23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸುಲ್ಕೇರಿ ಶ್ರೀವಿದ್ಯಾ ಸಂಸ್ಥೆಯ ಶಾಲಾ ನೂತನ ಕಟ್ಟಡ ಹಾಗೂ ನೂತನ ಶಿಶುಮಂದಿರದ ಕುಟೀರ ಉದ್ಘಾಟನೆ

ಸುಲ್ಕೇರಿ: ಶ್ರೀರಾಮ ಶಿಶುಮಂದಿರದ ನೂತನ ಕುಟೀರ ಉದ್ಘಾಟನೆ ಮತ್ತು ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀರಾಮ ಪ್ರೌಢ ಶಾಲೆ ಸುಲ್ಕೇರಿ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.


ಎಲ್ಲಾ ಪೂಜಾ ವಿಧಿವಿಧಾನಗಳ ನಂತರ ಶಿಶುಮಂದಿರದ ನೂತನ ಕುಟೀರವನ್ನು ರಾಷ್ಟ್ರೀಯ ಸ್ವಯಸೇವಕ ಸಂಘ ಮಂಗಳೂರು ವಿಭಾಗ ಮಾನ್ಯ ಸಂಘ ಚಾಲಕರು ಡಾ. ನಾರಾಯಣ ಶೆಣೈ ಭಾರತಾಂಬೆಗೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಕಾರ್ಕಳ ಕಮಲಾಕ್ಷ ಕಾಮತ್ ಶಿಶುಮಂದಿರದ ಬಳಿ ಪ್ರತಿಷ್ಠಾಪಿಸಿದ ಸರಸ್ವತಿ ವಿಗ್ರಹವನ್ನು ಅನಾವರಣ ಮಾಡಿದರು. ಶಿಶುಮಂದಿರದ ಪುಟಾಣಿಗಳಿಗೆ ಆರತಿ ಬೆಳಗಿ ತಿಲಕ ಇಟ್ಟು ಸಿಹಿ ನೀಡಲಾಯಿತು ವಿಧ್ಯಾರ್ಥಿಗಳು ಶಿಶುಮಂದಿರದ ನೂತನ ಕುಟೀರದ ಹೊಸ್ತಿಲಿಗೆ ನಮಸ್ಕಾರ ಮಾಡಿ ಒಳಗೆ ಪ್ರವೇಶ ಮಾಡಿದರು. ನಂತರ ಎಮ್.ಆರ್.ಪಿ.ಎಲ್ ನ ಸಿಎಸ್ಆರ್ ಮೂಲಕ ನಿರ್ಮಿಸಲಾದ 4 ಕೊಠಡಿಗಳ ನೂತನ ಕಟ್ಟಡವನ್ನು ಎಮ್.ಆರ್.ಪಿ.ಎಲ್ ನ ಹಿರಿಯ ಅಧಿಕಾರಿ ಪ್ರದೀಪ್ ಉದ್ಘಾಟಿಸಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ಸಭಕಾರ್ಯಕ್ರಮ ನಡೆಯಿತು,

ವೇದಿಕೆಯಲ್ಲಿ ಎಮ್.ಆರ್.ಪಿ.ಎಲ್ ನ ಅಧಿಕಾರಿ ಪ್ರದೀಪ್ ಸೇರಿದಂತೆ ಪ್ರಮುಕ ದಾನಿಗಳನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕಾರ್ಕಳ ಕಮಲಾಕ್ಷ ಕಾಮತ್, ಡಾ.ರವೀಂದ್ರ ಶೆಟ್ಟಿ ಅಧ್ಯಕ್ಷರು ರಾಜ್ಯ ಕೃಷರ್ ಮಾಲೀಕರ ಸಂಘ ಬಜಗೋಳಿ, ಶಾಲಾ ಆಡಳಿತ ಮಂಡಳಿ ಯ ಗೌರವಾಧ್ಯಕ್ಷ ಗಣೇಶ್ ಹೆಗ್ಡೆ ಹಾಗೂ ಅಧ್ಯಕ್ಷರಾದ ರಾಜು ಪೂಜಾರಿ ಉಪಸ್ಥಿತರಿದ್ದರು.

Related posts

ವಿಧಾನಪರಿಷತ್ತು ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಪೂಜಾರಿ

Suddi Udaya

ಉಜಿರೆ: ಟಾಟ ಇಂಡಿಕ್ಯಾಶ್ ಎಟಿಎಂ ಸೇವೆ ಶುಭಾರಂಭ

Suddi Udaya

ಗೇರುಕಟ್ಟೆಯಲ್ಲಿ ತಡರಾತ್ರಿ ತ್ಯಾಜ್ಯ ಎಸೆದವನಿಗೆ ಬಿತ್ತು ದಂಡ: ಪಂ.ಸದಸ್ಯರ, ಅಭಿವೃದ್ಧಿ ಅಧಿಕಾರಿ ಮತ್ತು ಮಾಜಿ ಅಧ್ಯಕ್ಷರ ತಡರಾತ್ರಿ ಕಾರ್ಯಾಚರಣೆ

Suddi Udaya

ಬಂದಾರು ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ಗಣಿತ ದಿನಾಚರಣೆ

Suddi Udaya

ಧರ್ಮಸ್ಥಳ ಪಾಂಗಳ ಕ್ರಾಸ್ ನಲ್ಲಿ ಗುಂಪುಗಳ ನಡುವೆ ಅಹಿತಕರ ಘಟನೆ: ಧರ್ಮಸ್ಥಳ ಠಾಣೆಯಲ್ಲಿ 4 ಪ್ರಕರಣ ಹಾಗೂ ಬೆಳ್ತಂಗಡಿ ಠಾಣೆಯಲ್ಲಿ 3 ಪ್ರಕರಣ ದಾಖಲು

Suddi Udaya
error: Content is protected !!