31.1 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರುವಾಯನಕೆರೆ: ಎಕ್ಸೆಲ್ ನಲ್ಲಿ ಪ್ರತಿಭಾವಂತರಿಗೆ ಉಚಿತ ನೀಟ್ ಲಾಂಗ್ ಟರ್ಮ್ ಕೋಚಿಂಗ್

ಗುರುವಾಯನಕೆರೆ: ಸಾಧನೆಗಳ ಮೂಲಕ ರಾಜ್ಯದ ಶೈಕ್ಷಣಿಕ ಭೂಪಟದಲ್ಲೇ ಅನನ್ಯ ಸ್ಥಾನಗಳಿಸಿದ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಇನ್ಫಿನಿಟಿ ಲರ್ನಿಂಗ್ ಫೌಂಡೇಶನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಕ್ಸೆಲ್ ನೀಟ್ ಅಕಾಡೆಮಿಯ ಮೂಲಕ ನೀಟ್ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಿದೆ.

ರಾಷ್ಟ್ರಮಟ್ಟದಲ್ಲಿ ಅತಿ ಹೆಚ್ಚು ಸರಕಾರಿ ವೈದ್ಯಕೀಯ ಸೀಟುಗಳನ್ನು ಪಡೆದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಎಕ್ಸೆಲ್ ಅಕಾಡೆಮಿಯು ಕಳೆದ ಶೈಕ್ಷಣಿಕ ವರ್ಷದಲ್ಲಿ 103 ವಿದ್ಯಾರ್ಥಿಗಳಿಗೆ ಹಾಗೂ ಈ ವರ್ಷ ಸುಮಾರು 250 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸರಕಾರಿ ವೈದ್ಯಕೀಯ ಸೀಟುಗಳು ಲಭಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದೆ. ಗ್ರಾಮೀಣ ಭಾಗದ ಮತ್ತು ನಗರದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ವೈದ್ಯರಾಗುವ ಕನಸಿಗೆ ಸದಾ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಈ ಬಾರಿಯ ಫಲಿತಾಂಶವು ಈಗಾಗಲೇ ಪ್ರಕಟಗೊಂಡಿದ್ದು ಎಕ್ಸೆಲ್ ಸಂಸ್ಥೆಯ ಪ್ರಜ್ವಲ್ ಎಚ್.ಎಂ. 