32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪೋಕ್ಸೋ ಪ್ರಕರಣ: ಬಿಜೆಪಿ ಎಸ್.ಟಿ. ಮೋರ್ಚಾದ ಅಧ್ಯಕ್ಷ ರಾಜೇಶ್ ಎಂ.ಕೆ. ಹಾಗೂ ಮೋಹನ್ ರಿಗೆ ಜಾಮೀನು ಮಂಜೂರು

ಬೆಳ್ತಂಗಡಿ: ಬಿಜೆಪಿ ಬೆಳ್ತಂಗಡಿ ತಾಲೂಕು ಎಸ್.ಟಿ. ಮೋರ್ಚಾದ ಅಧ್ಯಕ್ಷ ರಾಜೇಶ್ ಎಂ.ಕೆ. ಸಹಿತ ಇಬ್ಬರಿಗೆ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಕಳೆಂಜದಲ್ಲಿರುವ ತನ್ನ ಅಡಿಕೆ ಅಂಗಡಿ ಬಂದ್ ಮಾಡಿ ಮನೆಗೆ ಹೊರಡುವ ವೇಳೆ ಬಿಜೆಪಿ ಮುಖಂಡ ರಾಜೇಶ್ ಎಂ.ಕೆ.ಅವರಿಗೆ ಕಾಂಗ್ರೆಸ್ ಮುಖಂಡ ಕುಶಾಲಪ್ಪ ಗೌಡ ಎಂಬವರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಬಳಿಕ ಉಜಿರೆ ಬೆನಕ ಆಸ್ಪತ್ರೆಗೆ ದಾಖಲಾಗಿದ್ದ ರಾಜೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಎ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಜೇಶ್ ಎಂ.ಕೆ.ಅವರ ಕೊಲೆ ಯತ್ನ ಪ್ರಯತ್ನ ನಡೆದ ಬೆನ್ನಿಗೇ ರಾಜೇಶ್ ಮತ್ತು ಅಭಿ ಯಾನೆ ಮೋಹನ್ ಎಂಬವರ ವಿರುದ್ಧ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪೋಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಬಂಧನ ಭೀತಿಯಲ್ಲಿದ್ದ ರಾಜೇಶ್ ಎಂ.ಕೆ. ಮತ್ತು ಅಭಿ ಯಾನೆ ಮೋಹನ್ ಅವರಿಗೆ ಜೂನ್ 14ರಂದು ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ಖ್ಯಾತ ವಕೀಲ ಶಂಭು ಶರ್ಮ ವಾದಿಸಿದ್ದರು.

Related posts

ಧಮ೯ಸ್ಥಳ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

Suddi Udaya

ಇಂದಬೆಟ್ಟು : ಜಾನುವಾರುಗಳಿಗೆ ಚರ್ಮಗಂಟು ರೋಗದ ವಿರುದ್ಧ ಲಸಿಕಾ ಅಭಿಯಾನ

Suddi Udaya

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನೃತ್ಯ ಸ್ಪರ್ಧೆ: ಉಜಿರೆಯ ಎಸ್.ಡಿ.ಎಂ. ಪ.ಪೂ. ಕಾಲೇಜಿನ ಉಪನ್ಯಾಸಕರ ತಂಡವು ಪ್ರಥಮ ಸ್ಥಾನ

Suddi Udaya

ಮೇಲಂತಬೆಟ್ಟು ಭಗವತಿ ದೇವಸ್ಥಾನ ರಸ್ತೆಗೆ ಹಾಕಿದ್ದ ಬೇಲಿ ತೆರವು

Suddi Udaya

ಕುವೆಟ್ಟು ಗ್ರಾ.ಪಂ. ವತಿಯಿಂದ ಚರಂಡಿ ದುರಸ್ಥಿ ಕಾರ್ಯ

Suddi Udaya

ಶಿರ್ಲಾಲು ಶಾಲಾ ಹಳೆವಿದ್ಯಾರ್ಥಿ ಸಂಘದಿಂದ ಆರ್ಥಿಕ ನೆರವು

Suddi Udaya
error: Content is protected !!