ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಲ್ಲಿ ಕಳೆದ 20 ವರ್ಷಗಳಿಂದ ಅರೋಗ್ಯ ಸಹಾಯಕಿಯಾಗಿ ಸೇವೆಯನ್ನು ಸಲ್ಲಿಸಿ. ಇದೀಗ ಅನಾರೋಗ್ಯ ದಿಂದ ಬಳಲುತ್ತಿರುವ ಉಜಿರೆ ವಲಯದ ಮಾಯ ಕಾರ್ಯಕ್ಷೇತ್ರದ ಶ್ರೀಮತಿ ಚಿತ್ರಾ ಆರ್. ರವರಿಗೆ ಶ್ರೀ ಕ್ಷೇತ್ರದಿಂದ ಮಾಶಾಸನ ಮಂಜೂರಾಗಿದ್ದು. ಪ್ರಸ್ತುತ ಇವರ ಮನೆ ಭೇಟಿ ಮಾಡಿ ಯೋಜನೆಯಿಂದ ಮಂಜೂರಾದ ಮಾಶಾಸನವನ್ನು ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾಯ್ಸ್ ರವರು ವಿವರಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ಕುಮಾರ್, ವಿಪತ್ತು ಘಟಕದ ಯೋಜನಾಧಿಕಾರಿ ಜೈವಂತ ಪಟೇಗಾರ್, ಉಜಿರೆ ವಲಯದ ಮಾಜಿ ವಲಯಾಧ್ಯಕ್ಷರಾದ ವಿಜಯ್ ಜಿ, ಅರಳಿ, ಶೌರ್ಯ ತಂಡದ ಕ್ಯಾಪ್ಟನ್ ಸಂತೋಷ್, ಸ್ವಯಂಸೇವಕರಾದ ಸುಧೀರ್, ಮೇಲ್ವಿಚಾರಕರಾದ ಶ್ರೀಮತಿ ವನಿತಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಮಧುರಾ, ಸೇವಾಪ್ರತಿನಿಧಿ ಪ್ರಭಾ, ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯಾನ್, ಮನೆಯ ಸದಸ್ಯರು ಉಪಸ್ಥಿತರಿದ್ದರು.