720 ಅಂಕಗಳಲ್ಲಿ 710 ಅಂಕಗಳನ್ನು ಪಡೆದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಾಧಕರ ನಡುವೆ ಗುರುತಿಸಿಕೊಂಡಿರುತ್ತಾನೆ. ಇದರೊಂದಿಗೆ 6 ವಿದ್ಯಾರ್ಥಿಗಳು 650 ಕ್ಕಿಂತ ಹೆಚ್ಚಿನ ಅಂಕಗಳನ್ನು, 21 ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚಿನ ಅಂಕಗಳನ್ನು, 97 ವಿದ್ಯಾರ್ಥಿಗಳು 550 ಕ್ಕಿಂತ ಹೆಚ್ಚಿನ ಅಂಕಗಳನ್ನು, 141 ವಿದ್ಯಾರ್ಥಿಗಳು 500 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ನೀಟ್ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಎಕ್ಸೆಲ್ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯ ಸಾಧನೆಯ ಮೂಲಕ ಭಾರತದ ಪ್ರತಿಷ್ಠಿತ ಪ್ರಥಮ ಹಂತದ ವೈದ್ಯಕೀಯ ಕಾಲೇಜು ಏಮ್ಸ್ ನಲ್ಲಿ ವೈದ್ಯಕೀಯ ತರಬೇತಿ ಪಡೆಯುತ್ತಿದ್ದಾರೆ. 35 ನೇಯ ರಾಷ್ಟ್ರೀಯ ಕೆಟಗರಿ ರಾಂಕ್ ಪಡೆದುಕೊಂಡ ಸಂಜನಾ ಈರೈನವರ್ ಭೋಪಾಲ್ ನ ಏಮ್ಸ್ (AIIMS) ನಲ್ಲಿ ಸ್ಥಾನ ಪಡೆದರೆ, 720ರ ಪೈಕಿ 692 ಅಂಕಗಳನ್ನು ಪಡೆದ ಆದಿತ್ ಜೈನ್ ಭುವನೇಶ್ವರದ ಏಮ್ಸ್ ನಲ್ಲಿ ಮೆಡಿಕಲ್ ಕೋರ್ಸ್ ಗೆ ಆಯ್ಕೆಯಾಗಿದ್ದಾರೆ. ಅಷ್ಟು ಮಾತ್ರವಲ್ಲದೆ 710 ಅಂಕ ಗಳಿಸಿದ ಪ್ರಜ್ವಲ್ ಎಚ್.ಎಂ ಕೂಡಾ ಏಮ್ಸ್ ನಲ್ಲಿ ತರಬೇತಿ ಹೊಂದಲು ಅವಕಾಶ ದೊರೆಯುತ್ತಿದೆ. 2023-24 ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಯಲ್ಲಿ 95 ಶೇಕಡಾ ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡ ವರಿಗೆ ಸಂಪೂರ್ಣ ಉಚಿತ ನೀಟ್ ಕೋಚಿಂಗ್, – ⁠85 ಶೇಕಡ ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಕೊಂಡವರಿಗೆ ಕಾಲೇಜು ಶುಲ್ಕದಲ್ಲಿ ರಿಯಾಯಿತಿ ಇರುತ್ತದೆ. – ⁠ನೀಟ್ ಪರೀಕ್ಷೆ ಯಲ್ಲಿ 500 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಕೋಚಿಂಗ್ ನೀಡಲಾಗುತ್ತದೆ. – ⁠450 ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ.

