ವೇಣೂರು : ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ ಮತ್ತು ಕಾಲೇಜು ನಿಟ್ಟಡೆ ಇಲ್ಲಿನ ಭಾರತೀಯ ಸೇವಾದಳ ಮತ್ತು ಎನ್ ಸಿ ಸಿ ಘಟಕವನ್ನು ಜೂ. 15 ರಂದು ಉದ್ಘಾಟಿಸಲಾಯಿತು. ಗಿಡ ನೆಡುವುದರ ಮೂಲಕ ಕಾರ್ಯಕ್ರಮವು ಚಾಲನೆಗೊಂಡಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಟಿ ಎಸ್ ಮಂಜೇಗೌಡ ಜಿಲ್ಲಾ ಸಂಘಟಿತರು ಭಾರತೀಯ ಸೇವಾದಳ ಇವರು ಉಪಸ್ಥಿತರಿದ್ದು ಸೇವಾದಳದಲ್ಲಿ ನಡೆಯುವ ಕಾರ್ಯಕ್ರಮ ಮತ್ತು ರಾಷ್ಟ್ರಧ್ವಜದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಶಾಲಾ ಸಂಸ್ಥಾಪಕರಾದ ಗಿರೀಶ್ ಕೆ ಎಚ್ ಸೇವಾದಳದ ವಿದ್ಯಾರ್ಥಿಗಳಿಗೆ ಭಾರತೀಯ ಸೇವಾದಳದ ಎಲ್ಲಾ ಶಿಸ್ತುಗಳನ್ನು ಕಲಿತು ದೇಶದ ಒಂದು ಒಳ್ಳೆಯ ಪ್ರಜೆಗಳಾಗಿ ಬಾಳಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಫ್ರಾನ್ಸಿಸ್ ವಿ ವಿ ಈ ವಿದ್ಯಾಸಂಸ್ಥೆ ಇನ್ನಷ್ಟು ಉತ್ತಮ ಮಟ್ಟದಲ್ಲಿ ಬೆಳೆದು ಎಲ್ಲರಿಗೂ ಮಾದರಿಯಾಗಲಿ ಎಂದು ಶುಭ ಹಾರೈಸಿದರು. ಶಾಲೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಅಶ್ವಿತ್ ಕುಲಾಲ್ ಎನ್‌ಸಿಸಿ ಮತ್ತು ಸೇವಾದಳದ ಮಹತ್ವವನ್ನು ತಿಳಿಸಿದರು. ಅದೇ ರೀತಿ ಈ ಕಾರ್ಯಕ್ರಮದಲ್ಲಿ ಭಾರತೀಯ ಸೇವಾದಳ ಬೆಳ್ತಂಗಡಿಯ ಕಾರ್ಯದರ್ಶಿಯಾದ ಗಂಗಾರಾಣಿ ಮತ್ತು ನಿಟ್ಟಡೆ ಕ್ಲಸ್ಟರ್ ಸಿ ಆರ್ ಪಿ ಆರತಿ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಉಷಾ ಜಿ, ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಪವಿತ್ರ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್ ಏನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರೌಢಶಾಲಾ ವಿಭಾಗದ ಶಿಕ್ಷಕಿ ಶ್ವೇತ ಮತ್ತು ಕಿರಿಯ ಪ್ರಾಥಮಿಕ ವಿಭಾಗದ ಉಪ ಮುಖ್ಯ ಶಿಕ್ಷಕಿ ಶ್ವೇತ ನಿರೂಪಿಸಿ, ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಅಕ್ಷತ ಸ್ವಾಗತಿಸಿ, ಹಿರಿಯ ಪ್ರಾಥಮಿಕ ವಿಭಾಗದ ಶಿಕ್ಷಕಿ ವಾಣಿ ಧನ್ಯವಾದವಿತ್ತರು.