September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅ.25: ‘ಅನಾಮಧೇಯ ಅಧ್ಯಾಪಕನ ಆತ್ಮಚರಿತ್ರೆ’ ಕೃತಿ ಲೋಕಾರ್ಪಣೆ, ಹಾಗೂ ತಾಳಮದ್ದಳೆ ಕಾರ್ಯಕ್ರಮ

ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವು ರಜತಪರ್ವ ಸರಣಿಯ ಅಂಗವಾಗಿ ಯಕ್ಷದೀವಿಗೆ ತುಮಕೂರು ಇವರ ಸಹಯೋಗದಲ್ಲಿ ಅ. 25 ರಂದು ಸಂಜೆ 4-30ರಿಂದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಬರೆಂಗಾಯ, ನಿಡ್ಲೆ ಇಲ್ಲಿ ಕೃತಿ ಲೋಕಾರ್ಪಣೆ ಹಾಗೂ ತಾಳಮದ್ದಳೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಗಳಲ್ಲಿ 40 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕಡಂಬಿಲ ಭೀಮ ಭಟ್ಟರ ಜೀವನಕಥನ ‘ಅನಾಮಧೇಯ ಅಧ್ಯಾಪಕನ ಆತ್ಮಚರಿತ್ರೆ’ (ನಿರೂಪಣೆ: ಆರತಿ ಪಟ್ರಮೆ) ಕೃತಿಯನ್ನು ಬಹುಶ್ರುತ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ ಅನಾವರಣಗೊಳಿಸಲಿದ್ದಾರೆ.

ಕೃತಿಕಾರ ಭೀಮ ಭಟ್ ಈ ಸಂದರ್ಭ ಉಪಸ್ಥಿತರಿರುವರು.

ಕಾರ್ಯಕ್ರಮದ ಅಂಗವಾಗಿ ‘ಸ್ಯಮಂತಕಮಣಿ’ ಎಂಬ ಯಕ್ಷಗಾನ ತಾಳಮದ್ದಳೆ ಜರುಗಲಿರುವುದು. ಹಿಮ್ಮೇಳದಲ್ಲಿ ಭಾಗವತರಾಗಿ ಮತ್ತೂರು ರಮೇಶ ಭಟ್, ಬಿ. ಜನಾರ್ದನ ತೋಳಾಡಿತ್ತಾಯ, ಪಿ. ಜಿ. ಜಗನ್ನಿವಾಸರಾವ್ ಪುತ್ತೂರು ಹಾಗೂ ಮಾ ಸಂವೃತ ಶರ್ಮಾ ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ಡಾ. ಎಂ. ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್, ಡಾ. ಸಿಬಂತಿ ಪದ್ಮನಾಭ ಕೆ.ವಿ. ಹಾಗೂ ಆರತಿ ಪಟ್ರಮೆ ಪಾತ್ರನಿರ್ವಹಿಸಲಿದ್ದಾರೆ.

ಆಸಕ್ತ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕರಾದ ಉಜಿರೆ ಅಶೋಕ ಭಟ್ ಹಾಗೂ ಕಾರ್ಯಕ್ರಮದ ಸಂಯೋಜಕರಾದ ವಿಷ್ಣು ಮರಾಠ ನಿಡ್ಲೆ ತಿಳಿಸಿದ್ದಾರೆ.

Related posts

ಕಣಿಯೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಯತೀಶ್ ಶೆಟ್ಟಿ ಪಣೆಕ್ಕರ ಆಯ್ಕೆ

Suddi Udaya

ಮಚ್ಚಿನ : ಸರಕಾರಿ ಪ್ರೌಢ ಶಾಲೆಯಲ್ಲಿ ಗಾಂಧೀ ಜಯಂತಿ ಆಚರಣೆ

Suddi Udaya

ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ ಸಂಭ್ರಮದಲ್ಲಿರುವ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ.ಮೋಹನ್ ಕುಮಾರ್ ರವರಿಂದ ಗೌರವಾರ್ಪಣೆ

Suddi Udaya

ಬಳಂಜ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ರೂ.9.02 ಲಕ್ಷ ನಿವ್ವಳ ಲಾಭ: ಸದಸ್ಯರಿಗೆ ಶೇ.65 ಬೋನಸ್‌, ಶೇ.24 ಡಿವಿಡೆಂಟ್‌ ಘೋಷಣೆ

Suddi Udaya

ಬಂದಾರು ಗ್ರಾಮ ಓಟೆಚ್ಚಾರಿನಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಮತ್ತು ಸೊತ್ತುಗಳಿಗೆ ಹಾನಿ

Suddi Udaya

ಬಾಲಕ ಸುಮಂತ್ ಸಾವು ಪ್ರಕರಣ: ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆ ಆರಂಭ

Suddi Udaya
error: Content is protected !!