ಬೆಳ್ತಂಗಡಿ :ಅಳದಂಗಡಿ ತಿಮ್ಮಣ್ಣರಸರಾದ ಡಾ, ಪದ್ಮ ಪ್ರಸಾದ ಅಜಿಲರು ಯಾಂತ್ರಿಕ್ರತ ಭತ್ತ ಬೇಸಾಯಕ್ಕೆ ಚಾಲನೆ ನೀಡಿ ಮಾತನಾಡಿ ನಾನಾ ಕಾರಣಗಳಿಂದ ಭತ್ತ ಬೆಳೆಯುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ಆತಂಕದ ನಡುವೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಯಂತ್ರ ಶ್ರೀ ಯೋಜನೆಯಿಂದ ರೈತರ ಉತ್ತೇಜನ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಭತ್ತ ಕೃಷಿ ಮಾಡುವ ರೈತರು ಕೂಲಿ ಕಾರ್ಮಿಕರ ಕೊರತೆಯಿಂದ ಕೃಷಿಯನ್ನು ಕೈ ಬಿಡುವ ಯೋಚನೆ ಮಾಡಬಾರದು ಯಂತ್ರೋಪಕರಣಗಳನ್ನು ಬಳಸಿ ಭತ್ತ ಕೃಷಿ ಮಾಡಬೇಕು, ಕೃಷಿ ಪೂರಕ ಚಟುವಟಿಕೆಗಳಿಗೆ ನೆರವಾಗುವುದು ಯೋಜನೆಯ ಉದ್ಧೇಶವಾಗಿದೆ ಎಂದು ಶುಭನುಡಿದರು.
ಸತ್ಯದೇವತೆ ದೇವಸ್ಥಾನ ಆಡಳಿತ ಮುಖ್ಯಸ್ಥರಾದ ಶಿವಪ್ರಸಾದ್ ಅಜಿಲರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಯಂತ್ರಶ್ರೀ ನಾಟಿಗೆ ಸಸಿ ಮಡಿ ಹಸ್ತಾಂತರಿಸಿ ಶುಭನುಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು, ಹರೀಶ್ ಮಡಿವಾಳ, ಹಾಗೂ ಹರೀಶ್ಆಚಾರ್ಯ, ಹಾಗೂ ಯಂತ್ರ ಬ್ಯಾಂಕ್ ಮ್ಯಾನೇಜರ್ ಉಮೇಶ್, ಅಳದಂಗಡಿ ವಲಯದ ಮೇಲ್ವಿಚಾರಕಿ ಶ್ರೀಮತಿ ಸುಮಂಗಲ, ಕೃಷಿ ಮೇಲ್ವಿಚಾರಕರು ಕೃಷ್ಣ ಗೌಡ, ಸಿ.ಹೆಚ್.ಎಸ್.ಸಿ ಮೆನೇಜರ್ ಸಚಿನ್, ಹಾಗೂ ಸಂತೋಷ, ಒಕ್ಕೂಟದ ಉಪಾಧ್ಯಕ್ಷರು ಸದಾನಂದ, ಯಂತ್ರಶ್ರೀ ಯೋಧ ಪ್ರಶಾಂತ್ ಚಿತ್ತಾರ, ಶ್ರೀನಿವಾಸ್, ಸೇವಾಪ್ರತಿನಿಧಿ ಶುಭಲತಾ ಹಾಗೂ ಪ್ರಗತಿ ಬಂಧು ತಂಡದ ರೈತರು ಮುಂತಾದವರು ಉಪಸಿತರಿದ್ದರು.