ಎಕ್ಸೆಲ್ ಟಾಪರ್ ಗೆ ಪ್ರತಿ ವರ್ಷ ಹತ್ತು ಲಕ್ಷ ರೂ. ನಗದು ಬಹುಮಾನ
ವೈದ್ಯಕೀಯ ಕ್ಷೇತ್ರಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ ಭಾಗಿಯಾದ ಮಕ್ಕಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಎಕ್ಸೆಲ್ ವಿದ್ಯಾಸಂಸ್ಥೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವು ಫಲಿತಾಂಶ ಬಂದ ತಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರ ಉಪಸ್ಥಿತಿಯಲ್ಲಿ ಸಂಸ್ಥೆಯ ಆಡಳಿತ ವರ್ಗ ಒಳಗೊಂಡು ಒಟ್ಟು ಹತ್ತು ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ನೀಡುತ್ತದೆ.

ಎಕ್ಸೆಲ್ ನ ವೈಶಿಷ್ಟ್ಯ:.
ಇಂಥ ಅಪೂರ್ವ ಸಾಧನೆಗೆ ಎಕ್ಸೆಲ್ ನಲ್ಲಿರುವ ಪಾಠ ಪ್ರವಚನಗಳು ಹಾಗೂ ನಿಯಮಿತ ವ್ಯವಸ್ಥೆಯೇ ಕಾರಣವೆನ್ನುವುದು ವಿದ್ಯಾರ್ಥಿಗಳ ಅಭಿಮತ. – ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿದ , 15 ವರ್ಷಕ್ಕೂ ಅಧಿಕ ಬೋಧನಾ ತರಬೇತಿ ಹೊಂದಿದ, ಅನುಭವಿ, ಪ್ರತಿಭಾವಂತ, ಉನ್ನತ ಶೈಕ್ಷಣಿಕ ಅರ್ಹತೆಗಳಿರುವ ಪ್ರಾಧ್ಯಾಪಕರು ಎಕ್ಸೆಲ್ ನಲ್ಲಿ ಇದ್ದಾರೆ. – ದಾಖಲಾತಿ ಹೊಂದಿದ ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ಗಮನದಲ್ಲಿರಿಸಿಕೊಂಡು ಶಿಕ್ಷಕರೊಡನೆ ಮುಖಾಮುಖಿ ಕಲಿಕೆಗೆ ಅವಕಾಶವನ್ನು ಒದಗಿಸಿಕೊಡಲಾಗಿದೆ. – ⁠ಸ್ಮರಣಶಕ್ತಿ , ಏಕಾಗ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಯೋಗ, ಧ್ಯಾನಕ್ಕೆ ಅವಕಾಶ ನೀಡಲಾಗಿದೆ. – ⁠ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮನಸ್ಸಿನ ಆರೋಗ್ಯ ಕಾಳಜಿ ತೆಗೆದುಕೊಳ್ಳುವ ಚಿಂತನೆಯಲ್ಲಿ ಮಕ್ಕಳಿಗೆ ಆಪ್ತ ಸಲಹೆ – ಮಾರ್ಗದರ್ಶನ ನೀಡುವ ಸೌಲಭ್ಯವನ್ನು ಕಾಲೇಜು ಆವರಣದಲ್ಲಿ ನಿಯೋಜಿಸಲಾಗಿದೆ. – ⁠ಉತ್ತಮ ಸಾತ್ವಿಕ ಆಹಾರ ವ್ಯವಸ್ಥೆಯನ್ನು ಹೊಂದಿದ್ದು ಹೆಚ್ಚಿನ ಕಲಿಕೆಗಾಗಿ ಇ-ಲೈಬ್ರರಿ, ಗ್ರಂಥಾಲಯ, ಶಿಕ್ಷಕರೊಂದಿಗಿನ ಸಂವಾದ ಸೌಲಭ್ಯವನ್ನು ನೀಡುತ್ತಿದೆ. ಇದೀಗ ಎಕ್ಸೆಲ್ ಸಂಸ್ಥೆಯ ಮಕ್ಕಳು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಈ ಪ್ರಾಧ್ಯಾಪಕರ ವಿದ್ಯಾರ್ಥಿಗಳು ಮೆಡಿಕಲ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ

ಶೈಕ್ಷಣಿಕ ತರಬೇತಿಗಾಗಿ ವಿಶಾಲವಾದ ತರಗತಿ ಕೊಠಡಿಗಳನ್ನು ಹೊಂದಿದ್ದು ಬಾಲಕ ಬಾಲಕಿಯರಿಗೆ ಉಳಿದುಕೊಳ್ಳಲು ಕಾಲೇಜು ಆವರಣದೊಳಗೆ ಪ್ರತ್ಯೇಕವಾದ ಸುಸಜ್ಜಿತ ವಸತಿ ನಿಲಯವನ್ನು ಹೊಂದಿಕೊಂಡಿದೆ. 24×7 ವಿದ್ಯುತ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕವನ್ನು ಹೊಂದಿದ್ದು, ವಯ್ಯಕ್ತಿಕ ಕಾಳಜಿ ವಹಿಸುವ ಸಲುವಾಗಿ ಹಗಲು ಮತ್ತು ರಾತ್ರಿ ವಸತಿ ನಿಲಯ ಪಾಲಕರನ್ನು ಒಳಗೊಂಡಿದೆ.
ನಿಮ್ಮ ಮಕ್ಕಳ ವೈದ್ಯಕೀಯ ಕ್ಷೇತ್ರದ ಸಾಧನೆಗಳ ಸಾಕಾರಕ್ಕಾಗಿ ದಾಖಲಾತಿ ಹೊಂದಲು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. 8867242769/ 98808 99769.

