April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲ ಪದಪ್ರಧಾನ

ಬೆಳ್ತಂಗಡಿ ; ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯಲ್ಲಿ ಮಂತ್ರಿ ಮಂಡಲದ ಪದ ಪ್ರಧಾನ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಪೊಲೀಸ್ ಇಲಾಖೆಯ ಪರೀದೀಕ್ಷಕರಾದ ಮುರುಳಿಧರ್ ಹಾಗೂ ಶ್ರೀಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶ್ರೀ ಧನ್ಯ ಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಪೊಲೀಸ್ ಇಲಾಖೆಯ ಪರಿವೀಕ್ಷಕರಾದ ಶ್ರೀ ಮುರಳೀಧರ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಹೊಸದಾಗಿ ಆಯ್ಕೆಯಾದ ಶಾಲಾ ಮಂತ್ರಿಮಂಡಲದ ಸದಸ್ಯರಿಗೆ ಪ್ರಮಾಣ ವಚನವನ್ನು ವಾಚಿಸಿದರು. ಶಾಲಾ ಮಂತ್ರಿಮಂಡಲ ವನ್ನು ಉದ್ಘಾಟಿಸಿದ ಪೊಲೀಸ್ ಪರಿವೀಕ್ಷಕರಾದ ಮುರಳಿಧರ್ ರವರು ಮಾತನಾಡಿ , ಎಸ್ ಡಿ ಎಂ ಸಂಸ್ಥೆಯು ರಾಜ್ಯದಲ್ಲೇ ಪ್ರಸಿದ್ಧ ಸಂಸ್ಥೆಯಾಗಿದೆ. ಸಂಸ್ಥೆಯ ಗೌರವವನ್ನು ಉಳಿಸುವಂತಹ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು, ಒಳ್ಳೆಯ ಸಂಸ್ಕಾರ , ಸಂಸ್ಕೃತಿ ಸಂಸ್ಥೆಯಿಂದ ದೊರೆಯುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಹಾಗೆ ತಮ್ಮ ಜ್ಞಾನ ಭಂಡಾರ ವನ್ನು ಹೆಚ್ಚಿಸಿಕೊಳ್ಳಬೇಕು. ಪೂಜ್ಯ ಖಾವಂದರ ಸಂಸ್ಥೆ ಇನ್ನಷ್ಟು ಹೆಸರು ಗಳಿಸುವಂತಾಗಲಿ ಎಂದು ಶುಭ ಹಾರೈಸಿದರು.

ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಯದ ಧನ್ಯ ಕುಮಾರ್ ಆಗಮಿಸಿ ಆಯ್ಕೆಯಾದ ಹೊಸ ಮಂತ್ರಿಮಂಡಲಕ್ಕೆ ಶುಭ ಹಾರೈಸಿ, ಮತದಾನದ ಪ್ರಕ್ರಿಯೆ ಹಾಗೂ ತಾನು ನಾಯಕನಾಗಿ ಇನ್ನೊಬ್ಬರನ್ನು ನಾಯಕನನ್ನಾಗಿ ಬೆಳೆಸುವ ನಾಯಕತ್ವದ ಗುಣ ವಿದ್ಯಾರ್ಥಿಗಳ ಜೀವನದಲ್ಲಿ ಬೆಳೆಯಬೇಕು. ಉತ್ತಮ ಜೀವನ ಮೌಲ್ಯ ಹವ್ಯಾಸ, ಸಂಸ್ಕಾರಗಳು ಬೆಳೆಸಿಕೊಂಡು ತನ್ನ ಮುಂದಿನ ಜೀವನದ ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕು ಸಮಾಜಕ್ಕೆ ಉತ್ತಮ ಸತ್ ಪ್ರಜೆಯಾಗಿ ಬಾಳಬೇಕು.

ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿಯ ಆಯುಷ್ ಕೆ, ಉಪನಾಯಕನಾಗಿ 9ನೇ ತರಗತಿಯ ಜಯದೀಪ್, ಶಿಕ್ಷಣ ಮಂತ್ರಿಯಾಗಿ 8ನೇ ತರಗತಿಯ ಸುಪ್ರೀತ್, ಕ್ರೀಡಾ ಮಂತ್ರಿಯಾಗಿ 8ನೇ ತರಗತಿಯ ಸಮ್ಯಕ್, ಆರೋಗ್ಯ ಮತ್ತು ಶಿಸ್ತು ಮಂತ್ರಿಯಾಗಿ 10ನೇ ತರಗತಿಯ ಸ್ವಿತಾ ಜೈನ್, ಸಾಂಸ್ಕೃತಿಕ ಮಂತ್ರಿಯಾಗಿ 8ನೇ ತರಗತಿಯ ಭೂಮಿಕಾ, ಮಾನವ ಸಂಪನ್ಮೂಲ ಮಂತ್ರಿಯಾಗಿ 9ನೇ ತರಗತಿಯ ಸುವೀನ್ ಆಯ್ಕೆಯಾದರು.

ಕಾರ್ಯಕ್ರಮದ ನಿರೂಪಣೆಯನ್ನು ಚಾರಿತ್ರ ಹತ್ತನೇ ತರಗತಿ, ಸ್ವಾಗತವನ್ನು ಆರನೇ ತರಗತಿಯ ಸ್ತವ್ಯ ರಾಜೇಶ್ ಶೆಟ್ಟಿ,ಧನ್ಯವಾದವನ್ನು ಎಂಟನೇ ತರಗತಿಯ ದೀಪ್ತ ನೇರವೇರಿಸಿ ಕೊಟ್ಟು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶಾಲಾ ಶಿಕ್ಷಕ ವೃಂದದವರು ಸಹಕಾರವಿತ್ತು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

Related posts

ಶಿಶಿಲ: ಭಾರಿ ಮಳೆಯಿಂದ ತುಂಬಿ ಹರಿಯುತ್ತಿರುವ ಕಪಿಲಾ ನದಿ

Suddi Udaya

ಕಕ್ಕಿಂಜೆಯ ವೃದ್ಧ ದಂಪತಿಗಳ ಕೊಲೆ ಪ್ರಕರಣ: ಆರೋಪಿ ಗದಗದ ರಾಜುಗೆ ಜೀವಾವಧಿ ಶಿಕ್ಷೆ ಪ್ರಕಟ

Suddi Udaya

ಮೇ 26: ಕಾಯರ್ತಡ್ಕ ನಂದಗೋಕುಲ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ, ಗೋನಂದಾರತಿ, ದೀಪೋತ್ಸವ

Suddi Udaya

ವಿಶೇಷ ಚೇತನರ ಬಾಳಿಗೆ ಬೆಳಕಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮ: 8,768 ವಿವಿಧ ಉಚಿತ ಸಲಕರಣೆ ವಿತರಣೆ

Suddi Udaya

ಬರೆಂಗಾಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಕಲ್ಮಂಜ: 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ

Suddi Udaya
error: Content is protected !!