24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾಲ್ಕೂರಿನಲ್ಲಿ ಹುಲ್ಲು ಕತ್ತರಿಸುವಾಗ ನಡೆದ ಆಕಸ್ಮಿಕ ಘಟನೆ ಯಂತ್ರಕ್ಕೆ ಸಿಲುಕಿದ ವ್ಯಕ್ತಿಯ ಎರಡು ಕೈಗಳುಒಂದು ಕೈಯ ಅಂಗೈ ತುಂಡು, ಇನ್ನೊಂದು ಕೈಯ ಬೆರಳು ಕಟ್

ಬೆಳ್ತಂಗಡಿ: ಬಳಂಜ ಗ್ರಾಮ ಪಂಚಾಯತು ವ್ಯಾಪ್ತಿಯ ನಾಲ್ಕೂರು ಗ್ರಾಮದ ನಂದ್ರಟ್ಟ ಎಂಬಲ್ಲಿ ದನಗಳಿಗೆ ಹುಲ್ಲು(ಮೇವು) ಕತ್ತರಿಸುವ ಯಂತ್ರದಲ್ಲಿ ಹುಲ್ಲು ಕತ್ತರಿಸುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವ್ಯಕ್ತಿಯೋರ್ವರ ಎರಡು ಕೈಗಳು ಯಂತ್ರಕ್ಕೆ ಸಿಲುಕಿ ತುಂಡಾದ ದಾರುಣ ಘಟನೆ ಇಂದು ಸಂಜೆ ಸಂಭವಿಸಿದೆ.

ನಾಲ್ಕೂರು ಗ್ರಾಮದ ನಂದ್ರಟ್ಟ ಜಯಾನಂದ ಪೂಜಾರಿಯವರ ಮನೆಯಲ್ಲಿ ಸ್ಥಳೀಯ ನಿವಾಸಿ ಲಕ್ಷ್ಮಣ ಶೆಟ್ಟಿಯವರು ಅವರು ದನಗಳಿಗೆ ಹುಲ್ಲು ಕತ್ತರಿಸುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಹುಲ್ಲು ಕತ್ತರಿಸುವಾಗ ಆಕಸ್ಮಿಕವಾಗಿ ಹುಲ್ಲಿನ ಜೊತೆ ಲಕ್ಷ್ಮಣ ಶೆಟ್ಟಿಯವರ ಎರಡು ಕೈಗಳು ಯಂತ್ರದೊಳಗೆ ಹೋಗಿದ್ದು, ಒಂದು ಕೈಯ ಅಂಗೈ ಪೂರ್ತಿ ತುಂಡಾಗಿದೆ. ಇನ್ನೊಂದು ಕೈಯ ಬೆರಳುಗಳು ತುಂಡಾಗಿರುವುದಾಗಿ ತಿಳಿದು ಬಂದಿದೆ. ಕೂಡಲೇ ಅವರನ್ನು ಮನೆಯವರು ಹಾಗೂ ಸ್ಥಳೀಯರ ಸಹಕಾರದಲ್ಲಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Related posts

ಬೆಳ್ತಂಗಡಿ ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿಯಲ್ಲಿ ಜುಂಬಾ ಫಿಟ್ನೆಸ್ ತರಬೇತಿ ಉದ್ಘಾಟನೆ

Suddi Udaya

ಚಾರ್ಮಾಡಿ ಪರಿಸರದಲ್ಲಿ ಕಾಡಾನೆಗಳ ಹಾವಳಿ : ಕೃಷಿ ಹಾನಿ

Suddi Udaya

ನಾವೂರು ಸರಕಾರಿ ಪ್ರೌಢಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

Suddi Udaya

ಅ.2: ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ

Suddi Udaya

ಬೆದ್ರಬೆಟ್ಟು ಶ್ರೀ ಮಹಮ್ಮಾಯಿ ಮಾರಿಗುಡಿ ಪುನರ್‌ಪ್ರತಿಷ್ಠಾ ಮಹೋತ್ಸವ ಹಾಗೂ ದೊಂಪದ ಬಲಿ ಉತ್ಸವ: ಧ್ವಜಾರೋಹಣ, ಕಾರ್ಯಾಲಯ ಉದ್ಘಾಟನೆ, ಉಗ್ರಾಣ ಉದ್ಘಾಟನೆಹೊರೆಕಾಣಿಕೆ ಸಮರ್ಪಣೆ

Suddi Udaya

ಪಶ್ಚಿಮಘಟ್ಟಗಳ ಸಾಲಿನ ಪ್ರವಾಸಿ ತಾಣಗಳು 6 ದಿನಗಳ ಕಾಲ ನಿರ್ಬಂಧ

Suddi Udaya
error: Content is protected !!