ಬೆಳ್ತಂಗಡಿ: ಕೆಂಪೇಗೌಡ ವ್ಯಕ್ತಿಯಲ್ಲ,ವಿಶೇಷ ಶಕ್ತಿ “ಕೆಂಪೇಗೌಡ ಒಕ್ಕಲಿಗರ ನಾಯಕ ಮಾತ್ರವಲ್ಲ,ಅವರು ಎಲ್ಲಾ ಸಮಾಜದ ನಾಯಕರು ಹೌದು, ಅವರು ವ್ಯಕ್ತಿಯಲ್ಲ ಅದೊಂದು ವಿಶೇಷ ಶಕ್ತಿ, ಎಂದು ತಾಲೂಕು ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಕೆ. ಬಾಲಕೃಷ್ಣ ಗೌಡ ಹೇಳಿದರು.
ಅವರು ರಾಷ್ಟ್ರೀಯ ಹಬ್ಬಗಳ ಹಾಗೂ ಮಹಾಪುರುಷರ ಜಯಂತಿ ಆಚರಣೆ ಸಮಿತಿ ವತಿಯಿಂದ ಲಾಯಿಲದ ಸಂಗಮ ಸಭಾಭವನದಲ್ಲಿ ಜೂ.27ರಂದು ಜರಗಿದ ಕೆಂಪೇಗೌಡ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ತಾಲೂಕು ಅಧ್ಯಕ್ಷ ಕುಶಾಲಪ್ಪ ಗೌಡ ಪಿ.ಮಾತನಾಡಿ “ಕೆಂಪೇಗೌಡರ ಪ್ರೇರಣೆ ಎಲ್ಲರಿಗೂ ಮಾದರಿ” ಎಂದರು.
ಪ್ರಧಾನ ಭಾಷಣಕಾರ ವಾಣಿ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಯದುಪತಿ ಗೌಡ ಮಾತನಾಡಿ “ಕೆಂಪೇಗೌಡರ ಆಧುನಿಕ ಕಲ್ಪನೆಯ ಬೆಂಗಳೂರು ಲಕ್ಷಾಂತರ ಜನರಿಗೆ ಆಶ್ರಯ ನೀಡುತ್ತಿದೆ.ಐದು ಶತಮಾನಗಳ ಹಿಂದೆ ಊಹೆಗೂ ನಿಲುಕದಂತ ಯೋಜನೆ ರೂಪಿಸಿದ ಅವರು ಇತಿಹಾಸವನ್ನು ನಿರ್ಮಾಣ ಮಾಡಿದ್ದಾರೆ ಎಂದರು.
ತಹಸೀಲ್ದಾರ್ ಪೃಥ್ವಿ ಸಾನಿಕಂ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರಾಜೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಯಶೋಧರ, ಎಸ್ಸೆಸ್ಸೆಲ್ಸಿ ಯಲ್ಲಿ ಒಕ್ಕಲಿಗ ಸಮುದಾಯದಲ್ಲಿ ಅಧಿಕ ಅಂಕ ಗಳಿಸಿ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕೆಂಪೇಗೌಡರ ಜನ್ಮದಿನಚಾರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ,ಚಿತ್ರಕಲಾ ಹಾಗೂ ಪೈಂಟಿಗ್ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು. ತಾಪಂ ಇಒ ಭವಾನಿ ಶಂಕರ್ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆಯ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು. ಕಂದಾಯ ಇಲಾಖೆಯ ಹೇಮಾ ವಂದಿಸಿದರು.