23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕ ತರಬೇತಿ ಸಂಸ್ಥೆ ಉಜಿರೆ ಇಲ್ಲಿ ಇಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾಲಯ ಹಾಗೂ ಯೋಗ ವಿಜ್ಞಾನ ಇಲ್ಲಿನ ಹಿರಿಯ ವಿದ್ಯಾರ್ಥಿನಿ ಡಾ. ಗೀತಾಶ್ರಿ ಉದ್ಘಾಟಿಸಿ ಮಾತನಾಡಿ ಕಾರ್ಯಕ್ರಮದ ದ್ಯೇಯ ನಮಗಾಗಿ ಮತ್ತು ಸಮಾಜಕ್ಕಾಗಿ ಇದ್ದು ನಮ್ಮ ಮಾನಸಿಕ ಒತ್ತಡ, ದೈಹಿಕ ಆರೋಗ್ಯ, ಭಾವನಾತ್ಮಕ ಸ್ಥಿರತೆಯನ್ನು ಕಾಪಾಡಲು ಸಹಕರಿಯಾಗುತ್ತದೆ ಜೊತೆಗೆ ಯೋಗವು ನಮ್ಮ ಸ್ವ-ಸಾಮರ್ಥ್ಯ, ದೇಹದ ತೂಕ ಮತ್ತು ದೇಹವನ್ನು ನಮ್ಯತೆಯಲ್ಲಿ ಇಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ವಿ. ಪ್ರಕಾಶ ಕಾಮತ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಯೋಗ ದೇಹದ ಅಸಮತಲನ ಕಾಪಾಡುವ ಜೊತೆಗೆ ಮಾನಸಿಕ ಖಿನ್ನತೆ ಹೋಗಲಾಡಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.


ಕಾರ್ಯಕ್ರಮದ ನಿರೂಪಣೆಯನ್ನು ಆಶಿಕ ನಿರ್ವಹಿಸಿ, ಶಾಲಿನಿ ಧನ್ಯವಾದವಿತ್ತರು.

Related posts

ತೋಟತ್ತಾಡಿ: ಬೈಲಂಗಡಿ ಅರಮನೆಯಲ್ಲಿ ದೈವಗಳ ವಾರ್ಷಿಕ ನೇಮೋತ್ಸವ

Suddi Udaya

ಶಿಬಾಜೆಯಲ್ಲಿ ದಲಿತ ಯುವಕನ ಹತ್ಯೆ ಆರೋಪ ಪ್ರಕರಣ: ಆರೋಪಿಗಳನ್ನು ಬಂಧಿಸುವಂತೆ ದಲಿತ ಸಂಘಟನೆಯಿಂದ ಒತ್ತಾಯ

Suddi Udaya

ಪಟ್ರಮೆ : ಪುರುಷೋತ್ತಮ ದಾಸ್ ಹೃದಯಾಘಾತದಿಂದ ನಿಧನ

Suddi Udaya

ತೆಂಕಕಾರಂದೂರು: ಕೃಷಿಕ ಕೇಶವ ಪೂಜಾರಿ ನಿಧನ

Suddi Udaya

ಚಾರ್ಮಾಡಿ : ಕುಡಿಯುವ ನೀರಿಗಾಗಿ ಪಂಚಾಯತ್ ಎದುರು ಜನರ ಪ್ರತಿಭಟನೆ

Suddi Udaya

ನೆರಿಯದಲ್ಲಿ ಬಿಜೆಪಿಯ ಬೃಹತ್‌ ಸಾರ್ವಜನಿಕ ಪ್ರಚಾರ ಸಭೆ

Suddi Udaya
error: Content is protected !!