April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರಿಪಳ್ಳ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಗಿಡನಾಟಿ, ಹಾಗೂ ಮಾಹಿತಿ ಕಾರ್ಯಕ್ರಮ

ಬೆಳ್ತಂಗಡಿ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕು, ಗುರಿಪಳ್ಳ ಒಕ್ಕೂಟ ಮತ್ತು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಗುರಿಪಳ್ಳ ಇದರ ಸಂಯುಕ್ತ ಆಶ್ರಯದಲ್ಲಿ ವಲಯ ಅರಣ್ಯ ಇಲಾಖೆ ಬೆಳ್ತಂಗಡಿಯ ಸಹಯೋಗದೊಂದಿಗೆ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಗುರಿಪಳ್ಳದಲ್ಲಿ ಗಿಡನಾಟಿ, ವಿತರಣೆ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ಚಾಲನೆಯನ್ನು ನೀಡಿ ರಸ್ತೆ ಆಗಲಿಕರಣ, ಕಟ್ಟಡ ನಿರ್ಮಾಣ, ಕೃಷಿ ಮುಂತಾದ ಉದ್ದೇಶಗಳಿಗಾಗಿ ಪರಿಸರ ನಾಶವಾಗುತ್ತಿದೆ, ಕಾಡು ಪ್ರಾಣಿಗಳು ಊರಿಗೆ ಬರುವ ಸುದ್ದಿಗಳನ್ನು ಇಂದು ನಾವು ಪೇಪರ್ ಮತ್ತು ಮಾಧ್ಯಮಗಳಲ್ಲಿ ಆಗಾಗ ಕೇಳುತ್ತಿರುತ್ತೇವೆ, ಕಾಡುನಾಶ ಆಗಿರುವ ಪರಿಣಾಮ ಕಾಡುಪ್ರಾಣಿಗಳು ಆಹಾರವನ್ನು ಹುಡುಕಿಕೊಂಡು ನಾಡಿಗೆ ಬರುತ್ತದೆ ಹೀಗಾಗಿ ನಾವು ಕಾಡನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ಇಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ, ಇದು ಬಹಳ ಅರ್ಥಪೂರ್ಣ ಕಾರ್ಯಕ್ರಮ ನಾವು ನಮ್ಮ ನಮ್ಮ ಮನೆಗಳಲ್ಲಿ ಪರಿಸರದಲ್ಲಿ ಗಿಡಗಳನ್ನು ನಾಟಿ ಮಾಡಿ ಅವುಗಳನ್ನು ಪ್ರೀತಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಇದರಿಂದ ನಮ್ಮ ಪರಿಸರ ಉಳಿಯುತ್ತದೆ ನಮ್ಮ ಮಕ್ಕಳು ಮನಸ್ಸು ಮಾಡಿದರೆ ಮರ ಗಿಡಗಳನ್ನು ಬೆಳೆಸಿ ಪರಿಸರದ ಉಷ್ಣತೆಯನ್ನು ಕಾಪಾಡುವಲ್ಲಿ ಪ್ರಯತ್ನ ಮಾಡಬೇಕು ಎಂದರು.

ಶಾಲಾ ಎಸ್‌ಡಿಎಂಸಿಯ ಮಾಜಿ ಅಧ್ಯಕ್ಷರು ಪರಿಸರ ಪ್ರೇಮಿಯಾದ ಪಟವರ್ಧನ್ ರವರು ಮಾತಾಡಿ ಪ್ರತಿಯೊಬ್ಬರೂ ಕೂಡ ಉನ್ನತವಾದ ಶಿಕ್ಷಣ, ದೊಡ್ಡ ದೊಡ್ಡ ಉದ್ಯೋಗ, ಮನುಷ್ಯನ ಬದುಕು ಇಂದು ಹಣದ ಹಿಂದೆ ಓಡುವಂತಹ ಮನಸ್ಥಿತಿಗೆ ನಾವು ಇಂದು ತಲುಪಿದ್ದು, ನಾವು ನಮ್ಮೊಂದಿಗೆ ಇದ್ದಂತಹ ಪರಿಸರ ಇದನ್ನು ರಕ್ಷಿಸದೆ ಇದ್ದಲ್ಲಿ ಮುಂದಕ್ಕೆ ನಾವು ಅಥವಾ ಮುಂದಿನ ತಲೆಮಾರು ಈ ಸಮಸ್ಯೆಯನ್ನು ಎದುರಿಸಿ ಮುಂದಿನ ಒಂದು ದಿನ ಮಾನವನೇ ನಾಶವಾಗಬಹುದು ಎನ್ನುವ ಎಚ್ಚರಿಕೆಯ ಮಾತನಾಡಿದರು.

