22.8 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿ

ನಾವೂರು ಕೈಕಂಬ ಪ್ರದೇಶದ ಲಾಯಿಲ- ಕಿಲ್ಲೂರು ಪಿಡ್ಲೂಡಿ ರಸ್ತೆ ಬದಿಯ ಚರಂಡಿಯಲ್ಲಿ ತುಂಬಿದ ಹೂಳು:ಚರಂಡಿ ಹೂಳು ತೆಗೆದ ಯುವ ಉದ್ಯಮಿ ಅನಿಲ್ ಎಂ.ಜೆ ನರ್ನೊಟ್ಟು : ಸಾರ್ವಜನಿಕರ ಪ್ರಶಂಸೆ

ನಾವೂರು ಗ್ರಾಮದ ಕೈಕಂಬ ಪ್ರದೇಶದ ಲಾಯಿಲ- ಕಿಲ್ಲೂರು ಪಿಡ್ಲೂಡಿ ರಸ್ತೆ ಬದಿಯ ಚರಂಡಿಯಲ್ಲಿ ಹೂಳು ತುಂಬಿ ಮಳೆ ನೀರು ರಸ್ತೆಯಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಯುವ ಉದ್ಯಮಿ ಅನಿಲ್ ಎಂ.ಜೆ ನರ್ನೊಟ್ಟು ತನ್ನ ಸ್ವಂತ ಜೆಸಿಬಿ ಮೂಲಕ ಚರಂಡಿ ಹೂಳು ತೆಗೆದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ನಾವೂರು ಗ್ರಾಮದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು , ಮಳೆಯ ನೀರು ಚರಂಡಿಯಲ್ಲಿ ಹರಿಯುವ ಬದಲಿಗೆ ರಸ್ತೆಯಲ್ಲಿ ಹರಿಯುತ್ತಿತ್ತು. ಮಳೆಗಾಲ ಆರಂಭಕ್ಕೆ ಮುನ್ನ ಚರಂಡಿಯ ಹೂಳು ಎತ್ತಿ ಮಳೆಯ ನೀರು ಸುಗಮವಾಗಿ ಸಾಗಲು ಅವಕಾಶ ಮಾಡಿಕೊಡಬೇಕಾದ

ನಾವೂರು ಗ್ರಾಮ ಪಂಚಾಯತ್ ಮತ್ತು ಪಿಡ್ಲೂಡಿ ಇಲಾಖೆ ಕಣ್ಣಿದ್ದು ಕುರುಡರಂತೆ ವರ್ತಿಸಿತ್ತು. ಇದರಿಂದ ಬೆಸೆತ್ತ ನಾವೂರು ಗ್ರಾಮದ ಯುವ ಉದ್ಯಮಿ ಅನಿಲ್ ಎಂ.ಜೆ ರವರು ತನ್ನ ಸ್ವಂತ ಜೆಸಿಬಿ ಮೂಲಕ ಚರಂಡಿಯ ಹೂಳು ಎತ್ತಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರು. ಅವರಿಗೆ ಸ್ಥಳೀಯ ಉದ್ಯಮಿಗಳು ಹಾಗೂ ರಿಕ್ಷಾ ಚಾಲಕ , ಮಾಲೀಕರು ಸಾಥ್ ನೀಡಿದರು.

ಉದ್ಯಮಿ ಅನಿಲ್ ಎಂ.ಜೆ ಅವರಿಗೆ ಕೈಕಂಬ ಜನರಲ್ ಸ್ಟೋರ್ ನ ಕೃಷ್ಣಪ್ಪ ಗೌಡ ದಡ್ಡು , ಕೋಟ್ಯಾನ್ ಚಿಕನ್ ಸೆಂಟರ್ ನ ಪ್ರವೀಣ್ ಕೋಟ್ಯಾನ್ , ರಿಕ್ಷಾ ಚಾಲಕ , ಮಾಲೀಕರಾದ ಓಬಯ್ಯ ಗೌಡ ಕುಂಡಡ್ಕ , ದಿನೇಶ್ ಗೌಡ ಕುಪ್ಲೋಟ್ಟು , ನವೀನ್ ಪೂಜಾರಿ ಮಲ್ಲಡ್ಕ , ಸಂತೋಷ್ ಕುಲಾಲ್ ಕಾರಿಂಜ , ಮೋಹನ್ ಕೊರಂಡ , ವಿಶ್ವನಾಥ ಉಲ್ಲಂಜ , ಸ್ಥಳೀಯರಾದ ಸುರೇಂದ್ರ ಪೂಜಾರಿ ಕೈಕಂಬ ಸಹಕಾರ ನೀಡಿದರು. ಉದ್ಯಮಿ ಅನಿಲ್ ಎಂ.ಜೆ ಹಾಗೂ ಸ್ಥಳೀಯರ ಕಾರ್ಯ ನಾವೂರು ಗ್ರಾಮ ಪಂಚಾಯತ್ ಹಾಗೂ ಪಿಡ್ಲೂಡಿ ಇಲಾಖೆಗೆ ಮುಜುಗರ ಪಡುವಂತೆ ಆಗಿದೆ.

Related posts

ಕಳೆಂಜ: ಕೊತ್ತೋಡಿ ನಿವಾಸಿ ಸುಂದರ ಗೌಡ ನಿಧನ

Suddi Udaya

ಮಚ್ಚಿನ ಜಲಾಯನ ಸಮಿತಿಯಿಂದ ಅರ್ಹ ಫಲಾನುಭವಿಗಳಿಗೆ ಕೋಳಿಮರಿ ವಿತರಣೆ

Suddi Udaya

ಪೆರಿಂಜೆ : ಭಗವಾನ್ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ಮಂಗಲಪ್ರವಚನ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಮರೋಡಿ: ಸಾಕು ನಾಯಿಗಳಿಗೆ ಉಚಿತ ಹುಚ್ಚು ರೋಗ ನಿರೋಧಕ ಲಸಿಕಾ ಕಾರ್ಯಕ್ರಮ

Suddi Udaya

ಪಟ್ರಮೆ: ವಿಷ್ಣುಮೂರ್ತಿ ದೇವಸ್ಥಾನದ ಹಿಂಭಾಗದ ತಡೆಗೋಡೆ ಕುಸಿತ

Suddi Udaya
error: Content is protected !!