ಮಚ್ಚಿನ :ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನ ಸಮಾಜದ ಮುಖ್ಯ ವಾಹಿನಿಗೆ ತರುವುದೇ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಯರವರ ಆಶಯ… ಉಡುಪಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೆ ಗೌಡ ಅಭಿಮತ ವ್ಯಕ್ತಪಡಿಸಿದರು. ಇವರು ಜೂನ್. 16ರಂದು
ಗುರುವಾಯನಕೆರೆ ಯೋಜನಾ ಕಚೇರಿಯ ವ್ಯಾಪ್ತಿಯ ಒಕ್ಕೂಟಗಳ ಪದಗ್ರಹಣ ಹಾಗೂ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು
ಹುಟ್ಟಿನಿಂದ ಸಾವಿನ ವರೆಗೆ ಬರುವ ಸಾಕಷ್ಟು ಸಂಕಷ್ಟಗಳಿಗೆ ಸಹಕಾರ ನೀಡುವುದು, ಗ್ರಾಮಿಣ ಭಾಗದಲ್ಲಿರುವ ಸಮಸ್ಯೆಗಳನ್ನ ಗುರುತಿಸಿ ಅವುಗಳಿಗೆ ಪರಿಹಾರ ಒದಗಿಸುವುದು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಮೂಲಬೂತ ಸೌಕರ್ಯಗಳಿಗೆ ಅನುದಾಗಳನ್ನ ಒದಗಿಸಿ ಅಭಿವೃದ್ದಿ ಮಾಡುವುದೂ ಯೋಜನೆಯ ಆಶಯ
42 ವರ್ಷಗಳ ಹಿಂದೆ ತಾಲೂಕಿನಲ್ಲಿ ಇದ್ದ ಕಡು ಬಡತನವನ್ನ ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರು 1982 ರಲ್ಲಿ ಗ್ರಾಮಾಭಿವೃದ್ದಿ ಯೋಜನೆಯನ್ನೂ ಜಾರಿಗೆ ತಂದರು ಇದರ ಮುಖ್ಯ ಉದ್ದೇಶ ಸಾಲ ನೀಡುವುದು ಅಲ್ಲ ಬದಲಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂಬುವುದೇ ಆಗಿದೆ ಎಂದರು 42 ಹಿಂದೆ ಅನುಭವಿಸಿದ ಕಷ್ಟದ ದಿನಗಳು ಎಲ್ಲರಿಗೂ ನೆನಪಿದೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂಡಾ ಊಟಕ್ಕೆ ಅಕ್ಕಿ, ಪಾತ್ರೆ, ಅಡಿಕೆ, ತೆಂಗಿನ ಗಿಡ, ಗಳನ್ನ ನೀಡಿ ಜನರ ಪರಿವರ್ತನೆ ಯನ್ನ ಮಾಡುವ ಕೆಲಸವನ್ನು ಯೋಜನೆಯು ಮಾಡುತ್ತಾ ಬಂದಿದೆ
ಕೃಷಿ ಅಭಿವೃದ್ಧಿಯ ಹಾಗು ಮೂಲಬೂತ ಸೌಕರ್ಯಗಳಿಗೆ ಕ್ಷೇತ್ರದಿಂದ ಅನುದಾನ ಗಳನ್ನ ಒದಗಿಸುವ ಮೂಲಕ ಬಡವರ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆ ಯನ್ನ ತರಲಾಯಿತು
ಬದಲಾದ ಕಾಲಘಟ್ಟದಲ್ಲಿ ಗುಂಪಿನ ಸದಸ್ಯರ ಬೇಡಿಕೆಗೆ ಅನುಗುಣವಾಗಿ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡು ಅವರಿಗೆ ಆರ್ಥಿಕ ಚೈತನ್ಯ ನೀಡುವ ಕೆಲಸವನ್ನು ಯೋಜನೆಯೂ ಮಾಡುತ್ತಿದೆ ಬ್ಯಾಂಕ್ ಹಾಗು ಸದಸ್ಯರ ಮದ್ಯದಲ್ಲಿ ಯೋಜನೆಯೂ ಕೊಂಡಿಯಾಗಿ ಮಾತ್ರಾ ಕೆಲಸವನ್ನ ಮಾಡುತ್ತಿದೆ ಹಾಗಾಗೀ ಗುಂಪಿನ ಸದಸ್ಯರು ತಪ್ಪು ಸಂದೇಶಗಳಿಗೆ ಕಿವಿ ಕೊಡದೇ ಗುಂಪಿನ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದರು ಗುಂಪಿನ ಜೀವ ವಾರದ ಸಭೆ ಗುಂಪಿನ ವಾರದ ಸಭೆ ಗಳನ್ನ ಸಮರ್ಪಕವಾಗಿ ಮಾಡಬೇಕು