September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಕರ್ನಾಟಕ ಗಮಕ ಕಲಾ ಪರಿಷತ್, ವತಿಯಿಂದ ‘ಮನೆ ಮನೆ ಗಮಕ’ ವಿನೂತನ ಕಾರ್ಯಕ್ರಮ

ಧರ್ಮಸ್ಥಳ :ಕರ್ನಾಟಕ ಗಮಕ ಕಲಾ ಪರಿಷತ್, ಬೆಳ್ತಂಗಡಿ ಇದರ ವತಿಯಿಂದ ಮನೆ ಮನೆ ಗಮಕ ಎನ್ನುವ ವಿನೂತನ ಕಾರ್ಯಕ್ರಮವು ತುಳು ಶಿವಳ್ಳಿ ಸಭಾ, ಧರ್ಮಸ್ಥಳ ವಲಯದ ಗೌರವಧ್ಯಕ್ಷರಾದ ಗಿರೀಶ ಕುದ್ರೆoತಾಯ ರ ಶಿವ ಪಾರ್ವತಿ ಕೃಪಾದಲ್ಲಿ ನಡೆಯಿತು.


ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಫ್ರೋ. ಮಧೂರು ಮೋಹನ ಕಲ್ಲುರಾಯ, ತಾಲೂಕು ಅಧ್ಯಕ್ಷರಾದ ರಾಮಕೃಷ್ಣ ಭಟ್, ನಿನ್ನಿಕಲ್ಲು, ಹಿರಿಯ ಯಕ್ಷಗಾನ ಧೂರಿಣ ಶ್ರೀ ಭುಜಬಲಿ, ತುಳು ಶಿವಳ್ಳಿ ಸಭಾ ಧರ್ಮಸ್ಥಳ ವಲಯದ ಅಧ್ಯಕ್ಷರಾದ ಡಾ. ಶ್ರೀಪತಿ ಅoರ್ಮುಡತ್ತಾಯ, ಕಾರ್ಯದರ್ಶಿ ಸುಬ್ರಹ್ಮಣ್ಯ ಪಡುವೆಟ್ನಾಯ, ಗಮಕ ಕಲಾ ಪರಿಷತ್ತಿನ ಪದಾಧಿಕಾರಿಗಳು, ಗಿರೀಶ ಕುದ್ರೆoತಾಯರ ಕುಟುಂಬ ವರ್ಗ ದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಗಮಕ ವಾಚನವನ್ನು ಜಯರಾಮ ಕುದ್ರೆoತಾಯರು, ವ್ಯಾಖ್ಯಾನವನ್ನು ಹಿರಿಯ ಕಲಾವಿದರಾದ ಸುರೇಶ ಕುದ್ರೆoತಾಯರು ಬಹಳ ರಸವತ್ತಾಗಿ ನಿರ್ವಹಿಸಿದರು. ಇವರ ಜೊತೆ ಉಡುಪಿಯ ರವರು ವ್ಯಾಖ್ಯಾನ ಕಾರರಾಗಿ ಜೊತೆಯಾದದ್ದು ವಿಶೇಷವಾಗಿತ್ತು.
ರಾಮಕೃಷ್ಣ ಭಟ್ ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಪಡುವೆಟ್ನಯರು ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ವಾಚನ, ಪ್ರವಚನ ಕಾರರನ್ನು ಹಾಗೂ ಜಿಲ್ಲಾಧ್ಯಕ್ಷರನ್ನು ಶಾಲು ಹಾಕಿ ಗೌರವಿಸಲಾಯಿತು

Related posts

ಇಂದಬೆಟ್ಟು ಬಿಜೆಪಿ ಶಕ್ತಿ ಕೇಂದ್ರದ ನೂತನ ಅಧ್ಯಕ್ಷರಾಗಿ ಶ್ರೀಕಾಂತ್ ಎಸ್ ಆಯ್ಕೆ

Suddi Udaya

ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಉಜಿರೆ ದೊಂಪದಪಲ್ಕೆ ಶಾಲಾ ಮಕ್ಕಳಿಗೆ ಕೊಡೆ ವಿತರಣೆ

Suddi Udaya

ಎಸ್.ಡಿ.ಎಂ ಕಾಲೇಜಿನಲ್ಲಿ ‘ ಇಕೋ-ವಿಷನ್ ‘ ಸಂಘ ಪದಗ್ರಹಣ ಸಮಾರಂಭ

Suddi Udaya

ಪೂಜಾ ಕಾರ್ಯಕ್ರಮದ ಊಟದ ವೇಳೆ ಕುಟುಂಬಸ್ಥರಿಂದ ಹಲ್ಲೆ, ಜೀವಬೆದರಿಕೆ ಆರೋಪ; ಧರ್ಮಸ್ಥಳ ಠಾಣೆಗೆ ದೂರು

Suddi Udaya

ಕಾರಿಂಜ ಶ್ರೀ ವನಶಾಸ್ತಾರ ಶ್ರೀ ವೀರಭದ್ರ ಸ್ವಾಮಿ ದೇವರ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಉರುವಾಲು-ಕಾಯರ್ಪಾಡಿ ಸಂಪರ್ಕ ರಸ್ತೆ ಮರು ಡಾಮರೀಕರಣ: ಶಾಸಕರಿಗೆ ಗ್ರಾಮಸ್ಥರ ಕೃತಜ್ಞತೆ

Suddi Udaya
error: Content is protected !!