24.2 C
ಪುತ್ತೂರು, ಬೆಳ್ತಂಗಡಿ
April 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯ ಆಸ್ಪತ್ರೆ, ಬೆಳ್ತಂಗಡಿ ಲಯನ್ಸ್ ಸೇವಾ ಸಂಸ್ಥೆ, ಲಿಯೋ ಕ್ಲಬ್ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಬೆಳಾಲು: ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಶ್ರೀ ಮಾಯಾಮಹದೇವ ದೇವಸ್ಥಾನ ಬೆಳಾಲು ವಠಾರದಲ್ಲಿ ಜೂ 07 ರಿಂದ 15 ದಿನಗಳ ಕಾಲ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯ ಆಸ್ಪತ್ರೆ ಉಜಿರೆ, ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಬೆಳ್ತಂಗಡಿ, ಲಿಯೋ ಕ್ಲಬ್ ಬೆಳ್ತಂಗಡಿ ಸಹಯೋಗದಲ್ಲಿ ನಡೆದ ಯೋಗ ತರಬೇತಿ ಶಿಬಿರ ಜೂ.21 ರಂದು ಸಮಾರೋಪಗೊಂಡಿತು.

ಯೋಗ ತರಬೇತಿ ನೀಡಿದ ಕು| ದೀಪ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಸದಸ್ಯ ಲ. ಚಂದ್ರ ಕುಮಾರ್ ಶೆಟ್ಟಿ ನಾರ್ಯ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಯೋಗಾಸನ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಶುಭಾಶಯ ಕೋರುತ್ತಾ ಯೋಗದಿಂದ ಆರೋಗ್ಯವಂತ ಜೀವನ ನಿಮ್ಮದಾಗಲಿ ಎಂದು ತಿಳಿಸಿದರು.

ವೇದಿಕೆಯಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ಲ. ಡಾ. ದೇವಿಪ್ರಸಾದ್ ಬೊಲ್ಮ, ಲಿಯೋ ಕ್ಲಬ್ ನ ಕಾರ್ಯಕ್ರಮ ಸಂಯೋಜಕರಾದ ಲಿಯೋ ಗ್ಲೆನ್ ಉಪಸ್ಥಿತರಿದ್ದರು. ಯೋಗ ತರಬೇತಿ ನೀಡಿದ ಎಸ್ ಡಿ ಎಮ್ ಯೋಗ ವಿಜ್ಞಾನಿಗಳ ಕಾಲೇಜಿನ ಕು. ದೀಪ ಇವರನ್ನು ಶಿಬಿರಾರ್ಥಿಗಳ ಪರವಾಗಿ ಗೌರವಿಸಲಾಯಿತು. ಯೋಗ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಭಾರತ ಸಂವಿಧಾನದ ಅರಿವು ಪುಸ್ತಕವನ್ನು ನೀಡಲಾಯಿತು.

Related posts

ಮಡಂತ್ಯಾರು ಮುಖ್ಯರಸ್ತೆಯಲ್ಲಿ ಗುಡ್ಡ ಕುಸಿತ: ಟಾಟಾ ಎಸಿ ವಾಹನ ಜಖಂ; ಅಂಗಡಿಗೆ ಸಂಪೂರ್ಣ ಹಾನಿ

Suddi Udaya

ಜೀವನದ ಧನಾತ್ಮಕ ತಿರುವಿಗೆ ಎನ್ನೆಸ್ಸೆಸ್ ಪೂರಕ – ಡಾ. ಟಿ. ಕೃಷ್ಣಮೂರ್ತಿ

Suddi Udaya

ಚಲನಚಿತ್ರ ತಾರೆ ಡಿಂಪಲ್‌ ಕಪಾಡಿಯಾ ಧರ್ಮಸ್ಥಳ ಭೇಟಿ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ: ಪುರುಷರ ತ್ರೋಬಾಲ್ ಪಂದ್ಯಾಟದಲ್ಲಿ ಬಂದಾರು ಗ್ರಾಮ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆ ಸಭೆ: ವಲಯವಾರು ಸಾಧನಾ ವರದಿ ಪ್ರಸ್ತುತಿ: ವಲಯವಾರು ನವಜೀವನೋತ್ಸವಕ್ಕೆ ಸಂಕಲ್ಪ

Suddi Udaya

ಕರಾಯ ಕಲ್ಲೇರಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟ : ಉಪ್ಪಿನಂಗಡಿ ಪೊಲೀಸರ ದಾಳಿ‌ ನಗದು ಸಹಿತ ಐವರು ವಶಕ್ಕೆ

Suddi Udaya
error: Content is protected !!