September 6, 2026
ಆಯ್ಕೆಗ್ರಾಮಾಂತರ ಸುದ್ದಿತಾಲೂಕು ಸುದ್ದಿವರದಿ

ಉಜಿರೆ ಯುವವಾಹಿನಿ ಸಂಚಲನ ಸಮಿತಿಯ ಅಧ್ಯಕ್ಷರಾಗಿ ರಿತೇಶ್ ರೆಂಜಾಳ ಮತ್ತು ಕಾರ್ಯದರ್ಶಿಯಾಗಿ ಉದಯ ಮಾಚಾರ್ ಆಯ್ಕೆ‌

ಉಜಿರೆ: ಇಲ್ಲಿನ ಯುವವಾಹಿನಿ ಸಂಚಲನ ಸಮಿತಿಯ ವತಿಯಿಂದ ನಡೆದ 3ನೇ ವರ್ಷದ ಗುರುಪೂಜಾ ಕಾರ್ಯಕ್ರಮದ ನಂತರ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ರಿತೇಶ್ ರೆಂಜಾಳ ಮತ್ತು ನೂತನ ಕಾರ್ಯದರ್ಶಿಯಾಗಿ ಉದಯ ಮಾಚಾರ್ ಇವರನ್ನು ಆಯ್ಕೆಮಾಡಲಾಯಿತು.

ಈ ಸಂದರ್ಭದಲ್ಲಿ ಯುವವಾಹಿನಿಯ ಬೆಳ್ತಂಗಡಿ ಘಟಕದ ಅಧ್ಯಕ್ಷ ಸದಾಶಿವ ಊರ, ಶ್ರೀ ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷರಾದ ಜಯವಿಕ್ರಮ ಕಲ್ಲಾಪು, ಉಜಿರೆ ಯುವವಾಹಿನಿ ಸಂಚಲನ ಸಮಿತಿಯ ಅಧ್ಯಕ್ಷರಾದ ಕಿಶೋರ್ ಪೆರ್ಲ, ಉಜಿರೆ ಗುರು ನಾರಾಯಣ ಸೇವಾ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್ ಬರಮೇಲು, ಯುವ ವಾಹಿನಿಯ ಬೆಳ್ತಂಗಡಿ ಘಟಕದ ನಿರ್ದೇಶಕರಾದ ಮನೋಜ್ ಕುಂಜರ್ಪ ಮತ್ತು ಇತರರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

Related posts

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪುರಾಣ ವಾಚನ-ಪ್ರವಚನ: ಸಮಾರೋಪ ಸಮಾರಂಭ

Suddi Udaya

ಎಕ್ಸೆಲ್ ಶೈಕ್ಷಣಿಕ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭೆಗಳಿಗೆ ಬೆಳಕು ನೀಡುವ ವಿದ್ಯಾರ್ಥಿವೇತನ ವಿತರಣೆ

Suddi Udaya

ತಣ್ಣೀರುಪಂತ ಶ್ರೀ ಶಾರದಾಂಬ ಭಜನಾ ಮಂಡಳಿಯಲ್ಲಿ ವಿದ್ಯಾರ್ಥಿಗಳಿಗೆ ವ್ವ್ಯಕ್ತಿತ್ವ ವಿಕಸನಾ ಮಾಹಿತಿ‌ ಶಿಬಿರ

Suddi Udaya

ಕೊಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನ ಮಿತ್ತಬಾಗಿಲು:ಶಿಲಾಮಯ ಧ್ವಜ ಸ್ತಂಭದ ವಿಜೃಂಭಣೆಯ ಮೆರವಣಿಗೆ

Suddi Udaya

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಸ್ವದೇಶಿ ಜಾಗೃತಿ ಮಾಹಿತಿ ಕಾರ್ಯಕ್ರಮ

Suddi Udaya

ಪದ್ಮುಂಜ ದಾಮೋದರ ನಾಯ್ಕ್ ರವರ ಚಿಕಿತ್ಸಾ ನೆರವಿಗೆ ಮನವಿ

Suddi Udaya
error: Content is protected !!