24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕಣಿಯೂರು ವಲಯದ ಮೈರೋಲ್ತಡ್ಕ, ಮೊಗ್ರು, ಬಂದಾರು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಕಣಿಯೂರು: ಹಡಿಳು ಬಿದ್ದಿರುವ ಕೃಷಿ ಭೂಮಿಯನ್ನು ಅಭಿವೃದ್ದಿ ಪಡಿಸಲು ರೈತರಿಗೆ ಮನಸ್ಸು ಇದ್ದರೂ ಕೂಡ ಕೆಲ ರೈತರಲ್ಲಿ ಸಮರ್ಪಕವಾದ ದಾಖಲಾತಿಗಳು,ಬದ್ರತೆಗಳು ಇಲ್ಲದೇ ಇರುವ ಕಾರಣದಿಂದ ಆರ್ಥಿಕ ಸಹಕಾರ ಪಡೆಯಲು ಅಡಚಣೆ ಆಗುತ್ತಿತ್ತು ಇದಕ್ಕೆ ಪರ್ಯಾಯವಾಗಿ ಪ್ರಗತಿ ಬಂಧು ಗುಂಪುಗಳ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳ ಮುಖೇನ ಸುಲಭ ರೀತಿಯಲ್ಲಿ ಆರ್ಥಿಕ ಚೈತನ್ಯ ನೀಡಿರುವುದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಪರಿಣಾಮ ರೈತರು ತಮ್ಮ ಕೃಷಿ ಅಭಿವೃದ್ಧಿಗೆ ಪೂರಕವಾದ ಬೋರ್ವೆಲ್ ರಚನೆ, ಪಂಪು ಸೆಟ್ ಖರೀದಿ, ನೀರಾವರಿಗೆ ಪೂರಕವಾದ ಸೌಲಭ್ಯಗಳ ಅಳವಡಿಕೆ ಮಾಡಿಕೊಂಡಿದ್ದಾರೆ. ತತ್ಪರಿಣಮವಾಗಿ ಆರ್ಥಿಕ ಅಭಿವೃದ್ಧಿಯನ್ನ ಕೊಂಡುಕೊಳ್ಳುತ್ತ ನೆಮ್ಮದಿಯ ಜೀವನ ನಡೆಸುವಂತೆ ಆಗಿದೆ ಎಂದು ದ.ಕ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಕಣಿಯೂರು ವಲಯದ ಮೈರೊಳತಡ್ಕ, ಮೋಗ್ರು, ಬಂದಾರು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಹಾಗು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ರೈತರು ಮಿಶ್ರ ಬೆಳೆಗೆ ಆದ್ಯತೆಯನ್ನು ನೀಡಬೇಕು ಬಂದಾರು ಗ್ರಾಮ ಅತ್ಯಧಿಕ ತರಕಾರಿ ಬೆಳೆಯುವ ಗ್ರಾಮಗಳಲ್ಲಿ ಒಂದಾಗಿತ್ತು ಎಂದು ನೆನಪಿಸಿದರು ವಾರದ ಆದಾಯ, ತಿಂಗಳ ಆದಾಯಕ್ಕೆ ಪೂರಕವಾಗಿ ಬೆಳೆಗಳನ್ನು ಬೆಳೆಯಬೇಕು. ತಾಯಿಯ ಸ್ಥಾನದಲ್ಲಿ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ನಿಂತು ಪಾಲುದಾರರ ಪರಿವರ್ತನೆಗೆ ವಿವಿಧ ಕಾರ್ಯಕ್ರಮಗಳನ್ನು ನೀಡಿದ್ದಾರೆ ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಸಮಾಜದ ಸ್ವಾಸ್ಥ್ಯ ಕೆಡಿಸುವ ಚಟುವಟಿಕೆಗಳಲ್ಲಿ ಯಾರು ಕೂಡಾ ಕೈ ಜೋಡಿಸಬಾರದು ಎಂದು ಕರೆ ನೀಡಿದರು. ಒಳ್ಳೆಯವರ ಸಹವಾಸ ಮಾಡಬೇಕು. ಇದರಿಂದ ಒಗ್ಗಟ್ಟು, ಸಮಾನತೆ ಅಭಿವೃದ್ಧಿಗೆ ಪೂರಕವಾದ ಚಿಂತನೆಗಳು ಹುಟ್ಟಿಕೊಳ್ಳುತ್ತದೆ ಎಂದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಯುವ ಉದ್ಯಮಿ ಜಯಪ್ರಕಾಶ್ ಕಡಮ್ಮಜೆ ಯವರು ತಾಯಿಯಾದವಳು ಮನೆಯ ಎಲ್ಲಾ ಜವಾಬ್ದಾರಿಯನ್ಉ ಸದ್ದಿಲ್ಲದೆ ನಿಭಾಯಿಸುತ್ತಾಳೆ ಇದೇ ಮಾದರಿಯಲ್ಲಿ ಒಕ್ಕೂಟದ ಪದಾಧಿಕಾರಿಗಳು ಗುಂಪಿನ ಸದಸ್ಯರರಿಗೇ ಸೇವೆಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು ಜವಾಬ್ದಾರಿ ತೆಗೆದುಕೊಂಡು ಸಮಾಜದಲ್ಲಿ ಸಮಾಜ ಮುಖಿ ಕೆಲಸ ಮಾಡುವ ವೇಳೆ ಹೊಗಳಿಕೆಯ ಜೊತೆಗೆ ತೆಗಳಿಕೆ ಕೂಡ ಬರುತ್ತದೆ ಎಲ್ಲವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ವಿವರಿಸಿದರು.


ವೇದಿಕೆಯಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಕಂಡಿಗ, ಪ್ರಗತಿ ಪರ ಕೃಷಿಕ ಲಿಂಗಪ್ಪ ಪೋಯ್ಯೋಲೆ , ಧರ್ಣಪ್ಪ ಗೌಡ ಅಂಡಿಲ, ಬಾಬು ಗೌಡ ಮಡ್ಯಾಳಕಂಡ, ನೂತನ ಒಕ್ಕೂಟದ ಅಧ್ಯಕ್ಷರುಗಳಾದ ಗಂಗಾಧರ ಪೂಜಾರಿ, ವಿಜಯ, ಸುಂದರ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷರಾದ ಲೋಕೇಶ್, ಶ್ರೀಲತಾ, ಉಪಸ್ಥಿತರಿದ್ದರು.

ಸಭಾ ಅಧ್ಯಕ್ಷತೆಯನ್ನು ಮೈರೋಲ್ತಡ್ಕ ಒಕ್ಕೂಟದ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ ವಹಿಸಿದ್ದರು. ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ವಲಯ ಮೇಲ್ವಿಚಾರಕ ಶಿವಾನಂದ ಸ್ವಾಗತಿಸಿದರು, ವೆಂಕಟರಮಣ ಗೌಡ ಬಾಳೆಹಿತ್ಲು ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿಗಳಾದ ಶ್ರೀಮತಿ ಚಂದ್ರಕಲಾ, ಹಾಗೂ ನಿರಂಜನ್ ಸಹಕರಿಸಿದರು.

Related posts

ಬಳಂಜ ಬದಿನಡೆ ಕ್ಷೇತ್ರಕ್ಕೆ ಶ್ರೀ ಸಾಯಿ ಗುರೂಜಿ ಭೇಟಿ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್ ಬೆಳ್ತಂಗಡಿ ತಾಲೂಕು ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ನಡ: ಪರಾರಿ ನಿವಾಸಿ ಅರುಣ್ ನಿಧನ

Suddi Udaya

ಜೆಸಿಐ ಬೆಳ್ತಂಗಡಿಯಿಂದ ಜೆಜೆಸಿ ತ್ರಿಷಾರವರಿಗೆ ಗೌರವರ್ಪಣೆ

Suddi Udaya

ಬೆಳಾಲು ಶ್ರೀ ಧ. ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಹಿಂದಿ ದಿವಸ ಆಚರಣೆ

Suddi Udaya

ದ.ಕ. ಸಹಕಾರಿ ಹಾಲು ಒಕ್ಕೂಟದಿಂದ ನಂದಿನಿ ಪ್ರಿಮಿಯಮ್ ಪ್ರೊಬಯಾಟಿಕ್ ಮೊಸರು ಬಿಡುಗಡೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