23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಜೈನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ಬೆಳ್ತಂಗಡಿ: ದ.ಕ ಮತ್ತು ಉಡುಪಿ ಜಿಲ್ಲೆಯ ಜೈನ ಧರ್ಮೀಯ ವಿದ್ಯಾರ್ಥಿಗಳಿಗೆ ಕೆಲ್ಲಗುತ್ತು ಸಬ್ರಬೈಲು ಕಿನ್ನಮ್ಮ ಯಾನೆ ಗುಣವತಿ ಅಮ್ಮ ಮೆಮೋರಿಯಲ್ ಟ್ರಸ್ಟ್ (ರಿ) ಬೆಳ್ತಂಗಡಿ ಹಾಗೂ ಶ್ರಾವಕ ಬಂಧುಗಳ ಸಹಕಾರದಿಂದ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಕಳೆದ ಹಲವಾರು ವರ್ಷಗಳಿಂದ ನೀಡುತ್ತಾ ಬರಲಾಗುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನವನ್ನು ನೀಡಲಾಗುತ್ತಿದೆ.

ಅಂತೆಯೇ 2024.25 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಜೈನ ಧರ್ಮೀಯ ವಿದ್ಯಾರ್ಥಿಗಳನ್ನು 2024ರ ಸೆಪ್ಟೆಂಬರ್ 21ರಂದು ಶ್ರೀ ಕ್ಷೇತ್ರ ಹೊಂಬುಜದ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಶ್ರೀಮದ್‌ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿದ್ಯಾರ್ಥಿ ಪ್ರೋತ್ಸಾಹಧನವನ್ನು ನೀಡಿ ಪ್ರೋತ್ಸಾಹಿಸಲಾಗುವುದು.

ಪ್ರಸ್ತುತ ವರ್ಷದಲ್ಲಿ ಎಸ್.ಎಸ್.ಎಲ್.ಸಿಗಿಂತ ಮೇಲ್ಪಟ್ಟು ಪಿಯುಸಿ, ಪದವಿ, ಐಟಿಐ, ಪಾಲಿಟೆಕ್ನಿಕ್, ಬಿಬಿಎಂ, ಇಂಜಿನಿಯರಿಂಗ್, ವೈದ್ಯಕೀಯ ಇನ್ನಿತರ ವ್ಯಾಸಂಗವನ್ನು ಮುಂದುವರಿಸುತ್ತಿರುವ ವಿದ್ಯಾರ್ಥಿಗಳು ಮಾತ್ರ ನಿಗದಿತ ಅರ್ಜಿ ನಮೂನೆಯಲ್ಲಿಯೇ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಶ್ರೀ ರತ್ನತ್ರಯ ಜೈನತೀರ್ಥ ಕ್ಷೇತ್ರದ ಕಛೇರಿಯಲ್ಲಿ ಪಡೆದುಕೊಳ್ಳುವುದು ಮತ್ತು ಅರ್ಜಿಯೊಂದಿಗೆ ಪ್ರಸ್ತುತ ಕಲಿಯುತ್ತಿರುವ ಸಂಸ್ಥೆಯಿಂದ ವ್ಯಾಸಂಗ ಪ್ರಮಾಣಪತ್ರ, ಕಳೆದ ವರ್ಷ ಕಲಿತು ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿಯ ಯಥಾಪ್ರತಿ, ವಿದ್ಯಾರ್ಥಿಯ ಮನೆ ವಿಳಾಸ, ವಿದ್ಯಾರ್ಥಿಯ ಆಧಾರ್ ಪ್ರತಿ, ಸಂಪರ್ಕ ಸಂಖ್ಯೆ, ತಂದೆ ಮತ್ತು ತಾಯಿಯ ಹೆಸರು ನಮೂದಿಸಿ ಇವರಿಬ್ಬರಲ್ಲಿ ಒಬ್ಬರ ಸಹಿಯೊಂದಿಗೆ ಆಗಸ್ಟ್ 31ರ ಒಳಗೆ ಕೆ.ಜಯವರ್ಮರಾಜ್ ಬಳ್ಳಾಲ್, ಮ್ಯಾನೇಜಿಂಗ್ ಟ್ರಸ್ಟಿ, ಕೆಲ್ಲಗುತ್ತು ಸಬರಬೈಲು ದಿ.ಕಿನ್ಯಮ್ಮ ಯಾನೆ ಗುಣವತಿಯಮ್ಮ ಮೆಮೋರಿಯಲ್ ಟ್ರಸ್ಟ್ (ರಿ) ಶ್ರೀ ರತ್ನತ್ರಯ ತೀರ್ಥ ಕ್ಷೇತ್ರ ಜೈನ್‌ಪೇಟೆ ಬೆಳ್ತಂಗಡಿ 574214 ದ.ಕ ಈ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 08256-233577 ಅಥವಾ 9448180439 ಸಂಖ್ಯೆಯ ದೂರವಾಣಿಯನ್ನು ಸಂಪರ್ಕಿಸಬಹುದೆಂದು ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ಜಯವರ್ಮರಾಜ್ ಬಳ್ಳಾಲ್‌ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

Related posts

ಮಂಜುಶ್ರೀ ಭಜನಾ ಮಂಡಳಿ ಕುಂಡದಬೆಟ್ಟು ನೂತನ ಅಧ್ಯಕ್ಷರಾಗಿ ಕೆ ವೈ ರವಿಕುಮಾರ್, ಕಾರ್ಯದರ್ಶಿಯಾಗಿ ತನಿಯಪ್ಪ ರಾಣ್ಯ ಆಯ್ಕೆ

Suddi Udaya

ನಾವೂರು ಗ್ರಾ.ಪಂ. ಕಾಯಿದೆ ಮತ್ತು ಮಕ್ಕಳ ಹಕ್ಕುಗಳ ಭಿತ್ತಿಪತ್ರ ಬಿಡುಗಡೆ

Suddi Udaya

ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಈದ್ ಆಚರಣೆ

Suddi Udaya

ಮರೋಡಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಯುವ ನಾಯಕ ರತ್ನಾಕರ ಬುಣ್ಣನ್ , ಉಪಾಧ್ಯಕ್ಷರಾಗಿ ಶುಭರಾಜ್ ಹೆಗ್ಡೆ ಅವಿರೋಧವಾಗಿ ಆಯ್ಕೆ

Suddi Udaya

ಕೊಕ್ಕಡ: ಹಾರ ನಿವಾಸಿ ಮೋಹನ ಗೌಡ ನಿಧನ

Suddi Udaya

ಬಳಂಜ ವಾಲಿಬಾಲ್ ಕ್ಲಬ್ ಸಹಯೋಗದೊಂದಿಗೆ, ಇಕೋಫ್ರೆಶ್ ಎಂಟರ್ಪ್ರೈಸಸ್ ವತಿಯಿಂದ ಹೊನಲು ಬೆಳಕಿನ ಪುರುಷರ ಬಿಡ್ಡಿಂಗ್ ಮಾದರಿಯ ವಾಲಿಬಾಲ್ ಪಂದ್ಯಾಟ

Suddi Udaya
error: Content is protected !!