ಸಂಸ್ಥಾಪಕರ ನುಡಿ:ಸುಮಂತ್ ಕುಮಾರ್ ಜೈನ್, ಅಧ್ಯಕ್ಷರು, ಎಕ್ಸೆಲ್ ಪದವಿ ಪೂರ್ವ ಕಾಲೇಜು,

ಎಕ್ಸೆಲ್ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲೇ ಅಭೂತಪೂರ್ವವಾದ ಸಾಧನೆ ಗೈದು ಗೆಲುವಿನ ಮೈಲುಗಲ್ಲನ್ನೂ ದಾಟಿ ವಿಜಯದ ಪತಾಕೆಯನ್ನು ನಾಡಿನಾದ್ಯಂತ ಹಾರಿಸಿರುವುದು ಸಂತಸ ತಂದಿದೆ. ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಗೈದ ಎಕ್ಸೆಲ್ ಟಾಪರ್ ಗೆ ಮುಂದಿನ ವೈದ್ಯಕೀಯ ಖರ್ಚು ವೆಚ್ಚಗಳಿಗೆ ಸಹಕಾರವನ್ನು ನೀಡುವ ನಿಟ್ಟಿನಲ್ಲಿ ಕ್ಯಾಶ್ ಪ್ರೈಸ್ ನೀಡುತ್ತಿದ್ದೇವೆ. ಇದರೊಂದಿಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡುತ್ತಿದ್ದೇವೆ. ಈ ತರನಾದ ಫಲಿತಾಂಶಕ್ಕೆ ಶಿಕ್ಷಣ ಸಂಸ್ಥೆಯು ಹೊಂದಿದ ವ್ಯವಸ್ಥೆಯೇ ಪ್ರಮುಖ ಕಾರಣವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಕಲಿಕೆ – ಪರಿಶ್ರಮ- ಕಟ್ಟು ನಿಟ್ಟಾದ ನಿಯಮ ಪಾಲನೆಯ ಜೊತೆಗೆ ಹಾಸ್ಟೆಲ್ ಜೀವನವೆಂಬುವುದು ಭವಿಷ್ಯದಲ್ಲಿ ಕಷ್ಟ ಒದಗಿಬಂದರೂ ನಿರ್ಭೀತಿಯಿಂದ ಬದುಕಲು ಬೇಕಾದ ಜೀವನ ಪಾಠವನ್ನು ಕಲಿಸಿಕೊಡುತ್ತದೆ. ಪ್ರತಿಯೊಂದು ವಿದ್ಯಾರ್ಥಿಯ ಕಲಿಕೆಯ ಪ್ರಗತಿಯ ಕಡೆಗೆ ವಿಶೇಷವಾಗಿ ಕಾಳಜಿವಹಿಸಿಕೊಂಡು ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಒಂದು ಅಭೂತಪೂರ್ವವಾದ ಸಾಧನೆಗೆ ಕಾರ್ಯೋನ್ಮುಖವಾಗುತ್ತಾ ಉತ್ತಮ ಫಲಿತಾಂಶವನ್ನು ಎಕ್ಸೆಲ್ ವಿದ್ಯಾಸಂಸ್ಥೆಯು ಕಾಯ್ದುಕೊಂಡು ಬರುತ್ತಿದೆ.

Related posts

ತಾಲೂಕು ಶಾಮಿಯಾನ ಮಾಲಕರ ಸಂಘದ ಮಹಾಸಭೆ: ನೂತನ ಸಮಿತಿ ರಚನೆ

Suddi Udaya

ಉಜಿರೆ : ಶ್ರೀ ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಗಮಕ ಕಾರ್ಯಕ್ರಮ

Suddi Udaya

ಬಿ.ಜೆ.ಪಿ ಕಾರ್ಯದರ್ಶಿ ಹುದ್ದೆಯಿಂದ ಸೆಲೆಸ್ಟಿನ್ ಡಿಸೋಜ ವಜಾ

Suddi Udaya

ಹರೀಶ್ ಪೂಂಜರವರ ಗೆಲುವಿಗಾಗಿ ಅಭಿಮಾನಿಗಳಿಂದ ಕಟೀಲು ಕ್ಷೇತ್ರಕ್ಕೆ ಪಾದಯಾತ್ರೆಯ ಸಂಕಲ್ಪ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ವಾಣಿ ಕಾಲೇಜಿಗೆ ಪ್ರಾಜೆಕ್ಟರ್ ಹಸ್ತಾಂತರ ಮತ್ತು ರಾಷ್ಟ್ರೀಯ ಅಧ್ಯಕ್ಷರ ಭೇಟಿ

Suddi Udaya

ಮುಂಡಾಜೆ: ನಿವೃತ್ತ ಉಪನ್ಯಾಸಕ ಗೋಪಾಲಕೃಷ್ಣ ಡೋಂಗ್ರೆ ನಿಧನ 

Suddi Udaya
error: Content is protected !!