ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದೊಂದಿಗೆ ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆಯ ಯೋಗ ಶಿಕ್ಷಕಿ ಶ್ರೀಮತಿ ಭವ್ಯ ಮಾತನಾಡಿ, ‘ಯೋಗದಲ್ಲಿ ಭಕ್ತಿಯೋಗ, ಕರ್ಮ ಯೋಗ, ಜ್ಞಾನಯೋಗ, ರಾಜಯೋಗ ಎನ್ನುವುದಿದೆ. ಯೋಗ ಗುರು ಪತಂಜಲಿಯವರು ಹೇಳಿರುವ ಅಷ್ಟಾಂಗ ಯೋಗಗಳನ್ನು ನಾವು ನಮ್ಮ ದಿನನಿತ್ಯದ ಜೀವನ ಕ್ರಮದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು .
ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಜಾಲಿ ಓ ಎ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಸಂಚಾಲಕರಾದ ನಾರಾಯಣ ಫಡ್ಕೆ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಶ್ರೀಮತಿ ನಮಿತಾ ಕೆ.ಆರ್, ಸಹ ಕಾರ್ಯಕ್ರಮಾಧಿಕಾರಿ ಸಂದೀಪ್ ಐ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸ್ವಯಂಸೇವಕಿ ಕುಮಾರಿ ಅಕ್ಷಯ ನಿರ್ವಹಿಸಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ನಮಿತಾ ಕೆ.ಆರ್. ಸ್ವಾಗತಿಸಿ, ಸ್ವಯಂಸೇವಕ ಧನುಷ್ ಕೆ ಎನ್ ಧನ್ಯವಾದಗೈದರು.