ವೇಣೂರು : ಇಲ್ಲಿಯ ನವಚೇತನ ಆಂಗ್ಲಮಾಧ್ಯಮ ಶಾಲೆಯಲ್ಲಿ 2024-25ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಮಹಾಸಭೆಯು ಜು. 2 ರಂದು ಜರಗಿತು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಸ್ವಾಗತ ನೃತ್ಯದೊಂದಿಗೆ ವಿದ್ಯಾರ್ಥಿನಿಯರು ಸ್ವಾಗತಿಸಿದರು. ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮವು ಶುಭಾರಂಭಗೊಂಡಿತು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅರ್ಸುಲೈನ್ ಪ್ರಾನ್ಸಿಸ್ಕನ್ ಸೊಸೈಟಿಯ ಉಪಕಾರ್ಯದರ್ಶಿಯಾದ ವಂl ಭl ಜುಲಿಯಾನ ಪಾಯ್ಸ್ , ಮುಖ್ಯ ಅತಿಥಿಯಾಗಿ ಶಾಲಾ ಸಂಚಾಲಕಿ ಸಿಸ್ಟರ್ ಲಿಲ್ಲಿ ಗೋಮ್ಸ್, ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಶಾಲಿನಿ ಡಿಸೋಜಾ ಉಪಸ್ಥಿತರಿದ್ದರು. ಬಳಿಕ ಶಿಕ್ಷಕಿ ರೋಹಿಣಿ ಇವರು 2023-24ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಸಭೆಯ ವರದಿಯನ್ನು ವಾಚಿಸಿದರು.
ಎಸ್.ಎಸ್.ಎಲ್.ಸಿ ಸಾಧಕರಿಗೆ ಸನ್ಮಾನ:
2023 -24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ, ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ವಿಯೋಲಾ ಮೋರಸ್, ದ್ವಿತೀಯ ಸ್ಥಾನ ಪಡೆದ ಈಶಾನ್ ಹಾಗೂ ತೃತೀಯ ಸ್ಥಾನ ಪಡೆದ ವೈಷ್ಣವಿ ಎನ್. ಶೇಟ್ ಇವರನ್ನು ಸನ್ಮಾನಿಸಲಾಯಿತು. ಬಳಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಶಾಲಿನಿ ಡಿಸೋಜ ಶಿಕ್ಷಕ- ಶಿಕ್ಷಕೇತರ ವೃಂದದವರನ್ನು ಪರಿಚಯಿಸಿದರು. ಹಾಗೂ ಶಾಲಾ ವಿದ್ಯಾರ್ಥಿ ಮಂತ್ರಿ ಮಂಡಲವನ್ನು ಪರಿಚಯಿಸಿದರು.
ನೂತನ ಸಮಿತಿ ರಚನೆ
2024-25ನೇ ಸಾಲಿಗೆ ಶಿಕ್ಷಕ-ರಕ್ಷಕ ನೂತನ ಸಮಿತಿಯನ್ನು ರಚಿಸಲಾಯಿತು. ಉಪಾಧ್ಯಕ್ಷರುಗಳಾಗಿ ಮೋಹನ್ ಹಾಗೂ ಅರವಿಂದ ಶೆಟ್ಟಿ ಖಂಡಿಗ ಅವರನ್ನು ಆಯ್ಕೆ ಮಾಡಲಾಯಿತು. ಬಳಿಕ 2023-24ನೇ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳಿಗೆ ಕಿರು ಕಾಣಿಕೆಯನ್ನು ನೀಡಿ ಅಭಿನಂದಿಸಿದರು.
ಬಳಿಕ ಮಾತನಾಡಿದ ಮುಖ್ಯೋಪಾಧ್ಯಾಯಿನಿ ಶಾಲಿನಿ ಡಿಸೋಜಾ, ಶಾಲಾ ಕಾರ್ಯ ಚಟುವಟಿಕೆ ಹಾಗೂ ನಿಯಮಗಳ ಬಗ್ಗೆ ತಿಳಿಸಿ, ಪೋಷಕರ ಸಹಕಾರವನ್ನು ಕೋರಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅರ್ಸುಲೈನ್ ಪ್ರಾನ್ಸಿಸ್ಕನ್ ಸೊಸೈಟಿಯ ಉಪಕಾರ್ಯದರ್ಶಿಗಳಾದ ವಂ| ಭ| ಜುಲಿಯಾನ ಪಾಯ್ಸ್ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಹಾಗೂ ಕರ್ತವ್ಯಗಳನ್ನು ಮನಮುಟ್ಟುವಂತೆ ಹಲವು ನಿದರ್ಶನಗಳ ಮೂಲಕ ತಿಳಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನೂತನ ಪದಾಧಿಕಾರಿಗಳನ್ನು ಕಿರುಕಾಣಿಕೆ ನೀಡಿ ಸ್ವಾಗತಿಸಲಾಯಿತು.
ಶಿಕ್ಷಕಿ ಸರಿತಾ ನಿರೂಪಿಸಿದಕಾರ್ಯಕ್ರಮದಲ್ಲಿ ಶಿಕ್ಷಕಿ ಕಾವ್ಯ ಸ್ವಾಗತಿಸಿ, ಶಿಕ್ಷಕಿ ನಿಶ್ವಿತಾ ಧನ್ಯವಾದವಿತ್ತರು.