24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ರಾಜ್ಯಾದ್ಯಂತ ನಂದಿನಿ ಹಾಲಿನ ಬೆಲೆ ಏರಿಕೆ: ಲೀಟರ್ ಗೆ 2 ರೂ ಹೆಚ್ಚಳ

ಬೆಂಗಳೂರು: ರಾಜ್ಯಾದ್ಯಂತ ನಂದಿನಿ ಹಾಲಿನ ಬೆಲೆ ಏರಿಕೆ ಮಾಡಲಾಗಿದೆ. ಪ್ರತಿ ಲೀಟ‌ರ್ ಗೆ 2 ರೂಪಾಯಿ ಹೆಚ್ಚಿಸಲಾಗಿದ್ದು ನಾಳೆಯಿಂದಲೇ ಜಾರಿಗೆ ಬರಲಿದೆ. ಬೆಲೆ ಏರಿಕೆ ಬಗ್ಗೆ ರಾಜ್ಯ ಸರಕಾರದ ವಿರುದ್ಧ ವಿರೋಧ ಪಕ್ಷ ಚಾಟಿ ಬೀಸಲಾರಂಭಿಸಿದ್ದು ಈ ಮಧ್ಯೆ ಕೆಎಂಎಫ್ ಅಧ್ಯಕ್ಷರು ಬೆಲೆ ಏರಿಕೆಗೆ ಕಾರಣ, ಸ್ಪಷ್ಟನೆ ನೀಡಿದ್ದಾರೆ.

ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ಪ್ರಸ್ತುತ ಲೀಟರ್ ಹಾಲಿಗೆ 42 ರೂ. ಇದ್ದು, ಇದಕ್ಕೆ 2 ರೂ. ಹೆಚ್ಚಳ ಮಾಡಲಾಗುವುದು. ಈ ಪರಿಷ್ಕೃತ ದರಗಳು ಹಾಲಿಗೆ ಮಾತ್ರ ಅನ್ವಯವಾಗಲಿದೆ. ಆದರೆ ಗ್ರಾಹಕರಿಗೆ ಹೆಚ್ಚುವರಿಯಾಗಿ ಪ್ರತಿ ಅರ್ಧ ಲೀಟ‌ರ್ (500 ಎಂಎಲ್) ಮತ್ತು ಒಂದು ಲೀಟರ್ (1000 ಎಂಎಲ್) ಪ್ಯಾಕೆಟ್‌ಗಳಿಗೆ ಮಾತ್ರ 50 ಮಿಲಿ ಲೀಟ‌ರ್ ಹಾಲನ್ನು ಹೆಚ್ಚುವರಿ ನೀಡುವುದರೊಂದಿಗೆ ಪ್ರತಿ ಪ್ಯಾಕೆಟ್‌ಗಳ ದರವನ್ನು 2 ರೂಪಾಯಿಯಂತೆ ಹೆಚ್ಚಳ ಮಾಡಲಾಗುತ್ತಿದೆ ಎಂದಿದ್ದಾರೆ.

ನಂದಿನಿ ಉತ್ಪನ್ನಗಳಾದ ಮೊಸರು, ಲಸ್ಸಿ, ಇತರ ಉತ್ಪನ್ನಗಳಲ್ಲಿ ಏರಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Related posts

ವಾಣಿ ಕಾಲೇಜು: ಸಮಾನ ನಾಗರಿಕ ಸಂಹಿತೆ ಮಾಹಿತಿ ಉಪನ್ಯಾಸ

Suddi Udaya

ಜ.28 ರಂದು ಉಜಿರೆಯ ಆರು ಕೇಂದ್ರದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆ

Suddi Udaya

ಉಜಿರೆಯಲ್ಲಿ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಸಭೆ : ಕೆ.ಪಿ.ಸಿ.ಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್‌ ಭಾಗಿ

Suddi Udaya

ಹೊಸಪಟ್ಣ ಹಾಲು ಉ.ಸ. ಸಂಘ: ಮಹಾಸಭೆ

Suddi Udaya

ಸುನ್ನತ್ ಕೆರೆ ಅಲ್ ಮಸ್ಜಿದುಲ್ ಹುದಾ ಜುಮಾ‌ ಮಸ್ಜಿದ್ ನ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕೊಯ್ಯೂರು: ಶ್ರೀ ಕೃಷ್ಣ ಜನ್ಮಷ್ಟಮಿ ಸಮಿತಿ ಹಾಗೂ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!