September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉರುವಾಲು: ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಉರುವಾಲು: ಇಲ್ಲಿನ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 10 ನೆ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಿತ ಕೆ ಆರ್ ದೀಪ ಬೆಳಗಿ ಉದ್ಘಾಟಿಸಿದರು.

ಬಳಿಕ ವಿದ್ಯಾರ್ಥಿಗಳಿಂದ ಸಾಮೂಹಿಕ ಸೂರ್ಯ ನಮಸ್ಕಾರ ಹಾಗೂ ಹಲವು ಉಪಯುಕ್ತ ಯೋಗಾಸನಗಳ ಪ್ರದರ್ಶನ ಹಾಗೂ ಅವುಗಳ ಪ್ರಯೋಜನಗಳ ಕುರಿತು ಮಾಹಿತಿ ನೀಡಲಾಯಿತು.


ಈ ಸಂದರ್ಭದಲ್ಲಿ ಶಾಲಾ ಸೇವಾ ಸಮಿತಿಯ ಕಾರ್ಯದರ್ಶಿ ಶ್ಯಾಮ್ ಪ್ರಸಾದ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹುನೈದ 9ನೆಯ ತರಗತಿ ಸ್ವಾಗತಿಸಿದರು, ಶ್ರೀಗೌರಿ 9ನೇ ತರಗತಿ ಧನ್ಯವಾದವಿತ್ತರು. ಪ್ರಮಿತ್ 10ನೆ ಹಾಗೂ ಸಹನ 9 ನೇ ತರಗತಿ ಕಾರ್ಯಕ್ರಮ ನಿರೂಪಿಸಿದರು.

Related posts

ನಡ ಗ್ರಾ.ಪಂ. ಗ್ರಾಮಸಭೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾಗಿ ಜಿತೇಶ್, ಕಾರ್ಯದರ್ಶಿಯಾಗಿ ರಕ್ಷಿತ್ ಅಂಡಿಂಜೆ ಆಯ್ಕೆ

Suddi Udaya

ಮಚ್ಚಿನ: ಕಲ್ಲಗುಡ್ಡೆ ರಸ್ತೆಯಲ್ಲಿ ತುಂಬಿದ ನೀರು

Suddi Udaya

ಸಹಕಾರಿಗಳ ಧರ್ಮ ಜಾಗೃತಿ ಯಾತ್ರೆ, ಯಶಸ್ವಿಗೆ ಜಿಲ್ಲಾ ಹಾಲು ಉತ್ಪಾದಕ ಒಕ್ಕೂಟ ನಿರ್ದೇಶಕ ಎಚ್. ಪ್ರಭಾಕರ ಮನವಿ

Suddi Udaya

ವಾಣಿ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಎನ್ ಎಸ್ ಎಸ್ ದೈನಂದಿನ ಚಟುವಟಿಕೆಗಳ ಸಮಾರೋಪ

Suddi Udaya

ನಾಳ ಗಂಪದಕೋಡಿ ನಿವಾಸಿ ಶ್ರೀಮತಿ ನಾಗರತ್ನಮ್ಮ ನಿಧನ

Suddi Udaya
error: Content is protected !!