32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನೆರಿಯ: ಮುಚ್ಚಿರಾಲಿ ಎಂಬಲ್ಲಿ ಅಪಾಯದ ಅಂಚಿನಲ್ಲಿರುವ ಕಾಲುಸಂಕ : ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಫಾರೆಸ್ಟರ್ ಹಾಗೂ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ : ಮರವನ್ನು ತೆರವುಗೊಳಿಸುವುದಾಗಿ ಭರವಸೆ

ನೆರಿಯಾ ಗ್ರಾಮ ಪಂಚಾಯತ್ ಮುಚ್ಚಿರಾಲಿ ಎಂಬಲ್ಲಿ ಕಾಲುಸಂಕದ ಎರಡು ಬದಿ ಜರಿದು ಬೀಳುತ್ತಿದ್ದು ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆ ಮತ್ತು ಅದರ ಬದಿಯಲ್ಲಿರುವ ಅಪಾಯದಲ್ಲಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಗಮನಕ್ಕೆ ಗ್ರಾಮ ಪಂಚಾಯತ್ ಮೂಲಕ ತಿಳಿಸಿದ್ದು ಅದರಂತೆ ಜು.3 ರಂದು ಅರಣ್ಯ ಇಲಾಖೆಯ ಫಾರೆಸ್ಟ್ ರವಿಚಂದ್ರ ಮತ್ತು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ವಿಭಾಗದ ರಾಕೇಶ್ ಮತ್ತು ನೆರಿಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಮಾ, ಕಾರ್ಯದರ್ಶಿ ಅಜಿತ್ ಯಂ ಬಿ. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಬಿ ಅಶ್ರಫ್ ನೆರಿಯಾ, ಸದಸ್ಯರಾದ ರಮೇಶ್ ಕೆ.ಎಸ್. ಪಂಚಾಯತ್ ಸಿಬಂದಿಗಳಾದ ಮದುಮಲಾ ಸ್ಥಳಕ್ಕೆ ಭೇಟಿ ನೀಡಿದ್ದು ತುರ್ತು ಅಪಾಯದಲ್ಲಿರುವ ಮರವನ್ನು ತೆರವುಗೊಳಿಸುವ ಬಗ್ಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಬಾಲಕೃಷ್ಣ ಗೌಡ, ಸಂಜೀವ ಗೌಡ, ಸೋಮಪ್ಪ ಗೌಡ, ಹಾಗೂ ಇತರರು ಉಪಸ್ಥಿತರಿದ್ದರು.

Related posts

ದ್ವೀತಿಯ ಪಿಯುಸಿ ಫಲಿತಾಂಶ: ವೇಣೂರು ಕುಂಭ ಶ್ರೀ ವಿದ್ಯಾ ಸಂಸ್ಥೆಗೆ ಶೇ.100 ಫಲಿತಾಂಶ

Suddi Udaya

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರಿಂದ ಬೆಳಾಲು ಪ್ರೌಢಶಾಲೆಯ ಭೇಟಿ, ಮಕ್ಕಳೊಂದಿಗೆ ಮಾತುಕತೆ

Suddi Udaya

ಖ್ಯಾತ ಯಕ್ಷಗಾನ ಕಲಾವಿದ ಕಿರಣ್ ಪಂಜ ನಿಧನ

Suddi Udaya

ಮಡಂತ್ಯಾರು ಗಣೇಶೋತ್ಸವ ಸಮಿತಿಯ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಪಟ್ರಮೆ: ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಚಿಣ್ಣರ ಸಂಭ್ರಮ

Suddi Udaya

ಆ.29 ರಿಂದ ಸೆ.2ರ ವರೆಗೆ ಪಾಸ್​ಪೋರ್ಟ್ ಸೇವಾ ಪೋರ್ಟಲ್ ಬಂದ್

Suddi Udaya
error: Content is protected !!