ಒಕ್ಕೂಟದ ಅಧ್ಯಕ್ಷ ಗುರುರಾಜ್ ಯೋಜನೆಯ ವತಿಯಿಂದ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ ಗೌಡರವರು ಶುಭಹಾರೈಸಿದರು. ಶಾಲೆಗೆ ಉಚಿತವಾಗಿ ಸ್ಥಳವನ್ನು ದಾನ ಮಾಡಿದ ಪಾಂಡುರಂಗ ಮರಾಠೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡರು.
ಶಾಲಾ ಶಿಕ್ಷಕಿಯಾದ ಫ್ಲೋರಿನ್ ಡಿಸೋಜರವರು ಮತ್ತು ಎಸ್ ಡಿ ಎಂ ಸಿಯ ಉಪಾಧ್ಯಕ್ಷೆ ಶ್ರೀಮತಿ ಶಾಂಭ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲೆಯಲ್ಲಿ 50 ಕ್ಕೂ ಹೆಚ್ಚಿನ ಗಿಡಗಳನ್ನು ನಾಟಿ ಮಾಡಿದ್ದು 200 ಕ್ಕೂ ಹೆಚ್ಚಿನ ಗಿಡಗಳನ್ನು ಶಾಲಾ ಮಕ್ಕಳ ಪೋಷಕರಿಗೆ ಹಾಗೂ ಒಕ್ಕೂಟದ ಸದಸ್ಯರಿಗೆ ವಿತರಿಸಲಾಗಿದೆ. ಶಾಲೆಯಲ್ಲಿ ಪರಿಸರಕ್ಕೆ ಪೂರಕವಾದ ಪ್ರಬಂಧ ಸ್ಪರ್ಧೆ ಚಿತ್ರಕಲೆ ಸ್ಪರ್ಧೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿದ್ದು ಬಹುಮಾನವನ್ನು ವಿತರಿಸಲಾಯಿತು.

ಮಾಜಿ ಒಕ್ಕೂಟದ ಅಧ್ಯಕ್ಷ ಯಶೋಧರ ಹಾಗೂ ಪ್ರಸಾದ್, ತಾಲೂಕಿನ ಕೃಷಿ ಅಧಿಕಾರಿ ರಾಮ್ ಕುಮಾರ್, ಮೇಲ್ವಿಚಾರಕರಾದ ಶ್ರೀಮತಿ ಉಷಾ, ಸೇವಾಪ್ರತಿನಿಧಿಯಾದ ಶ್ರೀಮತಿ ಪುಷ್ಪವತಿ ಹಾಗೂ ಶ್ರೀಮತಿ ಸುಮತಿ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿಯಾದ ಸ್ಪೂರ್ತಿಯವರು ಸ್ವಾಗತಿಸಿ, ಸುರೇಶ್ ಧನ್ಯವಾದವಿತ್ತರು.
ಎಸ್‌ಡಿಎಂಸಿಯ ಸದಸ್ಯರು ಹಾಗೂ ಶಾಲಾ ಮಕ್ಕಳ ಪೋಷಕರು ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

Related posts

ಪುಂಜಾಲಕಟ್ಟೆ  ಕರ್ನಾಟಕ ಪಬ್ಲಿಕ್ ಶಾಲೆ : ಶಾಲಾ ಪ್ರಾರಂಭೋತ್ಸವ

Suddi Udaya

ಉಜಿರೆಯ ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಪ್ರತಿಷ್ಠಿತ ಜೈ ಜವಾನ್ ಜೈ ಕಿಸಾನ್ “ಕೃಷಿಕ ರತ್ನ” ಗೌರವ ಪ್ರಶಸ್ತಿಗೆ ಆಯ್ಕೆ

Suddi Udaya

ಶಾಲಿನಿ ಸೇವಾ ಪ್ರತಿಷ್ಠಾನ ವತಿಯಿಂದ ಶಾಲಿನಿಯ 13ನೇ ವರ್ಷದ ಪುಣ್ಯ ಸ್ಮರಣೆ

Suddi Udaya

ಧರ್ಮ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕರಾಗಿ ಪ್ರಸಾದ್ ಬೆಳಾಲು ಆಯ್ಕೆ

Suddi Udaya

ನಿವೃತ್ತ ಜಲಾನಯನ ಅಧಿಕಾರಿ ದಯಾನಂದ ಹೆಚ್. ಕುಕ್ಕೇಡಿ ನಿಧನ

Suddi Udaya

ಉಜಿರೆ: ಪಾದಚಾರಿಗಳ ಮೇಲೆ ಹರಿದ ಲಾರಿ: ಇಬ್ಬರು ಸಾವು

Suddi Udaya
error: Content is protected !!