25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮದ್ದಡ್ಕ, ನೇರಳಕಟ್ಟೆ, ಪಣಕಜೆ ಭಾಗದಲ್ಲಿ ಪ್ರಯೋಜನಕ್ಕೆ ಬಾರದ ಏರ್ ಟೆಲ್ ಹಾಗೂ ಬಿಎಸ್.ಎನ್.ಎಲ್ ಟವರ್: ನೆಟ್ವರ್ಕ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾದ ಸ್ಥಳೀಯರು

ಕುವೆಟ್ಟು: ಬೆಳ್ತಂಗಡಿ ತಾಲೂಕಿನ ಮದ್ದಡ್ಕದ ನಾಗರಿಕರ ಹೆಚ್ಚಿನ ಸಮಸ್ಯೆಗಳು ಇಲ್ಲಿನ ಸಾಮಾಜಿಕ ಕಾರ್ಯಕರ್ತರ, ಇಲ್ಲಿನ ಜನಪ್ರತಿನಿಧಿಗಳ ಮುತುವರ್ಜಿಯಿಂದ ಪರಿಹಾರವಾಗಿದೆ. ಆದರೆ ಇಲ್ಲಿನ ನಿವಾಸಿಗಳಿಗೆ ನೆಟ್ವರ್ಕ್ ಸಮಸ್ಯೆಯಾಗಿದ್ದು ಮದ್ದಡ್ಕ, ನೇರಳಕಟ್ಟೆ, ಪಣಕಜೆ ಭಾಗದಲ್ಲಿ ಏರ್ ಟೆಲ್ ಹಾಗೂ ಬಿಎಸ್.ಎನ್.ಎಲ್ ನ ಮೂರು ಟವರ್ ಗಳಿದ್ದು ಏನೂ ಪ್ರಯೋಜನವಿಲ್ಲದಂತಾಗಿದೆ.

ಈ ಟವರ್ ಗಳ ಅಡಿಯಲ್ಲಿ ನಿಂತರೂ ನೆಟ್ವರ್ಕ್ ಸಿಗದಿರುವುದು ಸ್ಥಳೀಯರಿಗೆ ದೊಡ್ಡ ಸಮಸ್ಯೆಯಾಗಿದೆ. ಉದ್ಯೋಗಿಗಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಈ ನೆಟ್ವರ್ಕ್ ಸಮಸ್ಯೆಯಿಂದ ಆಗುವ ತೊಂದರೆ ಅಷ್ಟಿಷ್ಟಲ್ಲ. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ವಸ್ತುಗಳನ್ನು ಡೆಲಿವೆರಿ ಬಾಯ್ ಗಳು ತಗೊಂಡು ಬಂದು ಆರ್ಡರ್ ಮಾಡಿದವರಿಗೆ ತಲುಪಿಸೋಣ ಅಂದ್ರೆ ಮನೆಯ ಮುಂಭಾಗಕ್ಕೆ ಬಂದರೂ ನೆಟ್ವರ್ಕ್ ಇಲ್ಲಾ.. ಇನ್ನು ಸಂಬಂಧ ಪಟ್ಟ ಕಂಪನಿಯ ಅಧಿಕಾರಿಗಳಿಗೆ ದೂರು ಕೊಟ್ಟು ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಮದ್ದಡ್ಕ ಆಸುಪಾಸಿನ ನಾಗರಿಕರಿಗೆ ಆಗುವ ತೊಂದರೆಯನ್ನು ಆದಷ್ಟು ಬೇಗ ನಿವಾರಿಸಬೇಕೆಂದು ಸ್ಥಳೀಯ ನಿವಾಸಿ ರಿಯಾಜ್ ಮದ್ದಡ್ಕ ತಿಳಿಸಿದ್ದಾರೆ.

Related posts

ಕಾನರ್ಪ ಪುರುಷರ ಬಳಗದ ಪುರುಷರ ರಾಶಿ ಪೂಜೆ

Suddi Udaya

ಮುಂಡಾಜೆ ಪ್ರಾ.ಕೃ.ಪ.ಸ. ಸಂಘದ ನೂತನ ವಾಸ್ತವ್ಯದ ಮನೆ, ಸಭಾಭವನ ಉದ್ಘಾಟನೆ

Suddi Udaya

ವಿಷು ಕಣಿ ಆಚರಣಾ ಸಮಿತಿಯಿಂದ ಕೇರಳ ಸಂಪ್ರಾದಾಯಿಕ ವಿಷು ಕಣಿ ಆಚರಣೆ: ಕೇರಳ ಚೆಂಡೆ ಪ್ರದರ್ಶನ, ಪೂಕಳಂ, ಮನೋರಂಜನಾ ಕಾರ್ಯಕ್ರಮ, 30 ಬಗೆಯ ಉಟೋಪಚಾರ

Suddi Udaya

ರತ್ನಮಾನಸ ವಿದ್ಯಾರ್ಥಿನಿಲಯದಲ್ಲಿ ಶಿವರಾತ್ರಿ ಆಚರಣೆ

Suddi Udaya

ದೊಂಪದಪಲ್ಕೆ ಸ.ಹಿ.ಪ್ರಾ. ಶಾಲೆಯಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನೂತನ ಮುಖ್ಯಕಾರ್ಯನಿರ್ವಹರ್ಣಾಧಿಕಾರಿಯಾಗಿ ಶಶಿಧರ ನೇಮಕ

Suddi Udaya
error: Content is protected !!