24.8 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ದಾಂಡೇಲಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕನ್ಯಾಡಿಯ ಸಂದೇಶ್.ಎಸ್.ಜೈನ್ ಆಯ್ಕೆ

ಬೆಳ್ತಂಗಡಿ : ತಾಲೂಕಿನ ಕನ್ಯಾಡಿ1 ಗ್ರಾಮದ ನಿವಾಸಿಯಾಗಿದ್ದು, ಪ್ರಸಕ್ತ ದಾಂಡೇಲಿಯ‌ಲ್ಲಿ ಪತ್ರಕರ್ತರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಸಂದೇಶ್.ಎಸ್.ಜೈನ್ ಅವರು ದಾಂಡೇಲಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಪತ್ರಕರ್ತರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಸಂದೇಶ್.ಎಸ್.ಜೈನ್ ಅವರು ದಾಂಡೇಲಿ ಜೈನ ಸಮಾಜದ ಅಧ್ಯಕ್ಷರಾಗಿಯೂ ಮತ್ತು ವಿವಿಧ ಸಂಘ-ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸರ್ವಧರ್ಮ ಸಮನ್ವಯತೆಯನ್ನು ಸಾರುವ ಹಿಂದೂ ಮುಸ್ಲಿಂ ಕ್ರೈಸ್ತ ಯುವಕ ಮಂಡಳದ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ.

ಇವರು ನಾಭಿರಾಜ್ ಜೈನ್ ಮತ್ತು ಶಶಿಕಲಾ ಜೈನ್ ದಂಪತಿಗಳ ಸುಪುತ್ರರಾಗಿದ್ದಾರೆ.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ರಕ್ಷಾಬಂಧನ ಆಚರಣೆ

Suddi Udaya

ಹಿರಿಯರ ಆಶಯವನ್ನು ಎತ್ತಿ ಹಿಡಿಯಲು ಸ್ವಾತಂತ್ರೋತ್ಸವ ಪ್ರೇರಣೆಯಾಗಲಿ : ಬಿ.ಎಂ.ಭಟ್

Suddi Udaya

ಬೋಳಿಯರ್ ರಸ್ತೆ ಬದಿಯಲ್ಲಿ ಮತ್ತೆ ಪ್ರತ್ಯಕ್ಷವಾದ ಕಾಡಾನೆ

Suddi Udaya

ಉಜಿರೆ: ಶ್ರೀ ಧ.ಮಂ. ಆಂ.ಮಾ. (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಪೋಷಕರ ಜಾಗೃತಿ ಕಾರ್ಯಕ್ರಮ

Suddi Udaya

ಶಿರಸಿಯ ನಾರಾಯಣ ಆರ್ ಕೋಮಾರ್ ರವರಿಂದ ಸೇವಾಧಾಮಕ್ಕೆ ಧನ ಸಹಾಯ

Suddi Udaya

ಶ್ರೀ. ಕ್ಷೆ. ಧ. ಗ್ರಾ ಯೋಜನೆಯ ಬಜಿರೆ ಒಕ್ಕೂಟದ ಪದಗ್ರಹಣ ಹಾಗೂ 19ನೇ ವರ್ಷದ ಶನೇಶ್ವರ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya
error: Content is protected !!