ಬೆಳ್ತಂಗಡಿ: ಧಾರಾಕಾರ ಮಳೆಗೆ ಸರಳಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ಹಂಚು ಕುಸಿತಗೊಂಡಿದ್ದರ ಬಗ್ಗೆ ಸುದ್ದಿ ಉದಯ ವೆಬ್ ಸೈಟ್ ನಲ್ಲಿ ವರದಿಯನ್ನು ಪ್ರಕಟಿಸಲಾಗಿತ್ತು ಇದೀಗ ಬೆಳ್ತಂಗಡಿ ತಾ.ಪಂ. ಮುಖ್ಯಾಧಿಕಾರಿ ಭವಾನಿ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಕರೆಸಿ ತರಾಟೆಗೆ ತೆಗೆದುಕೊಂಡು ಒಂದು ವಾರದ ಒಳಗೆ ಸರಿಪಡಿಸಲು ಸೂಚನೆಯನ್ನು ನೀಡಿದ್ದಾರೆ.
ಜು.1 ರಂದು ವಿಪರೀತ ಮಳೆಯಿಂದಾಗಿ ಸರಳಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ಹಂಚು ಕುಸಿತಗೊಂಡಿದ್ದರ ಪರಿಣಾಮ ಮಕ್ಕಳನ್ನು ತುರ್ತಾಗಿ ಬೇರೆ ಕೊಠಡಿಗೆ ಸ್ಥಳಾಂತರಿಸಿದ ಶಿಕ್ಷಕರು ಸುಮಾರು 50 ವರ್ಷಕ್ಕೂ ಹೆಚ್ಚು ಇತಿಹಾಸವುಳ್ಳ ಈ ಶಾಲೆಯ ಹಂಚು ಅತಿ ಶಿಥಿಲ ವ್ಯವಸ್ಥೆಗೆ ತಲುಪಿ ಕುಸಿತಗೊಂಡಿದೆ. ಆದಷ್ಟು ಬೇಗೆ ಸರಿಪಡಿಸುವಂತೆ ಅಧಿಖಾರಿಗಳಿಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಬಿಇಒ, ಜಿಲ್ಲಾ ಪಂಚಾಯತಿ ಇಂಜಿನಿಯರ್, ಗ್ರಾಮ ಪಂಚಾಯತಿ ಪಿಡಿಒ, ಗ್ರಾಮ ಸಹಾಯಕ, ಪಂಚಾಯತ್ ಸದಸ್ಯರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಉಪಸ್ಥಿತರಿದ್ದರು.