ಎಂದರು ಬ್ಯಾಂಕಿನಲ್ಲಿ ಓರ್ವ ಸದಸ್ಯರು ಸಾಲ ಪಡೆಯಬೇಕಾದರೆ ಕನಿಷ್ಟ 17 ದಾಖಲಾತಿಗಳನ್ನು ನೀಡಬೇಕು ಇದನ್ನು ಒದಗಿಸುವುದು ಹೆಚ್ಚಿನ ಸದಸ್ಯರಿಗೆ ಕೆಲ ತಾಂತ್ರಿಕ ಸಮಸ್ಯೆಗಳಿಂದ ಅಡಚಣೆ ಅಗುತ್ತದೆ ಆದರೆ ಗುಂಪಿನ ಮೂಲಕ ಗುಂಪು ಭದ್ರತೆಯ ಅದರದಲ್ಲಿ ಸುಲಭ ರೂಪದಲ್ಲಿ ಪ್ರಗತಿ ನಿಧಿ ಪಡೆಯುವ ಮೂಲಕ ಸದಸ್ಯರು ತಮ್ಮ ಅರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು ಎಂದರು ಒಕ್ಕೂಟದ ಪದಾಧಿಕಾರಿಗಳು ಒಕ್ಕೂಟದ ಕಣ್ಣಾಗಿ ಕಾರ್ಯನಿರ್ವಹಿಸಬೇಕು ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಲು ಸಿಕ್ಕಿರುವ ಅವಕಾಶವ ಶ್ರೀ ಕ್ಷೇತ್ರ ಧರ್ಮಸ್ಥಳ ಡಿಂದ ಸಿಕ್ಕ ಅವಕಾಶ ಎಂಬ ಭಕ್ತಿಯಿಂದ ಜನರ ಸೇವೆ ಮಾಡಬೇಕು ನೊಣ ರೋಗವನ್ನು ಹರಡುತ್ತದೆ ಜೇನು ನೊಣ ಮಕರಂದ ವನ್ನ ಹಂಚುತ್ತದೆ ಒಕ್ಕೂಟದ ಪದಾಧಿಕಾರಿಗಳು ಜೇನು ನೊಣ ಮಕರಂದವನ್ನು ಹಂಚಿದಂತೆ ಗುಂಪಿನ ಸದಸ್ಯರ ಸಮಸ್ಯಗಳಿಗೆ ಸ್ಪಂದಿಸಬೇಕು ಎಂದು ವಿವರಿಸಿದರು ನಮ್ಮ ಸಮಾಜಕ್ಕೆ ಹೃದಯ ಶ್ರೀಮಂತಿಕೆ ಹೊಂದಿರುವ ಜನರ ಅಗತ್ಯತೆ ಇದೆ ಅಂತಹ ಹೃದಯ ಶ್ರೀಮಂತಿಕೆ ಹೊಂದಿರುವ ಸದಸ್ಯರು ಮಚ್ಚಿನ, ಪಾಲಡ್ಕ, ಕುತ್ತಿನ, ಕುದ್ರಡ್ಕ ಒಕ್ಕೂಟದ ಸರ್ವ ಸದಸ್ಯರು ಎಂದು ಭಾಗವಹಿಸಿದ್ದ ಸದಸ್ಯರನ್ನ ಕೊಂಡಾಡಿದರು ಸತ್ಯ ನಾರಾಯಣ ಪೂಜೆ ಮಾಡುವ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ ಸಾರ್ವಜನಿಕ ಪೂಜೆ ಮಾಡುವ ಮೂಲಕ ಇಡೀ ಗ್ರಾಮಕ್ಕೆ ಪುಣ್ಯ ಪ್ರಾಪ್ತಿಯಾಗಲಿದೆ ಶ್ರೀ ಸತ್ಯ ನಾರಾಯಣ ವೃತವನ್ನು ಭಕ್ತಿ ಪೂರ್ವಕವಾಗಿ ವಿವಿಧ ಪತ್ರ ಪುಷ್ಪ ದೂಪ ದೀಪದಿಗಳಿಂದ ಪೂಜಿಸಲು ಪಡುವುದರಿಂದ ಸಕಲ ಪಾಪ ಪರಿಹಾರವಾಗುವುದು ಈ ವ್ರತವನ್ನು ಯಾವುದೇ ಕಟ್ಟು ಕಟ್ಟಳೆ ಯಾಗಲಿ ಅಥವಾ ಇಂತಹ ದಿನವೇ ಮಾಡಬೇಕೆಂಬ ನಿರ್ಬಂಧ ವಿಲ್ಲಾ ನಿರ್ಮಲ ಮನಸ್ಸಿನಿಂದ ಸರ್ವರೂ ಪೂಜಿಸಬಹುದಾಗಿದೆ ವೃತಾಚರಣೆ, ಅನುಷ್ಟಾನ, ಒಳ್ಳೆಯ ನಡತೆ, ಸಂಪ್ರದಾಯ, ಪದ್ಧತಿ, ವಾಡಿಕೆ , ಕ್ರಮ ನಿಯಮ ಇವುಗಳೆಲ್ಲ ಧರ್ಮಾಚರಣೆ ಗಳೂ ಇವುಗಳನ್ನು ಅಳವಡಿಸಿಕೊಂಡು ಎಲ್ಲರೂ ಆಚರಿಸುತ್ತಾ ಬಂದಾಗ ಆದಕ್ಕೆ ಧರ್ಮದ ಸ್ವರೂಪ ಬರುತ್ತದೆ ಆಚಾರಡಿಂದ ಧರ್ಮದ ಉತ್ಪತ್ತಿ ಆಚಾರ, ಆಯುಷ್ಯವು ವೃದ್ಧಿಸುತ್ತದೆ ಎಂದು
ಅವರು ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಲಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಮಡಂತ್ಯಾರು ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಮಚ್ಚಿನ, ಪಾಲಡ್ಕ, ಕುದ್ರಡ್ಕ, ಕುತ್ತಿನ ಒಕ್ಕೂಟಗಳ ಪದಗ್ರಹಣ ಹಾಗು 38 ನೇ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು
