ಪಡುಮಲೆ: ತುಳುನಾಡಿನ ಸತ್ಯೋದ ಸೀಮೆಯೆಂದು ಹೆಸರು ಪಡೆದಿರುವ ಕುಂಬ್ಳೆ ಸೀಮೆಯಾದ್ಯಂತ ದ್ಯೆವ ನರ್ತನ ಸೇವೆ ಮಾಡುತ್ತಿರುವ ಪಡುಮಲೆ ಪರವನ್ ಕುಟುಂಬಸ್ಥರ ತರವಾಡು ಮನೆಯಲ್ಲಿ ವಾರ್ಷಿಕ ತಂಬಿಲ ಜೂ.16 ರಂದು ರಾತ್ರಿ ನಡೆಯಿತು. ಊರ ಪರವೂರಿನಲ್ಲಿರುವ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರಾದ ದ್ಯೆವ ನರ್ತಕ ಡಾ.ರವೀಶ್ ಪಡುಮಲೆ ಯವರನ್ನು ವಿಶ್ವನಾಥ ಪಡುಮಲೆಯವರು ಮತ್ತು ಕುಟುಂಬಸ್ಥರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರವೀಶ್ ಪಡುಮಲೆ ಯವರು ನಾವೆಲ್ಲರೂ ನಮ್ಮ ಹಿರಿಯರಿಂದ ಬಂದ ದ್ಯೆವ ನರ್ತನ ಸೇವೆಯನ್ನು ನಿಷ್ಟೆಯಲ್ಲಿ, ಪ್ರಾಮಾಣಿಕವಾಗಿ ಮುಂದುವರಿಸಿಕೊಂಡು ನಮ್ಮ ಮುಂದಿನ ಪೀಳಿಗೆಗೆ ಮೂಲ ಕಟ್ಟು ಕಟ್ಟಳೆಯನ್ನು ಉಳಿಸೋಣ ಎಂದು ವಿನಂತಿಸಿಕೊಂಡರು. ಉಪನ್ಯಾಸಕ ಜಗನ್ನಾಥ ಕೊಣಾಜೆ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಪೂವಪ್ಪ ಕೊಂಬಾರು, ಶೇಖರ ವಿಟ್ಲ, ಚೆನ್ನಪ್ಪ ಇಚಿಲಂಪಾಡಿ, ಸುಬ್ಬ ನೆಟ್ಟಣ, ವಾಸು ಪಡುಮಲೆ, ನಾಗಪ್ಪ ಕೊಣಾಜೆ, ಜಿನಪ್ಪ ಮರಕಡ, ಶೀನ ಇಚಿಲಂಪಾಡಿ, ಕೊರಗಪ್ಪ ನರಿಮೊಗೆರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.