌ಡಬ್ಲ್ಯೂ , ವಿಆರ್‌ಡಬ್ಲ್ಯೂ , ಯುಆರ್‌ಡಬ್ಲ್ಯೂ ) ಸಂಘದ ಶಾಖೆಯನ್ನು ರಾಜ್ಯದ ಜಿಲ್ಲೆಗಳಿಗೆಲ್ಲ ವಿಸ್ತರಿಸುವ ಉದ್ದೇಶದಿಂದ ಜೂ.8 ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷ ಡಾ. ಅಂಬಾಜಿ ಮೇಟಿ ಹಾಗೂ ನವ ಕರ್ನಾಟಕ ಸಂಘದ ಅಧ್ಯಕ್ಷ ಪಕೀರ ಗೌಡ ಪಾಟೀಲ್ ಇವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಂಆರ್‌ಡಬ್ಲ್ಯೂ , ವಿಆರ್‌ಡಬ್ಲ್ಯೂ , ಯುಆರ್‌ಡಬ್ಲ್ಯೂ ವಿಕಲಚೇತನರ ಗೌರವಧನದ ಕಾರ್ಯಕರ್ತರ ಸಂಘವನ್ನು ರಚಿಸಲಾಯಿತು.

ಗೌರವಧ್ಯಕ್ಷರಾಗಿ ಪುಟ್ಟಣ್ಣ ವಾಲಿಕಾಜೆ ಸುಳ್ಯ ತಾಲೂಕು, ಜಿಲ್ಲಾಧ್ಯಕ್ಷರಾಗಿ ವಿಜಯ ಕುಮಾರ್ ಕಡಬ ತಾಲೂಕು, ಜಿಲ್ಲಾ ಉಪಾಧ್ಯಕ್ಷರಾಗಿ ಶೇಷಪ್ಪ ಪುತ್ತೂರು ತಾಲೂಕು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಹೀರಣ್ಣ ಬೆಳ್ತಂಗಡಿ ತಾಲೂಕು, ಕಾರ್ಯದರ್ಶಿಯಾಗಿ ಸುರೇಶ್ ಬಂಟ್ವಾಳ ತಾಲೂಕು, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ವಿಪುಲ್ ಬೆಳ್ತಂಗಡಿ ತಾಲೂಕು, ಹಾಗೂ ಪ್ರಸಾದ್ ಸುಳ್ಯ ತಾಲೂಕು, ಖಜಾಂಜಿಯಾಗಿ ಮಹೇಶ್ ಕುಮಾರ್ ಪುತ್ತೂರು ತಾಲೂಕು, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷರಾಗಿ ಸಂತೋಷ್ ಕುಮಾರ್ ಕಡಬ ತಾಲೂಕು, ರಾಜ್ಯ ಸಂಚಾಲಕರಾಗಿ ಜಯಪ್ರಕಾಶ್ ಮಂಗಳೂರು ತಾಲೂಕು ಮತ್ತು ಪೌಝಿಯಾ ಬೆಳ್ತಂಗಡಿ ತಾಲೂಕು ಸಂಘದ ಸಲಹಾ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಸುನಿಲ್ ಪಿ.ವಿ. ಕಡಬ ತಾಲೂಕು, ಜಿಲ್ಲಾ ಕಾರ್ಯದರ್ಶಿಯಾಗಿ ಜೋಸೆಫ್ ಎಂ.ಜೆ. ಬೆಳ್ತಂಗಡಿ ತಾಲೂಕು, ಜಿಲ್ಲಾ ಅಧ್ಯಕ್ಷರು ಮಹಿಳಾ ಘಟಕ ಉಮಾ ಸುಳ್ಯ ತಾಲೂಕು, ಸದಸ್ಯರುಗಳಾಗಿ ಮುತ್ತಪ್ಪ ಪೆರಾಬೆ, ಹರೀಶ್ ಧರ್ಮಸ್ಥಳ, ಗಣೇಶ್ ಮೇಲಂತಬೆಟ್ಟು, ಮೀನಾಕ್ಷಿ ಸುಳ್ಯ, ಮೋಹನ್ ಪುತ್ತೂರು, ಚೇತನ್ ಚಾರ್ಮಾಡಿ ಇವರನ್ನು ಆರಿಸಲಾಯಿತು.

Related posts

ಮೇಲಂತಬೆಟ್ಟು ಭಗವತಿ ದೇವಸ್ಥಾನ ರಸ್ತೆಗೆ ಹಾಕಿದ್ದ ಬೇಲಿ ತೆರವು

Suddi Udaya

ನಾವೂರು: ಕೈಕಂಬ ಸೇತುವೆಯಲ್ಲಿ ಘನ ವಾಹನ ಸಂಚಾರಿಸದಂತೆ ಮರದ ತಡೆಗೋಡೆ ನಿರ್ಮಾಣ

Suddi Udaya

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ವಾಣಿ ಕಾಲೇಜಿನ ಬಾಲಕರ ತಂಡವು ದ್ವಿತೀಯ ಪ್ರಶಸ್ತಿ

Suddi Udaya

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಒತ್ತಡ ನಿರ್ವಹಣಾ ಮಾರ್ಗದರ್ಶನ

Suddi Udaya

ಉಜಿರೆ ನಿನ್ನಿಕಲ್ಲು ಬಳಿ 30ಕೆ.ವಿ ವಿದ್ಯುತ್ ಘಟಕ ಸ್ಥಾಪನೆಯ ಬಗ್ಗೆ ವಿಧಾನ ಪರಿಷತ್ ಅಧಿವೇಶನಲ್ಲಿ ಪ್ರಶ್ನಿಸಿದ ವಿ.ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್

Suddi Udaya

ಕೊಕ್ಕಡ ಸಂಗಮ್ ಯುವಕ ಮಂಡಲದ ಸದಸ್ಯರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!