ಶ್ರೀ ಕ್ಷೇತ್ರ ಧರ್ಮಸ್ಥಳ ದಿಂಡಾ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ಕಳುಹಿಸಿ ಕೊಡಲಾದ ಶುಭ ಸಂದೇಶವನ್ನು ಶ್ರೀಮತಿ ಗೀತಾ ಲತಾ ಓದಿದರು
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅನುವಂಶಿಕ ಆಡಳಿತ ಮುಕ್ತೇಸರಾದ ಶ್ರೀ ಕ್ಷೇತ್ರ ಬಳ್ಳ ಮಂಜ ಶ್ರೀ ಹರ್ಷ ಸಂಪಿಗೆತ್ತಾಯ ಸತ್ಯ ನಾರಾಯಣ ಪೂಜೆಯ ಫಲ ಎಲ್ಲರಿಗೂ ದೊರಕಲಿ , ನೂತನ ವಾಗಿ ರಚನೆಗೊಂಡ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸ ಲಿ ಎಂದು ಆಶಿಸಿದರು ಮುಖ್ಯ ಅತಿಥಿಗಳಾಗಿ ನಿವೃತ್ತ ಉಪ ಕೃಷಿ ನಿರ್ದೇಶಕರಾದ ಶ್ರೀ ವಿಶ್ವನಾಥ ಬಂಗೇರಾ, ಜನ ಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷರಾದ ಶ್ರೀ ಗೋಪಾಲ ಕೊಲಾಜೆ, ಜೆಸಿಐ ಅಧ್ಯಕ್ಷ ರಾದ ಶ್ರೀ ವಿಕೇಶ್ ಮಾನ್ಯ, ದೈವ ಆರಾಧಕರಾದ ಶ್ರೀ ಸದಾನಂದ ಪೂಜಾರಿ, ಪ್ರಗತಿ ಪರ ಕೃಷಿಕರಾದ ಶ್ರೀ ಕಾಂತಪ್ಪ ಗೌಡ ನಿಡ್ಡಜೆ ಭಾಗವಹಿಸಿದ್ದರು, ಸಬಾ ಅಧ್ಯಕ್ಷತೆಯನ್ನು 38 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀ ಹರ್ಷ ಬಳ್ಳಮಂಜ ವಹಿಸಿ ಮಾತನಾಡುತ್ತ ಸರ್ವರ ಸಹಕಾರದಿಂದ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂದಿದೆ ಎಂದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು ಮಚ್ಚಿನ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಹರೀಶ್ ಸುವರ್ಣ, ಪಾಲಡ್ಕ ದ ನಾರಾಯಣ ಗೌಡ, ಕುದ್ರಡ್ಕ ದ ಸುರೇಶ್ ಹಾಗು ನೂತನ ಮಚ್ಚಿನ ಒಕ್ಕೂಟದ ಅಧ್ಯಕ್ಷ ರಾದ ಶ್ರೀಮತಿ ಸುಧಾ, ಕುತ್ತಿನ ದ ಜಯ ಪೂಜಾರಿ, ಪಾಲಡ್ಕ ದ ಶ್ರೀಮತಿ ಕುಸುಮಾವತಿ, ಕುದ್ರಡ್ಕ ವಿಜಯ ಮಡೆಕ್ಕಿಲ್ಲ, ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು ವಲಯ ಅಧ್ಯಕ್ಷರಾದ ಶ್ರೀ ಸತೀಶ್ ಆಚಾರ್ಯ ಹಾಜರಿದ್ದರು ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ, ಸ್ವಾಗತಿಸಿದರು ವಲಯ ಮೇಲ್ವಿಚಾರಕ ರಾದ ಶ್ರೀ ವಸಂತ ನಿರೂಪಿಸಿದರು ಅಂಗನವಾಡಿ ಶಿಕ್ಷಕರಾದ ಕುಮಾರಿ ಪುಷ್ಪಾವತಿ ಧನ್ಯವಾದವಿತ್ತರು ಮಚ್ಚಿನ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಯಾದ ಪರಮೇಶ್ವರ್, ಕುದ್ರಡ್ಕ ಸೇವಾ ಪ್ರತಿನಿಧಿ ಶ್ರೀಮತಿ ನಂದಿನಿ ಸಹಕರಿಸಿದರು 70 ವರ್ಷ ದಾಟಿದ ಹಿರಿಯ ಹಾಗು ಪಾನಮುಕ್ತ ಸದಸ್ಯರನ್ನ ಗೌರವಿಸಲಾಯಿತು